ಮುಂಜಾನೆ ಮಬ್ಬುಗತ್ತಲು. ಒಬ್ಬರ ಮುಖ ಒಬ್ಬರಿಗೆ ಸರಿಯಾಗಿ ಕಾಣತಿರಲಿಲ್ಲ. ಸಾಂವಕ್ಕೆ ಆಕಳಿಸ್ತಾ ಮೇಲೆದ್ದು. ಕೈ ಬೆರಳಿನ ಲಟಿಕ ಲಟ್ರಕ್ï ಅಂತ ಮುರಿದು, ಚಾದರ ಬದಿಗೆ ಸರಿಸಿ, ಹರಿವ್ಯಾಗಿಂದ ಚರಿಗಿ ತನ್ನಿರ ತಗೊಂಡು ಮುಖದ ಮ್ಯಾಗ ಕೈಯಾಡಿಸಿಗೊಂಡ್ಲು. ನಿದ್ದೆಗಣ್ಣಾಗಿನ ಪಿಚ್ಚು ಒಣಗಿ ಚೆಕ್ಕಿ ಆಗಿತ್ತು. ಅದು ತನ್ನೀರನಿಂದ ಹೋಗು ಹಂಗಿ ಇರಲಿಲ್ಲ. ಇದರ ಮಕಾಮಣ್ಣಾಗಡಗ್ಲಿ ಹರ್ಯಾಗೇಳುತ್ತೆ ಅದೇಟ ಪಿಚ್ಚ ಬರತೈತಿ ಕಣ್ಣಾಗ’ ಅಂತ ಗೊಣಿಗಿಕೊಂತ ನೀರೊಲಿಗೆ ಬೆಂಕಿ ಹೊತ್ತಿಸಿದ್ಲು. ನೀರ ಕಾಯುಮಟ ಅಂದ್ರ ಕೆಲಸನ ಏನೈತಿ ? ಚರಿಗಿ ತುಂಬಿ ಕೊಂಡು ಕೇರಿ ಕಡಿಗೆ ಹೆಜ್ಜೆಹಾಕಿದ್ಲು….
ಊರ ಕೇರಿ ಅಂಚಿಗೆ ಬೇವಿನ ಗಿಡದ ಬುಡಕ್ಕೆ ಯಾವನೂ ಮಲಗಿದಾಂಗ ಕಂಡು ಬಂತು. ಅವನ್ನ ನೋಡಿದ ಸಾಂವಕ್ಕ “ಅಯ್ಯೋ ಇದರ ಮೋತೆಡಗ್ಲಿ ಹೆಂಗ್ಗುರ ಚರಗಿ ತಗೊಂಡ ಕುಂಡ್ರು ಜಗದಾಗ ಇದಕ್ಕೇನ ಶನಿಬ್ಯಾನಿ ಬಂದಿತ್ತ ಯವ್ವ ಮಲಕೋಳ್ಳಾಕ” ಅಂತ ಪಿಟಿಪಿಟಿ ಅನ್ನಕೋತ ಅವನನ್ನ ಸರಿಯಾಗಿಯೂ ನೋಡದೇ ತುಂಬ ಸೆರಗ ಹಾಕ್ಕೊಂಡು ಬಿರಿಬಿರಿ ಅಂತ ಮುಂದ ಹೋದ್ಲು, ಮುಂದ ಹೋಗುದ್ಕ ಮೂಲಿಮನಿ ಕರೆವ್ವ ಪ್ರತ್ಯಕ್ಷ ಆದ್ಲು.
ಕರೆವ್ವಾ ಅಲ್ಯಾಂವನೂ ಮಲ್ಗೊಂಡಾ ನಲ್ಲ ಯಾರಂವ !!??…ಯಾರಾರ ಇರಬೇಕ ಬಿಡು” ಕರೆವ್ವ ಸಾಂವಕ್ಕನ ಮಾತನ್ನ ಹೆಚ್ಚು ತಲಿವಳಗೆ ಹಾಕ್ಕೊಳ್ಳಿಲ್ಲ. ಇಬ್ರೂ ಅದನ್ನ ಇದನ್ನ ಮಾತಾಡತಾ ಅಲ್ಲೇ ಕುಂತ್ರು. ಬೆಳಕು ಹೆಚ್ಚಾಕ್ಕೊಂತನ ಬಂತು. ಈಗ ಒಬ್ಬರ ಮುಖ ಒಬ್ರು ಸರಿಯಾಗಿ ನೋಡಬಹುದಾಗಿತ್ತು. ಎದ್ದಬರು ಹೊತ್ತನ್ಯಾಗ ಮಲಕೊಂಡಾಂವ ಎದ್ದ ಕುಂತಿದ್ದನ್ನ ನೋಡಿ ಇಬ್ರೂ ಮುಖ ಮುಚ್ಚುವಂಗ ಸೆರಗ ಹೊತಗೊಂಡು ಮನಿಕಡೆ ದಾರಿ ಹಿಡಿದ್ರು. ಕೋಟೆಪ್ಪ ಹಾಸ್ಗಿಂದ ಎದ್ದು ಮುಖದ ಮ್ಯಾಗ ಬಿಸಿನೀರಿನಿಂದ ಕೈಯಾಡ್ಸಿಗೊಂಡ, ಅಡಿಗಿ ಮನಿಯಾಗ ಗಡಿಗ್ಯಾಗಿನ ನುಚ್ಚಿನ ಹುಳಿ ”ಗಂ” ಅಂತ ಮೂಗ್ಗ ಬಡದಾಗ ಅವನ ಮೂಗಿನ ಹೊಳ್ಳಿ ಇಷ್ಟಗಲ ಅಳ್ಳಿದ್ವು, ಹೊಟ್ಟೆ ಚುರುಕ್ ಅಂತು .ನೆಲಗೊಂದಿಮ್ಯಾಲಿನ ಬುಟ್ಟಿ ಇಳಿವಿ ಇದ್ದ ನಾಲ್ಕು ರೊಟ್ಟಿ ತಗೊಂಡು ನುಚ್ಚಿಗೆ ಹಿಡಿ ಹಸಿ ಕಾರಾ ಹಚ್ಚಿಕೊಂಡು ಬಾಯಿ ತುಂಬಾ ಅಮ್ಮಾಕ ಹತ್ತಿದ.
“ಎಪ್ಪಾ ಏ ಎಪ್ಪಾ ಚರಗ್ಗೇಸ್ ನೀರ ತಗೊಂಬಾ” ಸಾವಕ್ಕನ ಧ್ವನಿಗೆ ಕೋಟೆಪ್ಪ ರೊಟ್ಟಿ ಕೆಳಗಿಟ್ಟು ನೀರು ತಗೊಂಡು ಹೊರಗ ಬಂದಾ. ಸಾವಕ್ಕ ಜಳಕಾ ಮಾಡಿ ರೊಟ್ಟಿಗೆ ಹಂಚ ಇಟ್ಲು… ಬೆಳಗಿನ ಎಂಟ ಆಗಾಕ ಬಂತು…ಹೊರಗಿನಿಂದ ಕೋಟೆಪ್ಪನ ಧ್ವನಿ ಕೇಳಿ ಬಂದು. ಸಾವಕ್ಕಾ ಏ ಸಾವಕ್ಕಾ ಇಲ್ಲಿ ನೀಡಿಸ್ಕೋಲ್ಳಾಂವ ಬಂದಾನ ನಿನ್ನಿದೇಟ ಏನಾರ ಇದ್ರ ಹಾಕಬೆ ಅಂದಾ. ಇವಕ್ಕೊಂದು ಬೆಳಕಾದ್ರ ಸಾಕ ಬಂದ$$$ ಬಿಡತಾವು. ಅನ್ನಕೋತ ಬುಟ್ಟ್ಯಾಗಿಂದ ಅಧೃ ರೊಟ್ಟಿ ತಗೊಂಡು ಹೊರ್ಗ ಬಂದ್ಲು.
ಸಾಂವಕ್ಕ ಬಗಕ್ನ್ ಬಂದಾಕೆ ಗಪ್ಪನ ಒಳಬಾಗಿಲದಾಗ ನಿಂತ್ಲು.. ನೀಡಿಸ್ಕೊಳ್ಳಾಕ ಬಂದಾಂವ ಹೊಲಗೇರಿ ಹಂತೇಕ ಮಲಗಿದವನ ಆಗಿದ್ದ. ತಲಿಮ್ಯಾಲ ವಿಕಾರವಾಗಿ ಬೆಳೆದಂಥಾ ಹೊಲಸ್ಸುಗೊದಲು, ಎದೆವರೆಗೂ ಇಳಿದ ಗಡ್ಡ, ಮೊಂಡು ಮೂಗು, ಗುದ್ದಿನಲ್ಲಡಗಿದ ಕಣ್ಣುಗಳು. ಅಕ್ರಾಳ ಮುಖ. ಹರಿದು ಚಿಂದಯಾದ ಅರಿವೆಗಳು, ಎಂದೂ ಜಳಕವನ್ನೇ ಕಾಣದ ಅರಿವೆಗಳು. ಸಾಂವಕ್ಕಾ ನೋಡಿದ್ಲು, ನೋಡೇ ನೋಡಿದ್ಲು…. ಕೋಟೆಪ್ಪ ಕೆಮ್ಮಿಕೋಂತ ದೋತ್ರದ ಚುಂಗಾ ಕೈಯಾಗ ಹಿಡ್ಕೋಂಡು ಹೊರಗ ಹೋದ. ಸಾಂವಕ್ಕ ರೊಟ್ಟಿನ ಮುಂದ್ಕ ಹಿಡದ್ಲು, ಆದ್ರಂವ ರೊಟ್ಟಿ ತಗೊಳ್ಳಿಲ್ಲ. ಕೋಟೆಪ್ಪ ಓಣಿ ದಾಟಿ ಗೌಡ್ರ ಓಣಿಗೆ ಕಾಲಿಟ್ಟ. ಇಲ್ಲಿ ಅದನ್ನ$$ ನೋಡತಿದ್ದ ಇಂವಾ ಗಬಕ್ನ ಸಾಂವಕ್ಕನ ದೂಡಿಕೊಂತ ಒಳಗ ಬಂದಾ.
“ಏ ಯಾರ್ಲಾ ನೀ?? ನೀಡಿಸ್ಗೊಳ್ಳಾಂವ ಆಗಿ ಒಳಗ ಬರತಿಯಲ್ಲ, ಹೊರಬೀತಿಯಾ ಏನ್ ತಟ್ಲಿ ತಗೊಳ್ಳೋ…”
“ನನ್ನ ಗುರ್ತು ಹತ್ಲಿಲ್ಲ ಸಾಂವಿ?”
ಅವನ ಧ್ವನಿ ಕೇಳಿ ಸಾಂವಕ್ಕನ ಎದಿ ಧಸಕ್ ಅಂತು, ಬೆಪ್ಪ ಬಡಿದವಳಂಗ ಗಪ್ನ ನಿಂತಬಿಟ್ಲು. ಕೈಯಾಗಿನ ರೊಟ್ಟಿ ಕೆಳ್ಗ ಬಿತ್ತು. ಒಮ್ಮ ಎಸಾಂವಕ್ಕ ಬಾಯೀನ ಹೋದಂಗ ಆತು. ಕೈಕಾಲದಾಗಿನ ನರ ಎಲ್ಲಾ ಗುಳುಗುಳು ಅಂದಾಂಗ ಆದ್ವು. ಆಕಿ ಎದಿ ಮ್ಯಾಲ ಕೇಳಗ ಏರಿಳ್ಯಾಕ ಹತ್ತು. ಮೂಗಿನ ಹೊಳ್ಳಿ ಆಗಲಾದ್ವು, ಗಂಟ್ಲಾ ಬಿಗದ ಬಂತು, ಮೈಆಗಿ ಕೂದ್ಲಾ ಸರಾಬರಾ ಅಂತಾ ಸರಿದಾಡಿದಂಗ ಆದ್ವು.
“ನಾ ಸಾಂವಿ ನಿನ್ನ ಗಂಡ___”
“ಥೂ” ಅಂತಾ ಮುಖದ ಮ್ಯಾಗ ಉಗುಳಿದ್ಲು. “ಯಾಕ್ಬಂದಿ?, ಮತ್ತ ನಿನ್ನ ಹೊಲಸ್ಸ ಮಾರಿ ತೋರ್ಸಾಕ ಬಂದ್ಯಾ__ನಾವು ಸತ್ತೇವೋ, ಬದಿಕೇವೋ ಅಂತಾ ನೋಡಾಕ ಬಂದ್ಯಾ?. ಇಷ್ಟ ದಿನಾ ನಾ ನೆಮ್ಮದಿಯಾಗಿದಿನಿ, ನೀ ಯಾವತ್ತು ನ್ನ ಪರ್ಲ ಹರ್ಕೋಂಡೋ ಅವತ್ತ ನನ್ನ ನಿನ್ನ ಸಂಬಂಧ ಮುಗಿದೈತಿ. ನೀ ಇಲ್ಲಿ ಒಂದ ಗಳಿಗಿ ನಿಲ್ಲಬ್ಯಾಡ, ನೀ ಇಲ್ಲಿಂದ ಎದ್ದ ಬಿಡ ನೀ ಎಟರ ಮನμÁ್ಯರದಾಗ ಜಮಾ ಇದ್ರ ಅಲ್ಲ ?ಸಾಂವಕ್ಕನ ಮಾತು ಉಕ್ಕಿ ಉಕ್ಕಿ ಬರತಿದ್ವು
“ನನ್ನ ಮಾತ ಕೇಳ ಸಾಂವಿ….”
“ನಾ ಈಗ ಯಾರ ಮಾತೂ ಕೇಳು ಸ್ತೀತಿಯ್ಯಾಗ ಇಲ್ಲಲಾ ಬಾಡ್ಯಾ,,,, ನಮ್ಮಪ್ಪ ಹೊಳ್ಳಿ ಬರುದ್ರಾ ನೀ ಜಾಗಾ ಖಾಲಿ ಮಾಡು,,,,”
ಅಷ್ಟೋತ್ತಿಎಗ ಸಾಂವಿ ಗೆಳತಿ ಕರೆವ್ವ ಬಂದೇ ಬಿಟ್ಲು, ಸಾಂವಿಗೆ ಮುಂದೇನ ಮಾಡಬೇಕು ಅಂತಾ ಹೊಳಿಲೇ ಇಲ್ಲಾ, ಕರೆವ್ವ ಕೇಳಿಯೇ ಬಿಟ್ಲು.
“ಸಾಂವಿ ಯಾರಲೇ ಇಂವಾ?!!”
ಇಇಇಇ ವಾ ನಮ್ಮೂರ ಗುಡಿ ಸ್ವಾಮಿ ಅಂತಾ, ಅಂದ್ರ ಅದದದದ ಬಸವಣ್ಣನ ಗುಡಿ ಇಲ್ಲಾ ಅದರ ಸ್ವಾಮಿ ಅಂತಾ ನೀಡಿಸ್ಕೋಳ್ಳಾಕ ಬಂದಾನ” ಒಂದ ತಿಂಗಳನಿಂದ ಮೌನ ವ್ರತಾ ಹೊಡದಾನಂತ ಯಾರ ಕೂಡೂ ಮಾತಾಡಂಗಿಲ್ಲ ಯವ್ವಾ, ಅವನ್ನ ಮಾತಾಡ್ಸಾಕ ಹೋಗಬ್ಯಾಡ__ ಕೈಸೊನ್ನಿ ಬಾಯಿ ಸೊನ್ನಿ ಅಷ್ಟ, ಅಅಅ ಸ್ವಾಮ್ಯಾರ ಸರದ ಕುಂಡ್ರಿ, ರೊಟ್ಟಿಗೆ ಹಂಚ ಇಟ್ಟಿನಿ, ಬಿಸಿ ರೊಟ್ಟಿ ಕೊಡತೇನಿ ತುಗೊಂಡು ಹೋಗ್ರಿ___”
“ಸಾಂವಿ ಹೊಲಗೇರ್ಯಾಗ ಮಲಕೊಂಡಿದ್ನಲ್ಲ ಅವನ ಅಲ್ಲಾ ಇವ್ನು” “ಹೌದು, ಆದ್ರ ಇಂವಾ ಸ್ವಾಮಿ ಆದಾನ ಅಂತಾ ನನಗೇನು ಗೊತ್ತು,,,,? ಎರಡ ಬಿಸೆರಿಟ್ಟಿ ನಿನ್ನ ಎಉಳಿದ ಬದ್ನಿಕಾಯಿ ಪಲ್ಲೆ ತಂದು ಕೈಯಾಗ ಇಡಾಕ ಅಂತ ಬಂದ್ರ ಸ್ವಾಮ್ಯಾರ ಕುಂತ ಜಾಗಾ ಖಾಲಿ ಆಗಿತ್ತು___ ಸಾಂವಕ್ಕ ದೊಡ್ಡದೊಂದು ಉಸ್ರ ಬಿಟ್ಲು…..
“ಅರೇ ಎಲ್ಲಿ ಹ್ವಾದ್ನಲೇ ಸಾಂವಿ ಅಂವಾ, ರೊಟ್ಟಿ ತರುಮಟಾ ಪುರುಷೊತ್ತಿಲ್ಲನ ಅಂವಗ, ಸಟಕ್ನ ಹೋಗೇ ಬಿಟ್ಟಾನಲ್ಲ?”
“ಯಾಕ ಹಾಳಾಗಿ ಹೋಗಲ್ಯಾಕ ಬಿಡು, ಇವ್ಯಾಡ ರಿಟ್ಟಿರ ಉಳದ್ವಲ್ಲ”
ಸ್ವಾಮ್ಯಾರು ಭಾರವಾದ ಮನಸ್ಸಿನಿಂದ ಹೊರಬಂದ್ರು, ಯಾಪ ಪಶ್ಚಾತ್ತಾಪವೂ ಆಗಲಿಲ್ಲ, ಆದ್ರ ಸಾಂವಿ ಹೇಳಿದ ಮಾತು ತಲ್ಯಾಗ ಗುಂಯಿಗುಡಾಕ ಹತ್ತು.. ಗೊಡ್ನಳ್ಳಿ ಬಸವಣ್ಣ ಸ್ವಾಮ್ಯಾರು ಅಂದ್ಲಲ್ಲ.!!! ಆ ಗುಡಿ ಎಲ್ಲಿ ಐತಿ, ಹುಡಕಬೇಕು, ಸ್ವಾಮ್ಯಾರು ನಡದೇ ಬಿಟ್ರು,,, ಹೌದು ? ಸ್ವಾಮ್ಯಾರು ಹುಡಕಾಕ ಹತ್ತಿದ್ರು. ಅದು ಯಾವುದು ಅಂತ ಗೊತ್ತss ಆಗಲಿಲ್ಲ. ಯಾಕಂದ್ರ ಆ ಊರಾಗ ಬರೀ ಹೆಣ್ಣ ದೇವರ ಗುಡೀನ ಜಾಸ್ತಿ ಇದ್ವು, ಕೊನೆಗೊಮ್ಮೆ ಹಾದ ಹೋಗು ಮುದುಕ್ಕನ್ನ ಕೇಳಿಯೇ ಬಿಟ್ಟ.
“ಊರ ಕೇರಿ, ದಿಬ್ಬಾ ಇಳದ್ರ ತಗ್ಗಿನಾಗಿ ಸಣ್ಣ ಬಸವಣ್ಣನ ಗುಡಿ. ಯಾವುರಾಂವಾ ತಮ್ಮ???
ಮುದುಕನ ಪ್ರಶ್ನೆಗೆ ಸ್ವಾಮ್ಯಾರು ಉತ್ರಾ ಕೊಡಲಿಲ್ಲ. ಬಿರಿಬಿರಿ ಹೊಂಟಬಿಟ್ಟು, ಗುಡಿ ಮುಂದ ನಿಂತಾಗ ಎರಡ ಹನಿ ಕನ್ನೀರು ತನ್ನಿಂದ ತಾವ ಉದುರಿದ್ದು, ಒಂದೀನಾನೂ ದೇವರ ಪೂಜೇನ ಮಾಡದಿದ್ದ ಇಂವ ಇವತ್ತು ದೇವರ ಪುಜಾರಿ ಆಗಬೇಕಾಗಿತ್ತು.
ಪಾಳ ಬಿದ್ದಗುಡಿ ಜನ ಸಂಚಾರವಿಲ್ಲದ ಜಾಗ. ರಣಗುಡುವ ಬಸವಣ್ಣನ ಕಲ್ಲು ಮೂರ್ತಿ, ಕಾಲಿಟ್ಟರೆ ಕಾಲಿಗೆ ಮತ್ತಿಬಿಡುವ ಧೂಳು, ಹೊರಗಿನಿಂದ ಕಸ ತುಂಬಿತ್ತು. ಪ್ರತಿ ಮೂಲ್ಯಾಗೂ ದೊಡ್ಡ ದೊಡ್ಡ ಆಕಾರದ ಜೇಡರ ಬಲಿಗಳು. ಮೇಲಿನ ಮೇಲ್ಮುದ್ದಿ ಜಂತಿಗಳು ಬಾಗಿದ್ದು, ಗುಡಿ ಸಣ್ಣದಾಗಿದ್ರೂ ಭಯಂಕರ ವಿಕಾರವಾಗಿ ಕಾಣತ್ತಿತ್ತು. ಬಸವಣ್ಣನ ಹಿಂದಿನ ಭಾಗದ ಗೋಡೆ ದೊಡ್ಡ ಬಿರಕ ಬಿಟ್ಟು ಅದರಿಂದ ಒಳಗಬರು ಗಾಳಿ ಸಣ್ಣಗೆ ಸುಂಯಿಗುಡುತ್ತಿತ್ತು. ಹೊಸ ಸ್ವಾಮ್ಯಾರು ನೋಡಿದ್ರು ನೋಡೇ ನೋಡಿದ್ರು. ಹೆಜ್ಜೆ ಇಡ ಬೇಕು ಅಂದ್ರೆ ಎದಿ ಡಬ್‍ಡಬ್ ಬಡಕೊಳ್ಳಾಕ ಹತ್ತು. ಈ ಜೀವಕ್ಕೆ ಎಲ್ಲೂ ನೆಲಿನ ಇಲ್ಲ. ಅಂದ ಬಳಿಕ. ನನಗೀರು ಈ ಗೊಡ್ನಳ್ಳಿ ಬಸವಣ್ಣನ ಗತಿ. ಇವನ್ನ ಇನ್ನ ನಂಬಿಕೊಂಡ ಹೊದ್ರಾತು ಅಂತ ಸ್ವಾಮ್ಯಾರು ಹೆಜ್ಜೆ ಇಟ್ಟೇ ಬಿಟ್ರು.
ಗುಡಿನ ಮತ್ತೊಮ್ಮೆ ತೀಕ್ಷ್ಮವಾಗಿ ಅವ ಲೋಕಿಸಿದ್ರು. ಹೊರಗ ಬಂದ್ರು. ಎದುರಿಗೆ ಬೆಳೆದಂಥ ಕಂಟಿ ಸೊಪ್ಪ ಮುರಿದು ಹಿಡಗಟಿಗಿ ಮಾಡಿ ಗುಡಿಯಲ್ಲ ಕಸಾವೊಡ್ಯಾಕ ಹತ್ತಿದ್ರು. ಜಾಡಗಳನ್ನೆಲ್ಲ ತಗದ ಹಾಕಿದ್ರು. ಇಡೀ ಗುಡಿಯಲ್ಲಾ ಹಸನಾತು, ಬಿದ್ದ ಗ್ವಾಡಿ ಮಣ್ಣನ್ನೆಲ್ಲ ಒಟ್ಟುಗೊಡಿಸಿದ್ರು. ಬಸವಣ್ಣನ ಮಗ್ಗಲದಾಗ ಬಿದ್ದಿದ್ದ ಸಣ್ಣ ಗುಡುಮಿ ತಗೊಂಡು ನೀರಿಗೆಂತ ಹೊರಗ ಬಂದ್ರು. ನೀರ ತಂದು ಹಿಂದಿನ ಗೋಡೆ ಬಿರಕ ಬಿಟ್ಟಿದ್ದನ್ನ ಮುಚ್ಚಬೇಕು ಅಂತ ರಾಡಿ ಕಲಿಸಿ ಮೆತ್ತಾಕ ಹತ್ತಿದ್ರು, ಹನ್ನೆರಡ ಆಗಾಕ ಬಂದಿತ್ತು. “ಬಸವಣ್ಣ ನಿನ್ನ ಆಶಿರ್ವಾದದಿಂದ ಇನ್ನ ಮ್ಯಾಲ ನನ್ನ ಚಿಂತೆಲ್ಲ ದೂರ ಆಗ್ಲಿ, ನಾ ಶಪತಾ ಮಾಡಿ ಕರೆ ಹೇಳತನಿ, ನಿಜವಾಗಿ ನಾ ಪೂಜಾರಿ ಆಗಿ ನಿನ್ನ ಸೇವಾ ಮಾಡತೇನಿ” ಸ್ವಾಮ್ಯಾರು ಬಸವಣ್ಣಗ ಅಡ್ಡಬಿದ್ದು ಮ್ಯಾಲೆದ್ರು. ಸದ್ಯಕ್ಕ ಊರ ಬಿಟ್ರು. ಸ್ವಾಮ್ಯಾರ ಅಂದಕೊಂಡ್ರು ಸಣ್ಣದೊಂದು ಚೀಲ,ಕಂಡು ಬಂತು. ಸಿಟಿಕ್‍ನ ರಾಡಿ ಚಲ್ಲಿ ಚೀಲ ತಗೊಂಡ್ರು, ಸ್ವಾಮ್ಯಾರ ತಲೀನ ತಿರಗದಂಗಾತು. ಹೋಗತಿರು ಜೋಲಿನ ಹಿಡಕೊಂಡು ನಿಂತು. ಮದಲ ಬಸವಣ್ಣಗ ಅಡ್ಡಬಿದ್ರು. ಬರಾಬರಾ ಚೀಲ ಬಿಚ್ಚಿ ಸುರುವಿದ್ರು. ‘ನೂರರ ನೋಟು ಗಳು ! !…..ಬಂಗಾರದ ಮೆಲ್ಲುಂಡ ಸರ!! !……..ಬೆಳ್ಳಿ ಕಡಗ !!!…..! !…..’ ಸ್ವಾಮ್ಯಾರಿಗೆ ಏನ ಮಾಡಬೇಕು ಅಂತ ತಿಳಿ ದಂಗಾತು. ನಿಜವಾಗ್ಲು ಸ್ವಾಮ್ಯಾರು ಮೌನ !!!…..!!…..’
‘ಯಾ ಕಳ್ಳನನ ಮಗಾ, ಯಾರ ಮನಿ ಕಳವು ಮಾಡಿದ್ರೂ ಏನೋ ಅವು ನನಗೆ ಸಿಗಬೇಕಾಗೇತಿ’.
ಮತ್ತೆ ಕೆಲದಿನಗಳ ನಂತ್ರ ಸ್ವಾಮ್ಯಾರು ಬಂದ್ರು. ತಲೆ ಮೇಲೆ ದುಂಡಗಿನ ತುರಾಯಿಗಳು, ಅದಕ್ಕೊಪ್ಪುವಂತೆ ರುದ್ರಾಕ್ಷಿ ಸರಗಳು, ನೀಳ ವಾದ ಗಡ್ಡ, ಹಣೆಯ ಮೇಲೆ ವಿಭೂತಿ, ಕಾವಿ ಬಟ್ಟೆಗಳು, ಎಡಗೈಲಿ ಕಮಂಡಲ, ಬಲಗೈಲಿ ತಾಮ್ರದ ಹೂಜಿ, ಕಾಲಲ್ಲಿ ಗಂಧದ ಕಟ್ಟಿಗೆಯ ಪಾದರಕ್ಷಿಗಳು. ಸ್ವಾಮ್ಯಾರ | ನೋಡಿದ್ರೆ ಸಾಕ್ಷಾತ್ ಋಷಿಗಳಂತೆ ಕಂಗೋಳಿಸ್ತಿದ್ರು.
ಅವರ ಗೂಡುಗಟ್ಟಿದ ಕಣ್ಣುಗಳ ಮದ್ಯ ಹೊಳೆ ಯುವ ಬೆಳಕಿನ ಕಿರಣಗಳನ್ನು ಕಂಡ್ರೆ ಭಕ್ತಿ ಯಿಂದ ಕೈಮುಗಿದು ಪಾದಕ್ಕೆ ಹಣೆ ಹಚ್ಚ ಬೇಕು. ಎದೆ ತುಂಬಾ ರುದ್ರಾಕ್ಷಿ ಸರಗಳು.
ಸ್ವಾಮ್ಯಾರು ಊರೊಳಗೆ ಹೆಜ್ಜೆ ಇಟ್ರು. ಓಂ ನಮಃ ಶಿವಾಯ……… ಓಂ ನಮಃ ಶಿವಾಯ……. ಓಂ ನಮಃ ಶಿವಾಯ” ಶಿವನ ಮಂತ್ರಪಠಣ ಮಾಡಲ ಊರ ಸುತ್ತ ಹಾಕಾಕ ಹತ್ತಿದ್ರು, ಓಣಿ ಓಣಿ ತಿರಗಿದ್ರು, ಊರಾಗಿನ ಜನಯಲ್ಲ ಬೆರಗಾದ್ರು,
ಸ್ವಾಮ್ಯಾರು ಇಡೀ ಊರಿಗೇ ಒಳ್ಳೆದಾಗು ಕಾಲ ಬಂದೈತಿ’ ಅಂದ್ರು. ಜನ ಸಂತೋಷದಿಂದ ಕುಣಿದ್ರು. ಊರ ಪ್ಯಾಟಿ ನಡುವೇ ನಿಂತು ಹಿಂದೆ ಆದ ಘಟನೆಯಲ್ಲ ಹೇಳಿದ್ರು, ಈಗ ಆಗುದುನ್ನೂ ಹೇಳಿದ್ರು, ಆದ್ರೆ ಮುಂದ ಆಗುದುನ್ನ ಮಾತ್ರ ಒಳ್ಳೆ ಕಾಲ ಬಂದೈತಿ ಅಂದ್ರು.
ಸ್ವಾಮ್ಯಾರ ಮಾತುಗಳನ್ನ ಜನ ಮಂತ್ರ ಮುಗ್ಧತೆಯಿಂದ, ತಲ್ಲೀನರಾಗಿ ಕೇಳಿದ್ರು. “ನೀವೆಲ್ಲ ಸೇರಿ ಆ ದಿಬ್ಬದ ಕೆಳಗಿರು ಬಸವಣ್ಣನ ನಿತ್ಯ ಪೂಜೆ ಮಾಡಬೇಕು. ಆ ಬಸವಣ್ಣನ ಸೇವೆಗೆ ನನಗೆ ಅಪ್ಪಣೆ ಕೊಡಬೇಕು” ಅಂದ್ರು. ಜನ ಅಂದಕೊಂಡ್ರು, ಯಾವುದೋ ಊರಿನಿಂದ, ಎಲ್ಲಿಂದಲೋ ಬಂದ ಸ್ವಾಮಿ ನಮ್ಮೂರ ಇತಿಹಾಸಾನೇ ಹೇಳಿದಾನ ಅಂದ್ರೆ ಇವ ಸಾಮಾನ್ಯ ವ್ಯಕ್ತಿಯಲ್ಲ ಸಾಕ್ಷಾತ್ ಆ ಗೊಡ್ನಳ್ಳಿ ಬಸವಣ್ಣ ಇರಬೇಕು ಅಂದ್ರು. ಒಮ್ಮೆಲೆ ಏಕ ಕಂಠದಿಂದ ಆಗ್ಲಿ ಆಗ್ಲಿ” ಅಂದ್ರು.
ಸ್ವಾಮ್ಯಾರು ಬಸವಣ್ಣನ ಸೇವೆಗೆ ನಿಂತ್ರು. ಎμÉ್ಟೂೀ ವರ್ಷಗಳೂ ಗತಿಸಿದರೂ ಆ ಬಸವಣ್ಣನ ತಿರುಗಿಯೂ ನೋಡದ ಜನ ಈ ಸ್ವಾಮ್ಯಾರ ಪ್ರಭಾವದಿಂದ ಪೂಜೆ ನಡೆಸಲಾರಂಭಿಸಿದರು. ಬಿದ್ದ ಗೋಡೆ ಕಟ್ಟಲ್ಪಟ್ಟಿತು. ಜಂತಿಗಳು ಗಟ್ಟಿಯಾದ್ದು. ಪರತ ಸ್ವಾಮ್ಯಾರಿ ಗಂತನ ಸಣ್ಣದೊಂದು ಮನೆ ನಿರ್ಮಾಣ ಆತು. ಊರಾಗಿನ ದೊಡ್ಡ ದೊಡ್ಡ ಮಂದಿ ಸ್ಟಾಮಾರ ಪ್ರಭಾವಕ್ಕ ತಮ್ಮ ಕೈಲಿಂದ
ಸಹಾಯ ಮಾಡಾಕ ಹತ್ತಿದ್ರು___ ಊರಿನಿಂದ ಜನ ಗುಂಪುಗುಂಪಾಗಿ ಬರಾಕ ಹತ್ತಿದ್ದು, ಗುಡಿಗೆ ಬರುದಾರಿ ರಿಪೇರಿ ಕಾನತ್ತು ಸ್ವಮ್ಯಾರ ಪೂಜೆ-ಜಪ-ತಪಾದಿಗಳು ನಿತ್ಯ ಶುರುವಾದ್ದು, ಸ್ವಾಮ್ಯಾರ ಆಶೀರ್ವಾದ ಬೇಕು ಅಂದ್ರು ಒಂದ ತಾಸ ಆದ್ರೂ ಕಾಯಬೇಕಾದಂಥ ಪ್ರಸಂಗ ಬಂತು.
ಯಾಕಂದ್ರ ಮುಂಜಾನೆದ್ದು ತಮ್ಮ ಪೂಜೆಗಳನ್ನು ಮುಗಿಸಿ ಗುಡಿ ಕಟ್ಟಿಗೆ ಬರಬೇಕಾದ್ರ ತಾಸಾದ್ರೂ ಬೇಕಾಗಿತ್ತು. ಸ್ವಾಮ್ಯಾರ ಸೇವಾ ಕಂತ ಶಿμÁ್ಯರು ತಯಾರಾದ್ರು. ಗೊಡ್ನಳ್ಳಿ ಬಸವಣ್ಣನ ಪ್ರಚಾರ ಸುತ್ತಮುತ್ತಲೂ ಹರಡಾಕ ಹತ್ತು. “ಪ್ರತಿ ಅಮಾಸಿಗೊಮ್ಮೆ ನಡ ಕೊಂಡ,್ರ ನಮ್ಮ ಮನಸ್ನಾಗ ಇದ್ದುದ್ದು ಕರೆ ಆಕೃತಿ” ಅನ್ನು ಸುದ್ದಿ ಹಬ್ಬಿದ್ದು, ಈಗ ಸುತ್ತಮುತ್ತಲಿನ ಭಕ್ತಾದಿಗಳ ಜನಸಮೂಹವೇ ಬರಲಿಕ್ಕತ್ತು.
ಕೋಟೆಪ್ಪ ಸಾಂವಕ್ಕನ ಮುಂದ ಸ್ವಾಮ್ಯಾರ ಪ್ರಭಾವನ ಹೊಗಳಿ ಹೊಗಳಿ ಹೇಳಿದ. ಕುಷಿಯಿಂದ ಕುಣಿದ. ತಾನು ಗುಡಿ ಚೇರಮನ್ನ ಆಗಿದಿನಿ ಅಂದ. ಆದ್ರು, ಸಾಂವಕ್ಕೆ ಯಾವುದಕ್ಕೂ ‘ಯಾಂ’ನೂ ಅನ್ನಲಿಲ್ಲ. ‘ಹೂಂ’ನೂ ಅನ್ನಲಿಲ್ಲ. ಸುಮಾಕ ಎದ್ದು ಒಳಗೆ ಹೋದ್ಲು. ಸ್ವಾಮ್ಯಾರ ಇತಿಹಾಸದ ಬುನಾದಿನ ಸಾಂವಕ್ಕನ ಕೈಯಾಗಿತ್ತು ಅಂದಮ್ಯಾಲ ಆಕೆ ಯಾವುದಕ್ಯಾಂತ ಆಶ್ಚರ್ಯ ಪಡಬೇಕು ?
ಅಮಾಸಿ ದಿನ ಕರೆವ್ವ ಬಂದ್ಲು. ಅಲ್ಲಲೆ ಸಾಂವಿ, ಬಸವಣ್ಣನ ಗುಡಿ ಶುರುವಾಗಿ ಇಟಿ ದಿನಾ ಆತು. ಒಮ್ಮೇರ ಹೋಗಿದಿ?” “ಇಲ್ಲ” “ಮತ್ಯಾವಾಗಲೇ ಹೊಕ್ಕದಿ ? ಅಲ್ಲಿ ? ಹೊಸಾ ಸ್ವಾಮ್ಯಾರ ಬಂದಾರಂತಲೇ ಸಾಂವಿ !!… ಭಾರಿ ದೊಡ್ಡ ಶಾನ್ಯಾರದಾ ರಂತ !! ನಮ್ಮ ಮನಸ್ಯಾಗ ಏನಾರ ಇಟ ಗೊಂಡು ಅವರ ಪಾದ ಮುಟ್ಟಿ ನಮಸ್ಕಾರ ಮಾಡಬೇಕಂತ ಮುಂದಿನ ಅಮಾಸಿ ಅನ್ನಾ !!!” ”ಜರ್ ಆಗಲಿಲ್ಲ ಅಂದ್ರ?” “ಆಗಲಿಲ್ಲ ಅಂದ್ರ ಐದ ಅಮಾಸಿ ನಡೆ ಕೋಬೇಕಂತ. ಕರವ್ವನ ಮಾತಿಗೆ ಸಾರವಕ್ಕ ಕಿಸಕ್‍ನ ನಕ್ಕು. “ಕರೀ, ನೀ ಇನ್ನೂ ಮಲಿಕುಡಿ ಕೂಸ ಅದಿ ನೋಡೇವಾ ಯಾ ಸ್ವಾಮಿ, ಯಂಥಾ ಸ್ವಾಮಿ ? ಯಾರಲೇ ಅಂವ ? ಅವನೂ ನಮ್ಮಂಗ ಒಬ್ಬ ಮನಸ್ಯಾನ ಅಲ್ಲೇನ ? ಉದ್ದಕ ಗಡ್ಡ ಬಿಟ್ಟ, ಕೆಂಪ ಅರಿವಿ ಹಾಕ್ಕೊಂಡ್ರ ಸ್ವಾಮಿ ಅಕ್ಕಾನೇನು ? ಅಂದ್ಲು . “ಅಂಥ ದೊಡ್ಡವರ ಬಗ್ಗೆ ಇಟ ಹಗರ ಮಾತಾಡಬಾರದ್ದೇ ಸಾಂವಿ, ಮತ್ತೆ…… ಆ ಗುಡಿಗೆ ನಿಮ್ಮಪ್ಪನ ಚೇರಮನ್ನ ಆಗಿದಾನಲ್ಲಾ___
“ನಮ್ಮಪ್ಪ ಹುಚ್ಚ ಮನμÁ್ಯ, ಏನ ಹೇಳಿದ್ರೂ ಕೇಳುವಂಗಿಲ್ಲ. ತಂದ ಕರೆ ಅಂತಾನ. ಅದಕ ನಾನೂ ಸುಮ್ಮನದೇನಿ. ಚೇರಮನ್ನರ ಆಗವಲ್ಲಾ, ಗೀರಮನ್ನರ ಆಗವಲ್ಲಾÀ”
“ಇವತ್ತ ಅಮಾಸಿ ಗುಡಿಗೆ ಹೋಗುನ್ನಡಿ” ‘ಊಂಊವುಂಟ ನಾ ಒಲ್ಲವಾ, ಬೇಕಂದ್ರ ನೀನ ಹೋಗು”. ಕಡ್ಡಿ ಮುರದಂಗ ಸಾಂವಕ್ಕೆ ಹೇಳಿಬಿಟ್ಲು. ಕರೆವ್ವ ನಿರ್ವಾಇಲ್ಲ ಅಂತ ಒಬ್ಬಾಕೆ ಹೋದ್ಲು.
ಇತ್ತ ಓನ್ಯಾಗ ಹೊಲ್ಕಾರ ಕೆಂಪಿ ಸ್ವಾಮ್ಯರ ಸುದ್ದಿ ಕೇಳಿ ತನ್ನ ತಲಿನ ಚಂದಾಗಿ ಬಾಚಿ ಕೊಂಡ್ಲು. ಹಣಿಮ್ಯಾಲ ದೊಡ್ಡದೊಂದ ಕುಂಕುಮ ಬೊಟ್ಟ ಇಟಗೊಂಡಳು. ಹಸಿರ ಸೀರಿ, ಹಸಿರ, ಕುಪ್ಪಸ, ಕೈ ತುಂಬಾ ಬಳಿ. ಕೈಯಾಗ ತಾಟ ಹಿಡಕೊಂಡು ಗುಡಿ ಕಡಿಗೆ ಜಿಂಕೆಯಂಗ ಜಿಗದ್ದು. ಗುಡಿ ಕಟ್ಟಿಮ್ಯಾಲ ಸ್ವಾಮ್ಯಾರು’ ಪ್ರಸನ್ನರಾಗಿದ್ರು. ಜನ ದೇವರ ದರ್ಶನ ಪಡಕೊಂಡು, ಸ್ವಾಮ್ಯಾರ ಆಶೀರ್ವಾದ ತಗೊಂಡು ಹೋಗತ್ತಿದ್ರು.
ಕೆಂಪಿ ದೇವರಿಗೆ ಕೈ ಮುಗಿದು ಸೆರಗ ಸಡ್ಲಮಾಡಿ ಕಾಲಿಗೆ ಬಗ್ಗಿದ್ಲು, ಸ್ವಾಮ್ಯಾರು ತಲಿಮ್ಯಾಲೆ ಕೈಯಾಡ್ಸಿದ್ರು. ಕೆಂಪಿ ಮ್ಯಾಲ ಎದ್ದು ಆದ್ರ ಎದಿ ಮ್ಯಾಲ ಸೆರಗ ಇರಲಿಲ್ಲ. ಸ್ವಾಮ್ಯಾರಿಗೆ ಕೈಮುಗಿದ್ಲು,’ಸ್ವಾಮ್ಯಾರ ದೊಡ್ಡ ಮನಸ್ಸ ಮಾಡಿ ಈ ದಾಸಿ ಕಡಿಂದ ತಮ್ಮ ಸೇವಾ ಮಾಡಾಕ ಅಪಣಿ ಕೊಡ್ರಿ” ಅಂದ್ಲು, ಸ್ವಾಮ್ಯಾರು ಆಕೆ ತಲಿ ಮ್ಯಾಲ ಕೈಯಿಟ್ಟು ಕಣ್ಣ ಮುಚ್ಚಿದ್ರು, ಉಪ್ಪು ಕಾರಾ ತಿಂದ ಶರೀರ, ಹಣ್ಣಿನ ಸ್ಪರ್ಶ ಸ್ವಾಮ್ಯಾ ರಿಗೆ ಹೊಸದೇನ ಆಗಿರಲಿಲ್ಲ. ಕಂಪಿ ಮುಖ ಹೂವಿನಂಗ ಅರಳತು. ಕೆಂಪಿಗೆ ಆಶೀರ್ವಾದ ಮಾಡುವಾಗ ಕರೆವ್ವ ಅದೇ ಗುಡಿಗೆ ಪ್ರವೇಶ ಮಾಡುವಾಗ ಕರೆವ್ವ ಅದೇ ಗುಡಿಗೆ ಪ್ರವೇಶ ಮಾಡಿದ್ದು. ಕೆಂಪಿನ ಕಂಡು ಕರೆವ್ವಗ ಆಶ್ಚರ್ಯ ಆತು.!!?”
“ಸ್ವಾಮ್ಯಾರ ಆಕೆ ಕೆಳಗಿನ ಕುಲದಾಕಿರಿಯಪ್ಪ, ಆಕಿನ್ಯಾಕ ಮುಟ್ಟಾಕಯೋಗಿದ್ರಿ ?”
“ಕುಲ ಯಾವುದಾದರೇನಂತೆ, ಭೂಮಿಮ ಲಿರುವ ಕುಲ ಎರಡು. ಗಂಡು-ಹೆಣ್ಣು’
ಕರೆವ್ವಗ ಸ್ವಾಮ್ಯಾರ ಮಾತಿನ ಅರ್ಥ ಆಗಲಿಲ್ಲ. ಸುಮ್ಮ ಸಮಸ್ಕಾರ ಮಾಡಿ ಮನಿಗೆ ಬಂದ್ಲು, ಆದ ಕಥಿನೆಲ್ಲ ಸಾಂವಕ್ಕನ ಮುಂದ ಹೇಳಿದ್ದು, ಸಾಂವಕ್ಕನ ತಲ್ಯಾಗಿನ ಒಂದ ನರ ಚಳಕ್ ಅಂತು, ಕೆಂಪಿ ಬಂದಾಳ ಅಂದ್ರ ಮುಗದ ಹೋತು, ಎಲ್ಲ ಸರ್ವನಾಶ. ಇದನ್ನ ಅಂವಗ ಹ್ಯಾಂಗ ತಿಳಿಸಿ ಹೇಳುದು ?….. ಬಾಯಿಬಿಟ್ಟು ಮಂದಿ ಮುಂದ ಹೇಳುವಂಗಿಲ್ಲ. ದೇವರ ಕಾರ್ಯಕ್ಕೆ ಅಡ್ಡಬರುದು ಸರಿಯಲ್ಲ. ಸಾಂವಕ್ಕನ ಮನಸ್ಸು ತಳಮಳ ಅಂತು. ಆಕೆ ಮತ್ತೆ ಪ್ರಶ್ನೆ ಮಾಡಿಕೊಂಡು, ಅಂವಾ ಏನ ಮಾಡಿದರೇನಂತ ನನ್ನಿಂದ ಯಾವತ್ತೂ ದೂರಾಗಿದಾನಂದ್ರ, ಅವಗ ನನಗ ಏನ ಸಂಬಂಧ? ಈಗ ನಾ ಬರೀ ಸಾಂವಿ….. ಅಂವ ?…. ಊರಿಗೆ ದೊಡ್ಡ ಮನಸ್ಯಾ ಆಗ್ಯಾನ, ಸ್ವಾಮಿ ಆಗಿದಾನ !!…..
ನಾ ಅವತ್ತ ಕರೆವ್ವನ ಮುಂದ ಸ್ವಾಮಿ ಅಂತ ಸುಳ್ಳ ಹೇಳಿದ್ದು ತಪ್ಪಾತೇನೊ,…… ಸತ್ಯಾನ ಮುಚ್ಚಿಡಾಕ ಕರೆವ್ವನ ಮುಂದ ಸ್ವಾಮ್ಯಾರು ಅಂದಿದ್ದಕ್ಕೆ ಇಂವ ಕರನ ಸ್ವಾಮಿ ಆಗ ಬೇಕಾ ?….. ಊರ ಅಡ್ಡಾಡಿ ಊರ ಇತಿಹಾಸ ಹೇಳಿದಂತ,,,, ಮದುವ್ಯಾಗಿ ಹತ್ತ ವರ್ಷ ಈ ಊರಾಗ ಬಾಳೆ ಮಾಡಿದಾನಂದ್ರ ಇತಿಹಾಸ ಗೊತಿಲ್ಲಂಗ ಇರತೈತಾ ? ಆದ್ರ, ಕರೇನ ಇಂವÀ ಸ್ವಾಮಿ ಹ್ಯಾಂಗಾದ ? ಒಂದಿನಾನೂ ಮನ್ಯಾಗ ದೇವರ ಪೂಜೆ ಮಾಡಿದವನಲ್ಲ. ಯಾಂಗ ಪೂಜೆ ಮಾಡಾಕ ಹತ್ತಿದಾ ? ಹುಚ್ಚ ಜನ, ‘ಜನ ಮರುಳೂ ಜಾತ್ರೆ ಮರುಳೂ” ಅನ್ನುವಂಗ ಇಲ್ಲಿ ಜನ ನಂಬಿಬಿಟ್ಟಾರ. ಸಾಂವಕ್ಕೆ ತನ್ನೊಳಗೆ ತಾ ವಿಚಾರ ಮಾಡಿ ಸಣ್ಣಗೆ ನಕ್ಕಳು.
ಕಾಲ ಉರುಳಿದಂಗ ಸ್ವಾಮ್ಯಾರ ಪವಾಡಗಳೂ ನಡಿಯಾಕ ಶುರುವಾದ್ದು. ದೂರದಿಂದ, ಸುತ್ತಲಿಂದ, ಕಾರು ಬರಾಕ ಹತ್ತಿದ್ವು, ಯಾವತ್ತಾದರೂ ಒಂದಿನ ಊರ ಸಾವುಕಾರ ಮನಿಗೆ ಕಾರ ಬಂದಿತ್ತಂದ್ರ ಇಡೀ ಅರ್ಧ ಊರ ಕಿತ್ತ ಬರತ್ತಿತ್ತು, ಆ ಕಾರ ನೋಡಾಕ. ಅಂಥದರಾಗ, ಈಗ ಪ್ರತಿ ಅಮಾಸಿಗೊಮ್ಮೆ ಕಾರು, ಜೀಪು, ಟೆಂಪೆÇೀ, ರಿಕ್ಷಾ, ಸ್ಕೂಟರಗೆಳಿಗಂತೂ ಲೆಕ್ಕವೇ ಇರದಾತು. ಇದರಿಂದ ಸ್ವಾಮ್ಯಾರ ಪ್ರಭಾವ ಜಾಸ್ತಿ ಆತು, ರಾಜಕೀಯ ಜನರು ಹೊರಳಿತು. ಅವರೂ ಬಂದ್ರು, ಸ್ವಾಮ್ಯಾರ ಆಶೀರ್ವಾದ ತಗೊಂಡ್ರು.
ಊರಿಗೆ ಸರಕಾರದಿಂದ ಡಾಂಬರ ರಸ್ತೆ ನಿರ್ಮಾಣ ಆತು. ಕರೆಂಟ ಬಂತು ನೀರ ಬಂತು ಸರಕಾರದಿಂದ ಟ್ಯಾಂಕ ತಯಾರಿಸಿ ಮನಿಮನಿಗೆ ನಳ ಸಿಗುವಂಗ ಆತು. ಇದರಿಂದ ಊರವರ ವ್ಯವಹಾರ ಶಹರಕ್ಕೆ ಹೊರಟು. ಊರು ಅಭಿವೃದ್ಧಿ ಹೊಂದಲು ಶುರುವಾಯಿತು. ಯಾವತ್ತೂ ಯಾರ ಕಡಿಂದಾನೂ ಆಗದೇ ಇದ್ದ ಕೆಲಸ ಸ್ವಾಮ್ಯಾರ ಹೇಳಿದ ಕೂಡ್ಲೇ ತಯಾರಾಗಿಬಿಡತ್ತಿದ್ವು.
ಸ್ವಾಮ್ಯಾರು ಅದ್ಭುತ ವ್ಯಕ್ತಿಯಾದ್ರು. ಭಕ್ತಾದಿಗಳಿಗೆ ಗುಡಿ ಸುತ್ತ ಇರೋದಿಕ್ಕಂತ ಮನೆಗಳು ನಿರ್ಮಾಣ ಅದ್ದು, ಪ್ರತಿ ಸೋಮವಾರ ಅನ್ನ ಸಂತರ್ಪಣೆ ನಡಿಲಿಕ್ಕತ್ತು. ಭಕ್ತಾದಿಗಳ ಸಂಖ್ಯೆ ಹೆಚ್ಚಾತು. ದುಡ್ಡಿಗಂತು ಕೊರತೆ ಇರಲಿಲ್ಲ. ಸಾಂವಕ್ಕಗ ತಡ್ಯಾಕ ಆಗಲಿಲ್ಲಾ ಇವನ್ನ ಹಿಂಗ ಬಿಟ್ರ ಮಂದಿ ಹಾಳ ಮಾಡ್ತಾನ ಅಂತಾ ಮಠಕ್ಕ ಹೋಗಾಗ ತಾನೇ ತಯಾರಾದ್ಲು, ಮಠಕ್ಕೆ ಬಂದು ಒಳಗ ಹೆಜ್ಜಿ ಇಟ್ಲು,,,, ಸಾಂವಿ ನೋಡಿ ಸ್ವಾಮ್ಯಾರು ಅವಕ್ಕಾದ್ರು!!,
ಈಗ್ಲಾದ್ರು ಬಂದ್ಯಾ ಸಾಂವಿ?!!, ನಾನೀಗ ಸ್ವಾಮಿ ಆಗಿದಿನಿ……. ನೀ ಹೇಳಿದ ಮಾತು ನಡೆಸಿದಿನಿ…… ಬಾ ಒಳಗೆ” ಪಲ್ಲಂಗದ ಮ್ಯಾಲ ಕುಂತು ಸಾಂವಿನ ತಬ್ಬಿದ್ರು. ಇನ್ನ ಮ್ಯಾಲ ದಿನ ದೇವರಿಗೆ ಬರತಾಯಿರು ಸಾಂವಿ” ಅಂದ್ರು. ತಡ್ರಿ ಇದನ್ನ ಮದಲ ತಿನ್ನಿ, ನಿಮಗೆ ತಿನ್ನಾಕ ಮಾಡಿಕೊಂಡು ತಂದೇನಿ ಉಂಡು ಗಪ್ಪನ ಮಲಗಿ ಬಿಡ್ರಿ” ಅಂದ್ಲು. ಬಹುದಿನ ಗಳಿಂದ ಹೆಂಡತಿಯ ಕೈಯಿಂದ ಅಡಿಗನ ತಿನ್ನದಿದ್ದ ಸ್ವಾಮ್ಯಾರು ಹಿಂದೂಮುಂದೂ ನೊಡದ ಗಬಗಬ ಸಾವಕ್ಕೆ ತಂದಿದ್ದು ತಿಂದು ಬಾಯಿ ಒರಸಿಕೊಂಡ್ರು. ನಂತ್ರ ಪಲ್ಲಂಗದ ಮ್ಯಾಲ ಉಳ್ಳದ್ರು, ಸಾಂವಿ ಒಳಗಿನ ಸೇಡು ಸ್ವಾಮ್ಯಾರಿಗೆ ತಿಳಿಯಲೇ ಇಲ್ಲ.
ಬೆಳಗ ಹರಿಯುವದರಲ್ಲೇ ಸ್ವಾಮ್ಯಾರು ಸತ್ತಾರಂತ……. ಮಲಕೊಂಡಲ್ಲೇ ಸತ್ತಾರಂತ !…….. ಸ್ವಾಮ್ಯಾರ ಸಾವು ಅದ್ಭುತ ಸಾವು…….. ಅದ್ಭುತ ಸಾವು………!!!????? ಇಂಥಾ ಸಾವು ಎಲ್ಲಾರಿಗೂ ಬರುದುಲ್ಲರೀ….. ಎಷ್ಟು ದೌಡ ದೇವರು ಕರಕೊಂ ಡಬಿಟ್ಟ… ಸ್ವಾಮ್ಯಾರು ಸಾಕ್ಷಾತ್ ಗೊಡ್ನಳ್ಳಿ ಬಸವಣ್ಣನ ಆಗಿದ್ರು, ಹೌದು ಗೊಡ್ನಳ್ಳಿ ಬಸವಣನ ಆಗಿದ್ರು…… ಅವರ ದಯದಿಂದ ಊರ ಅಭಿವೃದ್ಧಿ ಆಗಿತ್ತು, ಸ್ವಾಮ್ಯಾರು ನಮ್ಮನೆಲ್ಲ ಪರದೇಶಿ ಮಾಡಿ ಹೊಂದಿತ್ತು…… ಹೋದ್ರು….. ಸ್ವಾಮ್ಯಾರು ನಮ್ಮನ್ನೆಲ್ಲ ಪರ ದೇಶಿ ಮಾಡಿಯೊದ್ರು…….
ಊರಿಗೆ ಊರೇ ಕಣ್ಣೀರು ಹಾಕಿತು, ಅಂತಾವ್ರು ಅತ್ತರು, ಅಳದೇ ಇದ್ದವರು ಅತ್ತರು, ಕೆಂಪಿ ಬಿಳಿ ಸೀರಿ ಉಟ್ಕೊಂಡ್ಲು, ಅವರಪ್ಪ ಸತ್ತೂ ಅಳದೇ ಇದ್ದ ಕರೆವ್ವ ಸ್ವಾಮ್ಯಾರು ಸತ್ತಾಗ ಎದಿ ಎದಿ ಬಡಕೊಂಡು ಅತ್ಲು, ಸುಡುಗಾಡ ಮುಟ್ಟುದ್ರಾಗ ಸ್ವಾಮ್ಯಾರ ಹೆಣಕ್ಕ ಬೆಂಕಿ ಬಿದ್ದಿತ್ತು. ಸಾಂವಕ್ಕ ಬೆಂಕಿ ಕಂಡು ಗಪ್ನ ನಿಂತ್ಲು, ಗಂಡ ಇದ್ದಾಗಿನ ರೋಷ ಅಂವಾ ಸತ್ತ ಮ್ಯಾಳ ಉಳಿಲಿಲ್ಲ. ಕೈಯಾಗಿನ ತಾಳಿ ಬೆಂಕಿಗೆ ಬಿಸಾಕಿದ್ಲು, ಬಳೆಗಳನ್ನು ಕಲ್ಲಿಗೆ ಒಡೆದ್ಲು, ಸಾಂವಿ ಬೆಂಕಿ ಹಂತೇಕ ಹೊಂಟ್ಲು, ಆಗ ಎಲ್ಲರೂ ಹಿಡಿರಿ ಹಿಡಿರಿ, ಸಾಂವಕ್ಕ ಬೆಂಕಿ ಹಂತೇಕ ಹೊಂಟಾಳ ಹಿಡಿರಿ ಅಂತಾ ಕೋಗಿದ್ರು, ಅಷ್ಟರಾಗ ಸಾಂವಿ ಸ್ವಾಮ್ಯಾರ ಬೆಂಕಿಗೆ ಜಿಗದಬಿಟ್ಲು, ಸ್ವಾಮ್ಯಾರ ದೇಹದ ಜೊತೆಗೆ ಸಾಂವಕ್ಕನ ದೇಹಾನೂ ಕರಗಾಕ ಹತ್ತು,
“ಸಾಂವಿ ಬೆಂಕ್ಯಾಗ ಹಾರಿದ್ಲು, ಸಾಂವಿ ಬೆಂಕ್ಯಾಗ ಹಾರಿದ್ಲು,,,,, ಜನ ಬೊಬ್ಬೆ ಇಟ್ರು,,,,,” ಜನ ಎಲ್ಲಾ ಗುಸುಗುಸು-ಪಿಸಿ ಪಿಸಿ ಅಂತ ಮಾತಾಡಿಕೊಂಡ್ರು. ಸ್ವಾಮ್ಯಾರ ಸತ್ರ ಸಾಂವಕ್ಕ ಯಾಕ ಬೆಂಕಿಗೆ ಹಾರಿದ್ಲು ? ಸಾಂವಕ್ಕ ಯಾಕ ಬೆಂಕಿಗೆ ಹಾರಿದ್ಲು?
ಅನ್ನು ಪ್ರಶ್ನೆ ಎಲ್ಲರಿಗೂ ಬರೀ ಪ್ರಶ್ನೆಯಾಗಿಯೇ ಉಳಿತು.
• ಜಗದೀಶ ಕೆ. ಬಳಿಗೇರ, ದಾವಣಗೆರೆ.
(Mobile-7676745820)