ದಾವಣಗೆರೆ : ದಾವಣಗೆರೆ ಚೆಸ್ ಕ್ಲಬ್ ವತಿಯಿಂದ 4 ರಿಂದ 15 ವರ್ಷದ ಮಕ್ಕಳಿಗೆ ಏಪ್ರಿಲ್ 1 ರಿಂದ 15ನೇ ತಾರೀಖಿನವರೆಗೆ 15 ದಿನಗಳ ಕಾಲ ಬೇಸಿಗೆ ರಜೆಯ ಸಮಯದಲ್ಲಿ ರಾಷ್ಟ್ರೀಯ ತೀರ್ಪುಗಾರರು ಹಾಗೂ ತರಬೇತಿದಾರದಿಂದ ಬೇಸಿಗೆ ಚೆಸ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಎರಡು ಸ್ಥಳಗಳಲ್ಲಿ ಅಂದರೆ ತರಳಬಾಳು ಬಡಾವಣೆಯಲ್ಲಿ ಇರುವ ದಾವಣಗೆರೆ ಚೆಸ್ ಕ್ಲಬ್ ನಲ್ಲಿ ಮತ್ತು ನಿಜಲಿಂಗಪ್ಪ ಬಡಾವಣೆಯಲ್ಲಿರುವ ಎಸ್ ಎಸ್ ಭವನದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 8 ಗಂಟೆಯವರೆಗೆ ತರಬೇತಿ ಶಿಬಿರಗಳು ನಡೆಯಲಿದೆ ಹಾಗೂ ತರಬೇತಿ ಶಿಬಿರಕ್ಕೆ ಸೇರುವ ಮಕ್ಕಳು ಕೆಳಗಿನ ನಂಬರ್( ಯುವರಾಜ್ 9945613469 ಮಂಜುಳಾ 7259310197 ) ಸಂಪರ್ಕಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .