ಹರಿಹರ (Davangere District) : ಬೆಂಕಿ ನಗರದ ಆರೋಗ್ಯ ಕೇಂದ್ರದಲ್ಲಿ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಡಳಿತ ವೈದ್ಯಾಧಿಕಾರಿ ಅಬ್ದುಲ್ ಖಾದರ್ ಬೇಟಿ ನೀಡಿ, ತಾಯಿ ಕಾರ್ಡನ್ನು ಪರಿಶೀಲಿಸಿದರು.
ನಂತರ ತಾಯಂದಿರನ್ನು ಕುರಿತು ಮಾತನಾಡಿ ಹೆರಿಗೆ ಆದ ಅರ್ಧ ಗಂಟೆಗಳ ಒಳಗೆ ಮಗುವಿಗೆ ಎದೆಹಾಲನ್ನು ಕುಡಿಸಬೇಕು ಯಾಕೆಂದರೆ ಅದು ಅಮೃತಕ್ಕೆ ಸಮಾನ.
ನಂತರ’0’ಒಪಿವಿ’0’ಹೆಪಟೈಟಿಷ್ ಬಿ.. ಬಿಸಿಜಿ ಲಸಿಕೆಯನ್ನು ಹಾಕಿಸಬೇಕು. ಇವು ಮಗುವಿಗೆ ಮಾರಕ ರೋಗಗಳಿಂದ ರಕ್ಷಣೆ ನೀಡುತ್ತವೆ. ಮಗುವನ್ನು ಯಾವಾಗಲೂ ಬೆಚ್ಚಗೆ ಇಡಬೇಕು.
ಹುಟ್ಟಿದ ಮಗುವಿಗೆ ಪ್ರತಿ 2 ಗಂಟೆಗೊಮ್ಮೆ ಎದೆಹಾಲನ್ನು ಕುಡಿಸಬೇಕು. ಮಗುವಿಗೆ ಆರು ವಾರಗಳ ನಂತರ ಪೆಂಟಾ 1 ರೋಟಾ 1, ಐಪಿವಿ 1, ಪಿಸಿವಿ 1, ಔಷಧಿಗಳನ್ನು ಹಾಕಿಸಬೇಕು. ಎಂದು ತಿಳಿಸಿದರು.
Read also : Davangere news | ಮಾದಿಗರ ಸಮಾಜದಿಂದ ಸದಸ್ಯತ್ವ ಅಭಿಯಾನ
ಹತ್ತು ವಾರಗಳಲ್ಲಿ ಪೆಂಟಾ 2, ರೋಟಾ 2, ಒಪಿವಿ 2 ಇವುಗಳನ್ನು ಹಾಕಿಸಬೇಕು. ಕಾಲ ಕಾಲಕ್ಕೆ ತಕ್ಕಂತೆ ಮಗುವಿಗೆ ಲಸಿಕೆಗಳನ್ನು ಹಾಕಿಸುವ ಮೂಲಕ ನೀವು ನಿಮ್ಮ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು ಎಂದರು.
ಈ ಸಂದರ್ಭದಲ್ಲಿ ನಗರ ಆರೋಗ್ಯ ಕೇಂದ್ರದ ಡಾಕ್ಟರ್ ಕಾವ್ಯ. ತಾಲ್ಲೂಕು ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿ ನಾಗರಾಜ್, ತಾಲೂಕು ಬಿ ಪಿ ಎಂ. ಸ್ಮಿತಾ ಹಾಗೂ ತಾಯಂದಿರು ಉಪಸ್ಥಿತರಿದ್ದರು.