ದಾವಣಗೆರೆ: ಬೇತೂರು ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು 2023-24 ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಬೇತೂರು ಗ್ರಾಮ ಪಂಚಾಯತಿಯಿಂದ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನು ಸ್ಪಾಪಿಸಲಾಗಿದ್ದು ಸರ್ವರು ಅರಿವು ಕೇಂದ್ರದ ಸದುಪಯೋಗ ಪಡೆಯಲು ಸಚಿವರು ಕೋರಿದರು.
ಶ್ರೀ ಶ್ರೀ ಶ್ರೀ ವಾಲ್ಮೀಕಿ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿದ ಸಚಿವರು ನಮ್ಮ ಸರ್ಕಾರವು ಗ್ರಾಮಾಂತರ ಭಾಗಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಗೆ ಮುಂದಾಗಿದೆ, ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಶ್ರೀ ಶ್ರೀ ವಾಲ್ಮೀಕಿ ಸಮುದಾಯ ಭವನವು ಉದ್ಘಾಟಿಸಲಾಗಿದ್ದು ಸದುಪಯೋಗ ಪಡೆಯಲು ತಿಳಿಸಿದರು.
ಸ್ಥಳೀಯರ ಕೋರಿಕೆಯಂತೆ ಸಂವಿಧಾನದ ಶೀಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 6 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಗ್ರಾಮದ ಪ್ರಜ್ಞಾವಂತ ಯುವಕರ ಬಳಗ, ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಹಾಗೂ ನಿರ್ವಹಣೆ ಸಮಿತಿ, ಎಸ್.ಎಸ್ ಮಲ್ಲಿಕಾರ್ಜುನ ಅಭಿಮಾನಿ ಬಳಗದ ಕಾರ್ಯಗಳು ಸದಾ ಅಭಿವೃದ್ಧಿ ಪಥದಲ್ಲಿವೆ ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಅವರ ಆದರ್ಶ ಗ್ರಾಮದ ಪರಿಕಲ್ಪನೆಗೆ ಇಲ್ಲಿನ ಗ್ರಾಮಾಡಳಿತ ಸದಸ್ಯರು, ಊರಿನ ಮುಖಂಡರು, ಸಂಘ ಪರಿವಾರದವರು, ಗ್ರಾಮಸ್ಥರುಗಳು ಪಕ್ಷಾತೀತವಾಗಿ ಶ್ರಮಿಸಿರುವರು, ಗ್ರಾಮದ ಅಭಿವೃದ್ಧಿಗೆ ಯುವಕರ ಪಾತ್ರವು ಅತ್ಯಗತ್ಯವಾಗಿದೆ ಎಂದು ಸಚಿವರು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಆಂಜನೇಯ, ಎ.ಪಿ.ಎಂ.ಸಿಯ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಕಾಂಗ್ರೆಸ್ ಪಕ್ಷದ ಗ್ರಾಮಾಂತರ ಬ್ಲಾಕ್ ವಿಭಾಗದ ಅಧ್ಯಕ್ಷ ಮಾಗನಹಳ್ಳಿ ಪರಶುರಾಮ್, ಮುಖಂಡರಾದ ಬೂದಾಳ್ ಬಾಬು, ಅರುಣ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ ರೇವಣ ಸಿದ್ದಪ್ಪ, ಉಪಾಧ್ಯಕ್ಷೆ ಎಂ.ಲತಾ, ಗ್ರಾಮಪಂಚಾಯ್ತಿಯ ಸದಸ್ಯರುಗಳು, ಶ್ರೀ ಸವಗದ್ದಿಗೆ ಸಂಗಮೇಶ್ವರ ಕಮಿಟಿ, ಶ್ರೀ ಮಾರಿಕಾಂಭ ದೇವಿ ಕಮಿಟಿ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ, ಶ್ರೀ ಮರಿಯಮ್ಮ ದೇವಸ್ಥಾನ ಸಮಿತಿ, ಶ್ರೀ ಕಾಳಿಕಾಂಭ ದೇವಸ್ಥಾನ ಕಮಿಟಿ, ಶ್ರೀ ದುರ್ಗಾಂಭಿಕ ದೇವಸ್ಥಾನ ಸಮಿತಿ, ಶ್ರೀ ಗಂಗಾಪರಮೇಶ್ವರಿ ಸೇವಾ ಸಮಿತಿ, ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು, ಗ್ರಾಮದ ಮುಖಂಡರುಗಳು, ದಲಿತಪರ ಸಂಘಟನೆಗಳ ಒಕ್ಕೂಟದವರು ಮತ್ತು ಬುದ್ದ ಬಸವ ಅಂಬೇಡ್ಕರ್ ಅನುಯಾಯಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.