ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪದಾಧಿಕಾರಿಗಳಾದ ಟಿ. ರವಿಕುಮಾರ್, ಎಂ. ರವಿ (ಕೆಟಿಜೆ ನಗರ), ಆರ್. ಪ್ರಭಾಕರ್ ಪಾಂಡಮಟ್ಟಿ, ರಾಂಪುರ ರಮೇಶ್, ಮಾಯಕೊಂಡ ಗುಮ್ಮನೂರು ಮಂಜುನಾಥ್, ಎಚ್. ಮಲ್ಲಿಕಾರ್ಜುನ, ವಂದಾಲಿ ಬಿ., ಕಲಪನಹಳ್ಳಿ ಜಿಲ್ಲಾ ಖಜಾಂಚಿ, ಹಾಗೂ ವಿವಿಧ ತಾಲೂಕು ಪದಾಧಿಕಾರಿಗಳಾದ ಕೆಂಚಮ್ಮನಹಳ್ಳಿ ರುದ್ರೇಶ್, ಮಾರಿಕೊಪ್ಪ ಮಂಜುನಾಥ್, ಎಂ. ಕೃಷ್ಣಪ್ಪ (ಹರಿಹರ), ಮೂರ್ತಿ (ತಿಪ್ಪಗೊಂಡನಹಳ್ಳಿ), ಸುನಿಲ್ ಬಾತಿ, ಚಿಕ್ಕನಹಳ್ಳಿ ನಿಂಗರಾಜ್, ಚಿಕ್ಕತೊಗಲೇರಿ ಶಿವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂವಿಧಾನ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ : ಐಜಿಪಿ ಡಾ.ರವಿಕಾಂತೇಗೌಡ
ದಾವಣಗೆರೆ : ಸಂವಿಧಾನದ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಪೂರ್ವ ವಲಯ ಐಜಿಪಿ ಡಾ.ರವೀಕಾಂತೇಗೌಡ ಹೇಳಿದರು.
ನಗರದ ಕನ್ನಡ ಕುವೆಂಪು ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಏರ್ಪಡಿಸಿದ್ದ “ಪ್ರಸ್ತುತ ದಲಿತ ಚಳುವಳಿ ಹಾಗೂ ಭಾರತೀಯ ಸಂವಿಧಾನ ಅನುಷ್ಠಾನ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನನಗೂ ಹಾಗೂ ನನ್ನ ತಂದೆಯವರಿಗೆ ಯಶಸ್ಸು ಹಾಗೂ ಗೌರವಯುತ ಸ್ಥಾನ ಮಾನ ಸಿಗಲು ಪ್ರಮುಖ ಕಾರಣ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ಎಂದರು.
ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿ, ಅಂಬೇಡ್ಕರ್ ಅವರ ಆಶಯದಂತೆ ಜಾತಿ ರಹಿತ, ವರ್ಣ ರಹಿತ, ಸಮ ಸಮಾಜ ನಿರ್ಮಿಸುವ ಕಡೆಗೆ ಹೋಗಬೇಕು ಎಂದರು.
ಅಧ್ಯಕ್ಷತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ವಹಿಸಿದ್ದರು. ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿದರು.
ಡಾ. ಎಚ್. ವಿಶ್ವನಾಥ್ , ಸತ್ಯ ಭದ್ರಾವತಿ ಇಂದಿನ ದಲಿತ ಚಳುವಳಿಯ ಸವಾಲುಗಳು ಮತ್ತು ಸಂವಿಧಾನದ ಅನುಷ್ಠಾನದ ಅಗತ್ಯತೆ ವಿವರಿಸಿದರು.
ಮುಖಂಡರಾದ ಎಸ್.ಟಿ. ವೀರೇಶ್, ಆಲೂರು ನಿಂಗರಾಜ್, ಡಿ.ಎಸ್ ಎಸ್. ಮಲ್ಲೇಶ್, ಚಿನ್ನಯ್ಯ, ಡಾ. ಸಿ.ಎಂ. ರವಿಕುಮಾರ್, ಗುರುರಾಜ್ ಸೊರಬ, ಪ್ರಭಣ್ಣ ಹೂವಿನಮಡು, ಮುಸ್ತಫಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಂದನ ಎಚ್.ಎನ್. ಆಲೂರು ನಿರೂಪಿಸಿದರು.. ಟಿ. ರವಿಕುಮಾರ್ ಸ್ವಾಗತಿಸಿದರು. ಆರ್. ಪ್ರಭಾಕರ್ ಪಾಂಡಮಟ್ಟಿ ವಂದಿಸಿದರು.
Leave a comment
