ದಾವಣಗೆರೆ : ಬೇಸಿಗೆ ಬಿಸಿಲು ಕೇವಲ ತಾಪವಲ್ಲ. ಅದು ಕಾಣದ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ. ಸಾಂಕ್ರಾಮಿಕ ರೋಗಗಳು ನಮ್ಮ ಬಾಗಿಲಿಗೆ ಬರುತ್ತವೆ ಎಂದು ಜ ಜ ಮು ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅನುರೂಪ ಎಂ ಎಸ್ ಹೇಳಿದರು.
ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನ ಕೇಂದ್ರ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದ ಅಡಿಯಲ್ಲಿ ಬೇಸಿಗೆ- ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರವಿರಲಿ ವಿಷಯದ ಕುರಿತು ಮಾತನಾಡಿದರು.
ಬೇಸಿಯಲ್ಲಿ ಸಾಂಕ್ರಾಮಿಕ ರೋಗಗಳು ಏಕೆ ಕಂಡುಬರುತ್ತವೆ: ಧೂಳು ಮತ್ತು ಶುಷ್ಕತೆಯಿಂದ ಕೂಡಿದ ವಾತಾವರಣದಿಂದ ಬಿಸಿಲಿನ ತಾಪದಲ್ಲಿ ರೋಗಾಣುಗಳು ಪುಷ್ಕಳವಾಗಿ ಸಂವರ್ಧನೆ ಗೊಂಡು ಅಧಿಕವಾಗಿ ಬೆಳವಣಿಗೆಗೊಂಡು ಕ್ರಿಯಾಶೀಲವಾಗಿರುತ್ತವೆ. ದೇಹದಲ್ಲಿ ತೇವಾಂಶ ಕಡಿಮೆಯಾಗುವುದರಿಂದ ರೋಗಾಣುಗಳು ವೇಗವಾಗಿ ಹರಡುತ್ತವೆ. ಬಹುತೇಕ ಜಾತ್ರೆಗಳು ಬೇಸಿಗೆಯಲ್ಲಿ ಆಚರಿಸುವುದರಿಂದ ಅಶುದ್ಧ ನೀರು, ಅಶುದ್ಧ ಆಹಾರ, ಸ್ವಚ್ಛತೆಯ ಕೊರತೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ತಿಳಿಸಿದರು.
ಐದು ವರ್ಷದೊಳಗಿನ ಮಕ್ಕಳು,ವಯೋವೃದ್ಧರು, ಗರ್ಭಿಣಿಯರು, ಮಧುಮೇಹ ರೋಗಿಗಳು,ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು(ಕ್ಯಾನ್ಸರ್ ರೋಗಿಗಳು, ಮೂತ್ರಪಿಂಡದ ತೊಂದರೆಯಿಂದ ಡಯಾಲಿಸಿಸ್ ಪಡೆಯುವ ರೋಗಿಗಳು) ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಗಳಿಂದ ಬಳಲುತ್ತಾರೆ ಎಂದು ವಿವರಿಸಿದರು.
ಕಾಲರಾ, ಅತಿಸಾರ, ಟೈಪಾಯಿಡ್ : ಶೇಕಡಾ 50ರಷ್ಟು ಐದು ವರ್ಷದೊಳಗಿನ ಮಕ್ಕಳು. ಮಕ್ಕಳು ಬೇಸಿಗೆಯಲ್ಲಿ ಅತಿಸಾರದಿಂದ ಬಳಲುತ್ತಾರೆ. ಅತಿಸಾರದಿಂದ ಉಂಟಾಗುವ ನಿರ್ಜಲೀಕರಣದಿಂದ ಶೇಕಡಾ ಮಕ್ಕಳು ಮರಣ ಹೊಂದುತ್ತಾರೆ. ಕಾಮಾಲೆ ರೋಗ (Hepatits A): ಕಲುಷಿತ ನೀರಿನಿಂದ ಹರಡುವ ರೋಗ ಕರಾವಳಿ ಪ್ರದೇಶದಲ್ಲಿ ಸರ್ವೇ ಸಾಮಾನ್ಯ. ಇದು ಯಕೃತ್ತಿಗೆ ಹಾನಿ ಉಂಟು ಮಾಡಿ, ಚರ್ಮ, ಉಗುರನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ ಎಂದು ಮಾಹಿತಿ ನೀಡಿದರು.
ಗಾಳಿಯಿಂದ ಹರಡುವ ರೋಗಗಳು :
1 ಸಿಡುಬು : ಇದು ಎಂಬ Vaicella ವೈರಸ್ ನಿಂದ ಉಂಟಾಗುವ ರೋಗ. ಇದು ಗಾಳಿಯ ಮೂಲಕ ಸೋಂಕಾದ ವ್ಯಕ್ತಿಯ ಸಂಪರ್ಕದಿಂದ ಹರಡುವ ರೋಗ. ಜ್ವರ, ಮೈ ಮೇಲೆ ನೀರಿನಗುಳ್ಳೆ ಇದರ ಗುಣ ಲಕ್ಷಣ.
2. ದಡಾರ.
ಸೊಳ್ಳೆಗಳಿಂದ ಹರಡುವ ರೋಗಗಳು.
1. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯ
2. ಮದ್ರಾಸ್ ಐ/ ಕಣ್ಣು ಬೇನೆ.
ಬೇಸಿಗೆಯಲ್ಲಿ ಸಾಂಕ್ರಾಮಿ ರೋಗಗಳನ್ನು ಹೇಗೆ ತಡೆಗಟ್ಟುವುದು :
1. ಆಹಾರ ಸೇವನೆ
ಏನು ಕುಡಿಯಬೇಕು?
1. ಶುದ್ಧವಾದ ನೀರು (ಕಾಯಿಸಿ ಆರಿಸಿದ ನೀರು)ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್
2. ಎಳನೀರು, ಮಜ್ಜಿಗೆ, ರಾಗಿ ಅಂಬಲಿ.
3. ನಿಂಬೆ ಹಣ್ಣಿನ ಷರಬತ್ತು, ಬಾರ್ಲಿ ನೀರು, ಹಣ್ಣಿನ ರಸ.
ಏನು ತಿನ್ನಬೇಕು?
1 ಮನೆಯಲ್ಲಿ ತಯಾರಿಸಿದ ತಾಜ ಬಿಸಿಯಾದ ಆಹಾರ ಸೇವನೆ.
2. ನೀರಿನ ಅಂಶ ಅಧಿಕವಾಗಿರುವ ಹಣ್ಣಗಳು, ಕಲ್ಲಂಗಡಿ ಕರ್ಬೂಜ, ದ್ರಾಕ್ಷಿ, ಕಿತ್ತಳೆ. ತರಕಾರಿಗಳು- ಸೌತೆಕಾಯಿ, ಸೊರೆಕಾಯಿ, ಕುಂಬಳ ಕಾಯಿ, ಟಮೋಟೊ, ಮೊಸರು
ಯಾವುದನ್ನು ದೂರವಿಡಬೇಕು? ಅತಿಯಾದ ಖಾರ, ಕರಿದ ಪದಾರ್ಥಗಳು, ಬೇಕರಿ ತಿಂಡಿಗಳು, ಬೀದಿಯಲ್ಲಿ ಕತ್ತರಿಸಿದ ಹಣ್ಣುಗಳು, ಹಣ್ಣಿನ ರಸ, ತೆರಿದಿಟ್ಟ ಆಹಾರಗಳು, ಅತಿಯಾದ ಕಾಫಿ- ಟೀ, ಕಾರ್ಬೊನೇಟಿಡ್ ತಂಪು ಪಾನೀಯಾಗಳು.
2. ಸ್ವಚ್ಛತೆ: ವೈಯುಕ್ತಿಕ ಸ್ವಚ್ಛತೆ. ಶೌಚಾಲಯ ಬಳಸಿದ ನಂತರ ಹಾಗೂ ಊಟಕ್ಕೂ ಮುನ್ನ ಸಾಬೂನಿನಿಂದ ಕೈ ತೊಳೆಯುವುದು. ದಿನಕ್ಕೆ 2 ಸಾರಿ ಸ್ನಾನ ಮಾಡುವುದು ಪರಿಸರ ಸ್ವಚ್ಛತೆ (ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದು)
ಶುದ್ಧ ಆಹಾರ, ಶುದ್ಧ ನೀರು. ಸೊಳ್ಳೆ ನಿಯಂತ್ರಣ ಕ್ರಮಗಳು.
ಮುನ್ನೆಚ್ಚರಿಕೆಗಳು: ಬೆಳಿಗ್ಗೆ 11 ರಿಂದ ಮಧ್ಯಾಹ್ನ 4ರವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸುವುದು. ಸರಿಯಾದ ಕಾಟನ್ ಉಡುಪುಗಳನ್ನು ಧರಿಸುವುದು. ಕೆಮ್ಮು ಶೀತ ಜ್ವರವಿರುವ ವ್ಯಕ್ತಿಗಳನ್ನು ಮನೆಯಲ್ಲಿರುವಂತೆ ಹಾಗೂ ಸೋಂಕು ತಡೆಗಟ್ಟುವಂತೆ ಮಾಡುವುದು.
ಲಸಿಕೆಗಳು: ಮಕ್ಕಳಿಗೆ ನಿಯಮಿತವಾಗಿ ದಡಾರ, ಟೈಪಾಯಿಡ್, ಚಿಕನ್ ಪಾಕ್ಸ್ ಹಾಗೂ ರೋಟಾ ವೈರಸ ಲಸಿಕೆಗಳನ್ನು ನೀಡಬೇಕು.
ವಯಸ್ಕರರಿಗೆ ಹೆಪಟೆಟಿಸ್ ಎ ಹಾಗೂ ಇನ್ಪ್ಲೂಯನ್ಬ ಲಸಿಕೆ ನೀಡಬೇಕು. ಒಟ್ಟಾರೆಯಾಗಿ ಬೇಸಿಗೆಯಲ್ಲಿ ಶುದ್ಧವಾದ ನೀರು ತಾಜ ಮನೆಯೂಟ ಮತ್ತು ವೈಯುಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದೇ ಬಹುತೇಕ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಪ್ರಬಲವಾದ ಅಸ್ತ್ರ ವಾಗಿದೆ ಎಂದು ಹೇಳಿದರು.
Read also : ಸಾಂಪ್ರದಾಯಿಕ ಅಲೆಮಾರಿ ಕುರುಗಾಹಿಗಳ ಕಡೆ ಕರ್ನಾಟಕ ಸರ್ಕಾರ ಗಮನ ಹರಿಸಲಿ
ಕಾರ್ಯಕ್ರಮದಲ್ಲಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞ ಡಾ. ಬಾಣಪುರಮಠ್, ಆಸ್ಪತ್ರೆಯ ವ್ಯವಸ್ಥಾಪಕ ಗುಬ್ಬಿ, ಡಾ. ಕೌಜಲಗಿ, ಡಾ.ಮೃತ್ಯುಂಜಯ, ಡಾ. ರೇವಪ್ಪ, ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
