ಹರಿಹರ: ನಗರದ ಹಜರತ್ ನಾಡಬಂದ್ ಷಾವಲಿ ದರ್ಗಾದ ಕಾಣಿಕೆ ಹುಂಡಿ ಹಣ ಕಳ್ಳತನವಾಗಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ದರ್ಗಾದ ಮುಜಾವರ್ (ಪೂಜಾರಿ) ಇಸ್ಮಾಯಿಲ್ ಸಾಬ್‍ರವರು ಈ ಹಿಂದೆ ಕಾಣಿಕೆ ಹುಂಡಿ ಕಳ್ಳತನವಾಗಿರುವ ಬಗ್ಗೆ ಈ ಹಿಂದೆ ಪೊಲೀಸ್ ಹಾಗೂ ದಾವಣಗೆರೆಯ ವಕ್ಫ್ ಅಧಿಕಾರಿಗಳಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಕೋರಿದ್ದರು.
ಹುಂಡಿಯಲ್ಲಿದ್ದ ಅಂದಾಜು ರೂ.1 ಲಕ್ಷ ಹಣ ಯಾರೋ ಕಳ್ಳರು ಕಳೆದ ಏ.17 ರಂದು ರಾತ್ರಿ ಕಳ್ಳತನ ಮಾಡಿದ್ದಾರೆಂದು ಜು.12 ರಂದು ದಾಖಲಿಸಿಕೊಂಡ ದೂರಿನಲ್ಲಿ ವಿವರಿಸಲಾಗಿದೆ.
ಹಳೆ ಪಿ.ಬಿ.ರಸ್ತೆಯ ಬದಿಯಲ್ಲೆ ಇರುವ ಈ ದರ್ಗಾದಲ್ಲಿ ಸೂಕ್ತ ಭದ್ರತೆಯಲ್ಲಿದ್ದರೂ ಕಾಣಿಕೆ ಹುಂಡಿಯ ಹಣ ಕಳ್ಳತನವಾಗಿರುವ ಘಟನೆ ನಗರದ ಜನತೆಗೆ ಚಕಿತಗೊಳಿಸಿತ್ತು.
Read also : ದಾವಣಗೆರೆ | ಕಾನೂನು ಪದವೀಧರರಿಗೆ ಮಾಸಿಕ ತರಬೇತಿ ಭತ್ಯೆ ನೀಡಲು ಅರ್ಜಿ ಆಹ್ವಾನ