ದಾವಣಗೆರೆ : ದಾವಣಗೆರೆ ಜಿಲ್ಲಾ ಓಲ್ಡ್ ಟೈರ್ ರಿಪೇರಿದಾರರು ಹಾಗೂ ಮಾರಾಟಗಾರರ ಸಂಘದ ವತಿಯಿಂದ ಹಾಗೂ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತೆ ಮಂಡಳಿಯಿಂದ ಲೇಬರ್ ಕಾರ್ಡ್ ವಿತರಣಾ ಸಮಾರಂಭ ಬಿಲಾಲ್ ಕಾಂಪೌಂಡನಲ್ಲಿರುವ ಸಂಘದ ಕಚೇರಿಯಲ್ಲಿ ಇತ್ತಿಚೀಗೆ ನಡೆಯಿತು.
ಇದೇ ವೇಳೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಹಳೇ ಟೈರು ರಿಪೇರಿಗಾರರಿಗೆ ಸ್ಮಾರ್ಟ್ ಲೇಬರ್ ಕಾರ್ಡ್ ವಿತರಣೆ ಮಾಡಲಾಯಿತು.
ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ 500 ಓಲ್ಡ್ ಟೈರ್ ರಿಪೇರಿಗಾರರಿಗೆ ಇದ್ದಾರೆ.ಅದರಲ್ಲಿ 150 ಜನರಿಗೆ ಈಗ ವಿತರಿಸಲಾಗಿದೆ. ಉಳಿದವರಿಗೂ ಹಂತ -ಹಂತವಾಗಿ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಕಾರ್ಯದರ್ಶಿ ಲಿಯಾಖತ್ ಮಾತನಾಡಿ, ಓಲ್ಡ್ ಟೈರ್ ರಿಪೇರಿ ಮಾಡುವವರು ಬಡತನದಿಂದ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರಕಾರ ಇವರಿಗೂ ಲೇಬರ್ ಕಾರ್ಡ್ ವಿತರಿಸುವ ಮೂಲಕ ಭದ್ರತೆ ಒದಗಿಸಿದೆ. ಜಿಲ್ಲೆಯಲ್ಲಿರುವ ಎಲ್ಲ ಓಲ್ಡ್ ಟೈರ್ ಕೆಲಸ ಮಾಡುವವರು ಕಚೇರಿಗೆ ಬಂದು ಕಾರ್ಡ್ ಮಾಡಿಕೊಳ್ಳುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಪಂಚರ್‌ಶಾಪ್ , ವಿಲ್ ಆಲೈನ್‍ಮೆಂಟ್ ಟೈರ್ ಕೆಲಸ ಮಾಡುವವರು ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
Read also : Political analysis |ಇದು ಡಿಕೆಶಿ ಕ್ಯಾಂಪಿನ ಲೇಟೆಸ್ಟು ಚಿಂತೆ
ಕಾರ್ಯಕ್ರಮದಲ್ಲಿ ಕಾರ್ಮಿಕಾಧಿಕಾರಿ ಅರವಿಂದ್, ಕಾರ್ಮಿಕ ಇಲಾಖೆಯ ಜಿಲ್ಲಾ ಸಂಯೋಜಕ ಚಿಕ್ಕಣ್ಣ, ಗೌರವಾಧ್ಯಕ್ಷ ಶೇಖ್ ಆಹಮದ್, ಹಯಾತ್ ಸಾಬ್, ಜೆ.ಕೆ.ಖಲೀಲ್, ಉಪಾಧ್ಯಕ್ಷ ಮಹಮದ್ ಆಲಿ, ಸಹಕಾರ್ಯದರ್ಶಿ ಇರ್ಫಾನ್, ಎಂ.ಕೆ.ದಾದಾಪೀರ್, ಜಬೀವುಲ್ಲಾ, ಫಯಾಜ್, ಸಲ್ಮಾನ್, ಕಲೀಲ್ ಸೇರಿದಂತೆ ಇತರರು ಇದ್ದರು.