ದಾವಣಗೆರೆ :
ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ 27ನೇ ರಾಜ್ಯ ಸಮ್ಮೇಳನವು ಕೋಲಾರದಲ್ಲಿ ಮಾ 16 &17 ರಂದು ನೆಡೆದಿದ್ದು, ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ದಾವಣಗೆರೆ ಆನಂದರಾಜು ಕೆ.ಹೆಚ್., ಪ್ರಧಾನ ಕಾರ್ಯದರ್ಶಿಯಾಗಿ ರಾಯಚೂರಿನ ಕಾಂ.ಗುರುರಾಜ ದೇಸಾಯಿ, ಖಜಾಂಚಿಯಾಗಿ ಬೆಂಗಳೂರಿನ ಕಾಂ.ಸತ್ಯಪೂರ್ಣ ಇವರನ್ನು ಆಯ್ಕೆ ಮಾಡಲಾಯಿತು,
ಉಪಾಧ್ಯಕ್ಷರಾಗಿ ಚಂದ್ರಕುಮಾರ್, ಜಯಗಣೇಶ್, ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿ ಸಿ.ಬಿ. ಕುಲಕರ್ಣಿ ಹಾಗೂ ರಾಜ್ಯ ಕಾರ್ಯದರ್ಶಿಗಳಾಗಿ ಎ.ವೆಂಕಟೇಶ, ಶಶಿಪ್ರಕಾಶ್, ಪ್ರವೀಣ್ ಶಿವಶಂಪಿ, ಶರಣಬಸಪ್ಪ ಲಕ್ಷ್ಮೀನಾರಾಯಣ ಜೋಷಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಆನಂದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
