ದಾವಣಗೆರೆ : ಈ ವರ್ಷ ರಥಸಪ್ತಮಿಯನ್ನು ಆಚರಿಸಿದ ಮರುದಿನವೇ 77ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಇತಿಹಾಸದಲ್ಲಿ ಒಂದು ಸುಂದರ ಸಡಗರ, ಸಂಭ್ರಮದ ದೇಶದ ಉತ್ಸವವಾಗಿದೆ ಎಂದು ಹಿರಿಯ ಸರ್ಕಾರಿ ನ್ಯಾಯವಾದಿ ವೈ.ಮಂಜಪ್ಪ ಕಾಕನೂರು ಅಭಿಪ್ರಾಯಪಟ್ಟರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಇಂದಿನ ವಿದ್ಯಾರ್ಥಿಗಳೇ ನಿಜವಾದ ದೇಶದ ರಕ್ಷಕರು, ಸೈನಿಕರು ಮತ್ತು ಯೋಧರು. ಅಂಕ ಗಳಿಕೆಯೇ ಶಿಕ್ಷಣವಲ್ಲ, ನೈತಿಕ ಶಿಕ್ಷಣ, ಬದುಕಿನ ಶಿಕ್ಷಣ ಈ ಶಾಲೆಯಲ್ಲಿ ದೊರೆಯುತ್ತಿದೆ. ಸಂವಿಧಾನ ಎಂದರೆ ಕೇವಲ ಒಂದು ಪುಸ್ತಕವಲ್ಲ, ಅದು ನಮ್ಮ ದೇಶದ ಆಡಳಿತದ ದಾರಿದೀಪವಾಗಿದೆ ಎಂದರು.
ಪ್ರಪಆಚದ ಅತ್ಯಂತ ದೊಡ್ಡ ಸಂವಿಧಾನ ಭಾರತದ ಸಂವಿಧಾನ. ಭಾರತದ ಗಣರಾಜ್ಯೋತ್ಸವ ಅತೀ ದೊಡ್ಡ ದೇಶದ ಹಬ್ಬ ಮತ್ತು ಉತ್ಸವವಾಗಿದೆ. ದಾರ್ಶನಿಕರು, ಆಚಾರ್ಯರು, ವಿದ್ವಾಂಸರು ಬಾಳಿ ಬೆಳಕು ನೀಡಿದ ದೇಶ, ನಮ್ಮ ಭಾರತ. ಸಂವಿಧಾನ ನಿಂತ ನೀರಲ್ಲ, ಹರಿಯುವ ನದಿಯಂತೆ, ದೇಶ, ಭಾರತದ ಭಾಷೆ, ವ್ಯವಸ್ಥೆಗೆ ತಕ್ಕಂತೆ ಹಲವಾರು ತಿದ್ದುಪಡಿ. ಕಾನೂನುಗಳು ನಮಗಾಗಿಯೇ ಇರುವುದು. ಕಾನೂನುಗಳನ್ನು ನಾವು ಪಾಲಿಸಬೇಕು ಮತ್ತು ಗೌರವಿಸಬೇಕು.
ರಾಷ್ಟç ಪ್ರೇಮ, ರಾಷ್ಟç ಪುಸ್ತಕವು ಪ್ರತಿಯೊಬ್ಬರಲ್ಲೂ ಇರಬೇಕು. ಅದು ನಮ್ಮ ಭಾವನಾತ್ಮಕ ಬದುಕಿನೊಂದಿಗೆ ಬೆಸೆದುಕೊಂಡಿದೆ. ನಮ್ಮ ರಾಷ್ಟçಗೀತೆಯನ್ನು ಬೇಕಾದಂತೆ ದುರುಪಯೋಗ ಪಡಿಸಿಕೊಳ್ಳಲಾಗಿದೆ. ರಾಷ್ಟçಗೀತೆಗೆ ಪ್ರತಿಯೊಬ್ಬ ಭಾರತೀಯನಿಗೂ ಗೌರವ ಸಲ್ಲಿಸಬೇಕು. ಸಂವಿಧಾನ ನಮಗೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದೆ. ಸಮಾನತೆ ಮತ್ತು ಸ್ವಾತಂತ್ರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರಮ್ಮ ಟ್ರಸ್ಟ್ ನಿರ್ದೇಶಕರಾದ ಕೆ.ಆರ್.ಸುಜಾತ ಕೃಷ್ಣ, ಪರಕೀಯರ ಆಳ್ವಿಕೆಯಿಂದ ನಮ್ಮ ದೇಶವನ್ನು ಸ್ವತಂತ್ರಗೊಳಿಸಿದದಿನ ಶುಭ ಸ್ವಾತಂತ್ರ್ಯ ದಿನವಾದರೆ, ಗಣತಂತ್ರ ದಿವಸ ನಮ್ಮನ್ನು ನಾವು ಅಭಿವೃದ್ಧಿಗೊಳಿಸಿಕೊಂಡು ಬದುಕಲು ಬೇಕಾದ ಶಿಸ್ತುಬದ್ಧ ನಿಯಮವನ್ನು ಪಾಲಿಸಿ, ಮೌಲ್ಯಯುತ ಜೀವನ ನಡೆಸಲು ಸಾಧ್ಯವಾಗುವ ಸಂವಿಧಾನ ಜಾರಿಗೆ ಬಂದ ದಿನ ಎಂದರು.
ಭಾರತದಆತಃ ಪವಿತ್ರ ಭೂಮಿಯಲ್ಲಿ ನಾವು ಜನಿಸಿರುವುದು ನಮ್ಮ ಜನ್ಮಜನ್ಮಾಂತರಗಳ ಪುಣ್ಯ ಫಲವಾಗಿದೆ. ಸಾಮಾಜಿಕವಾಗಿ ಮೌಲ್ಯಗಳನ್ನು ಬೆಳೆಸಿಕೊಂಡು ಚಿಂತನ ಶೀಲರಾಗಿ, ಮೌಲ್ಯಯುತ ಬದುಕನ್ನು ನಡೆಸುವಂತವರಾಗಬೇಕೆ ಆದರು.
ಈ ವೇಳೆ ಪ್ರಾಂಶುಯಪಾಲರಾದ ಕೆ.ಎಸ್. ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಇಬ್ಬರು. ಸಬಿಹಾ ಬಾನು ಸ್ವಾಗತಿಸಿದರು. ಎನ್.ಸಿ.ವಿಜಯ ವಸ್ತು. ವಿ.ಸುನೀತಾ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
