ದಾವಣಗೆರೆ (Davanagere) : ಸಂಚಾರಿ ನಿಯಮ ಪಾಲನೆ ಮಾಡದ ಹಾಗೂ ಸೂಕ್ತ ದಾಖಲೆ ಇಲ್ಲದ ಹಿನ್ನಲೆಯಲ್ಲಿ ಟ್ರ್ಯಾಕ್ಟರ್ ಮಾಲೀಕರ ವಿರುದ್ದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಗಿರಿ ಪೊಲೀಸ್ ಠಾಣೆಯ ಪಿಎಸ್‍ಐ ಸುರೇಶ್ ಅವರು ಚನ್ನಗಿರಿ ಟೌನಿನ ಬಸ್ ನಿಲ್ದಾಣದ ಬಳಿ ತಾವರೆಕೆರೆ ಕ್ರಾಸ್ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದು ನಿಲ್ಲಿಸಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗೆ ಸಂಬಂಧಿಸಿದ ದಾಖಲೆಗಳನ್ನು ಚಾಲಕನ ಬಳಿ ದಾಖಲೆ ಪರಿಶೀಲಿಸಿದಾಗ ಸೂಕ್ತ ದಾಖಲೆ ಇಲ್ಲದೆ ಇರುವುದು ಕಂಡು ಬಂದಿದೆ.
ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯ ನೊಂದಣಿ ಸಂಖ್ಯೆ ಪರಿಶೀಲಿಸಿದಾಗ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗೆ ಯಾವುದೇ ನಂಬರ್ ಬರೆಸದೇ ಇರುವುದು ಕಂಡು ಬಂದಿದೆ. ಟ್ರ್ಯಾಲಿಯ ಹಿಂಭಾಗ ನೋಡಲಾಗಿ ಯಾವುದೇ ಸೂಚನಾ ರೇಡಿಯಂ ಸ್ಟಿಕ್ಕರ್ ಗಳನ್ನು ಆಂಟಿಸದೇ ಇರುವುದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯ ಚಾಲಕನಾದ ಚನ್ನಗಿರಿ ತಾ ಆಗರಬನ್ನಿಹಟ್ಟಿ ಗ್ರಾಮ ಅವಿನಾಶ ವಿರುದ್ದ ಚನ್ನಗಿರಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read also : Davanagere : ಗಾಂಜಾ ಮಾರಾಟ ಆರೋಪಿ ಬಂಧನ
ಸಾರ್ವಜನಿಕರು ಟ್ರ್ಯಾಕ್ಟರ್ ಮಾಲೀಕರು ಹಾಗೂ ಚಾಲಕರ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಯುವ ಸಲುವಾಗಿ ಎಲ್ಲಾ ಟ್ರ್ಯಾಕ್ಟರ್ ಮತ್ತು ಅದರ ಟ್ರ್ಯಾಲಿಯ ಹಿಂಭಾಗ ಹಾಗೂ ಮುಂಭಾಗದಲ್ಲಿ ಸೂಚನಾ ರೇಡಿಯಂ ಸ್ಟಿಕ್ಕರ್ ಗಳನ್ನು ಅಂಟಿಸುವುದು ಕಡ್ಡಾಯವಾಗಿದೆ ಹಾಗೂ ಸಂಚಾರ ನಿಯಮಗಳ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.