ಹರಿಹರ: ಹರಿಹರದ ಕಾಳಿದಾಸನಗರದಲ್ಲಿ ಅಪ್ರಾಪ್ತ ಚಾಲಕ ಬೊಲೆರೊಜೀಪ್ ಚಾಲನೆ ಮಾಡುತ್ತಿದ್ದ ಪ್ರಕರಣದಲ್ಲಿ ಜೀಪ್ ಮಾಲಿಕ ಧಾರವಾಡ ಜಿಲ್ಲೆಯ ರಾಮಚಂದ್ರ ಮಟ್ಟಿಯವರಿಗೆ ಇಲ್ಲಿನ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ರೂ.25,000ದಂಡ ವಿಧಿಸಿ ಆದೇಶಿಸಿದೆ.
ಆ.3 ರಂದು ನಗರ ಪೊಲೀಸ್ ಠಾಣ್ ಇನ್ಸ್ಪೆಕ್ಟರ್ ಆರ್.ಎಫ್.ದೇಸಾಯಿ ಗಸ್ತಿನಲ್ಲಿದ್ದಾಗ ಚಾಲನೆಯಲ್ಲಿದ್ದ ಬೊಲೆರೊ ಜೀಪನ್ನು ತಡೆದು ವಿಚಾರಿಸಿದಾಗ ಚಾಲಕ ಅಪ್ರಾಪ್ತ ಬಾಲಕ ಎಂಬುದು ದೃಢವಾಗಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆ. 6ರಂದು ಜೀಪಿನ ಮಾಲಿಕ ಧಾರವಾಡ ಜಿಲ್ಲೆಯ ರಾಮಚಂದ್ರ ಮಟ್ಟಿ ಇವರಿಗೆ ಭಾರತೀಯ ಮಾಟರ್ ವಾಹನ ಕಾಯ್ದೆಯನ್ವಯ ರೂ.25,000 ಮೊತ್ತದ ದಂಡವನ್ನು ವಿಧಿಸಿ ಆದೇಶಿಸಿದೆ.
Read also : ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ | ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಬೈಕ್, ಕಾರು ಸೇರಿದಂತೆ ಯಾವುದೇ ವಾಹನವನ್ನು 18 ವರ್ಷದೊಳಗಿನವರಿಗೆ ಹಾಗೂ ಚಾಲನ ಪರವಾನಿಗೆ ಇಲ್ಲದವರಿಗೆ ಚಾಲನೆಗಾಗಿ ನೀಡಬಾರದು, ಅಪ್ರಾಪ್ತರಿಗೆ ವಾಹನ ನೀಡುವ ವಾಹನ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.