ದಾವಣಗೆರೆ : ಶನಿವಾರ ದಾವಣಗೆರೆ ಬಂದ್ ಕರೆ ನೀಡಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರ ಮೇಲೆ ಮಾಡಿದ ದಬ್ಬಾಳಿಕೆ-ದೌರ್ಜನ್ಯ ಖಂಡಿಸಿ ದಾವಣಗೆರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೆಟೆಜೆ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾರ್ವಜನಿಕರ ಮೇಲೆ ದೌರ್ಜನ್ಯದಿಂದ ಕಲ್ಲಿನಿಂದ ಹೊಡೆಯುವುದಾಗಿ ಹೆದರಿಸಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳು ಹಾಗೂ ಬಸ್ಸು- ಆಟೋಗಳ ಚಾಲಕರ ಮೇಲೆ ದಬ್ಬಾಳಿಕೆ ಮಾಡಿ ಅದರಲ್ಲಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೂ ಸಹ ಅವಾಚ್ಯ ಶಬ್ಧದ ಬಳಕೆ ಮಾಡಿ ದೌರ್ಜನ್ಯ ಎಸಗಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಶಾಸಕ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಜೊತೆಗೆ ವಾಟರ್ ಮಂಜುನಾಥ್, ಹಾಲೇಶ್ ಹಾಗೂ ಸಂಗಡಿಗರ ವಿರುದ್ಧ ದಾವಣಗೆರೆ ಯುವ ಕಾಂಗ್ರೆಸ್ ಮುಖಂಡರುಗಳಿಂದ ದೂರು ಸ್ವೀಕರಿಸಿ, ಎಫ್. ಐ. ಆರ್. ದಾಖಲಿಸಿದ್ದಾರೆ.
Read also : ಹರಿಹರ | ಹಜರತ್ ನಾಡಬಂದ್ ಷಾವಲಿ ದರ್ಗಾದ ಕಾಣಿಕೆ ಹುಂಡಿಗೆ ಬೀಗ
ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಚಿರಂಜೀವಿ, ಬಿಲಾಲ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್. ಬಿ. ಜಿ., ಮಹಬೂಬ್ ಬಾಷಾ , ಇಮ್ರಾನ್ ಖಾನ್, ಉತ್ತರ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಗಣೇಶ್. ಕೆ. ಮುಖಂಡರಾದ ಶಿವರತನ್ , ನವೀನ್ ನಲವಾಡಿ , ತಹಿರ್ ಸಮೀರ್, ಅಭಿಷೇಕ, ಸಮೀರ್ , ಈಶ್ವರ್ ಉಪಸ್ಥಿತರಿದ್ದರು.