ದಾವಣಗೆರೆ (Davanagere): ಜಿಲ್ಲಾ ಪೊಲೀಸ್ ಹಾಗೂ ಲೈಪ್ ಲೈನ್ ರಕ್ತ ಕೇಂದ್ರ ಹಾಗೂ ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಸಮುದಾಯ ಭವನದ ಡಿಎಆರ್ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಪೂರ್ವ ವಲಯ ಐಜಿಪಿ ಡಾ. ಬಿ ಆರ್ ರವಿಕಾಂತೇಗೌಡ ಚಾಲನೆ ನೀಡಿದರು.
ಈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸ್ಯಾಮ್ ವರ್ಗೀಸ್ ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಸ್ವಯಂ ಪ್ರೇರಿತ ರಕ್ತ ದಾನ ಮಾಡಲು ಪ್ರೇರಣೆಯಾದರು.
ನೂರಕ್ಕೂ ಹೆಚ್ಚು ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಪೊಲೀಸ್ ಸ್ವಯಂ ಸೇವಕರು, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
Read also : ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಕುರಿತು ಪ್ರಧಾನಿಯವರ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು : ಆಲೂರು ನಿಂಗರಾಜ್
ಎಎಸ್ಪಿ ವಿಜಯಕುಮಾರ ಎಂಸಂತೋಷ , ಜಿ ಮಂಜುನಾಥ, ಡಾ. ಸುರೇಶ್ ಹನಗವಾಡಿ, ನಗರ ಉಪ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಬಿ, ಡಿಎಆರ್ ಡಿವೈಎಸ್ಪಿ ಪಿ ಬಿ ಪ್ರಕಾಶ್ , ಸಿಇಎನ್ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್, ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಯಣ್, ಪೊಲೀಸ್ ನಿರೀಕ್ಷಕರಾದ ಬಾಲಚಂದ್ರ ನಾಯ್ಕ್, ಮಂಜುನಾಥ ನಲವಾಗಲು, ಅಶ್ವಿನ್ ಕುಮಾರ್, ಮಲ್ಲಮ್ಮ ಚೌಬೆ, ಕಿರಣ್ ಕುಮಾರ ಹಾಗೂ ಲೈಪ್ ಲೈನ್ ರಕ್ತ ಕೇಂದ್ರ ಹಾಗೂ ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ದಾವಣಗೆರೆ ಅಧಿಕಾರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.