ದಾವಣಗೆರೆ.ಏ.26 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಏರ್ಪಡಿಸಲಾಗಿದ್ದ 50 ಮೀಟರ್ ಬಟ್ಟೆಯಯಲ್ಲಿ ಮತದಾನ ಜಾಗೃತಿಯ ಘೋಷಣೆ ಬಿಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಬಿ ಇಟ್ನಾಳ್ ಉದ್ಘಾಟಿಸಿ ಚಿತ್ರಗಳನ್ನು ವೀಕ್ಷಿಸಿದರು.
ಮತದಾನ ಜಾಗೃತಿಯನ್ನು ಬಟ್ಟೆಯಲ್ಲಿ ಬಿಡಿಸಿದ್ದು ಆಸೆಗೆ ಬಲಿಯಾಗದಿರಿ, ನಿಮ್ಮ ಮತ ಪವಿತ್ರವಾಗಿರಲಿ. ಆಮಿಷಕ್ಕೆ ಒಳಗಾಗದೆ, ನಿಮ್ಮ ಅಮೂಲ್ಯವಾದ ಮತ ಹಾಳು ಮಾಡದೆ, ಒಳ್ಳೆಯದನ್ನು ಯೋಚನೆ ಮಾಡಿ ಮತ ಚಲಾಯಿಸಿ. ನೀವೆಲ್ಲಾ ಪ್ರಜ್ಞಾವಂತರಿದ್ದೀರಿ, ಆಮಿಷಕ್ಕೆ ಮಾರು ಹೋಗದೆ, ಯೋಚನೆ ಮಾಡಿ, ಮತ ಹಾಕಿರಿ.
ಭ್ರಷ್ಟರ ಮುಂದೆ ಬೇಡುವಿರೇಕೆ, ಮತ ಹಾಕಿ ಭ್ರಷ್ಟರನ್ನ ಸೋಲಿಸಿ. ನನ್ನ ಮತ ನನ್ನ ಹಕ್ಕು, 85 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮನೆಯಲ್ಲಿ ಮತದಾನ, ಪ್ರಥಮ ಕರ್ತವ್ಯ ಮತ ಚಲಾಯಿಸೋಣ ಬನ್ನಿ, ಮತದಾನಕ್ಕಾಗಿ ರಜಾ ಮಜಾ ಮಾಡಲು ಅಲ್ಲ. ಸುಭದ್ರತೆ ಸರ್ಕಾರ ರಚನೆಗೆ ನಿಮ್ಮ ಪವಿತ್ರ ಮತ ಸಾಕ್ಷಿಯಾಗಲಿ, ಕ್ರಿಕೆಟ್ ನೋಡೋದು ಬಿಟ್ಟು ಮತ ಹಾಕೋಣ ಬನ್ನಿ, ಚುನಾವಣೆಗಳಲ್ಲಿ ಆಮಿಷಕ್ಕೆ ಒಳಗಾಗಬೇಡಿ, ಜ್ಞಾನಕ್ಕಾಗಿ ಶಿಕ್ಷಣ, ಪ್ರಜಾಪ್ರಭುತ್ವಕ್ಕಾಗಿ ಮತದಾನ ಎಂಬ ಘೋಷವಾಕ್ಯಗಳು 15 ಚಿತ್ರಕಲಾ ಶಿಕ್ಷಕರರಿಂದ ಸುಮಾರು 100 ಚಿತ್ರಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್ ಜಿ, ಡಯಟ್ ಪ್ರಾಚಾರ್ಯರಾದ ಗೀತಾ, ಡಯಟ್ ಉಪನ್ಯಾಸಕರು ಮತ್ತು ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.