ದಾವಣಗೆರೆ (Davanagere) : ನಿತ್ಯ ಸೈಕಲ್ ಬಳಸುವುದರಿಂದ ಉತ್ತಮ ಪರಿಸರ, ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಎಸ್‌ಪಿ ಉಮಾ ಪ್ರಶಾಂತ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆಯ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ಕ್ವಿಟ್ ಇಂಡಿಯಾ ಕಾರ್ಯಕ್ರಮದಡಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಆಯೋಜಿಸಿದ ತಿರಂಗ್ ಸೈಕಲ್ ರ‍್ಯಾಲಿಯ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗ ಒಂದೊAದು ಮನೆಯಲ್ಲಿ 2 ರಿಂದ 3 ದ್ವಿಚಕ್ರ ವಾಹನಗಳಿರುತ್ತವೆ. ವಾಹನಗಳ ಹೊಗೆಯಿಂದ ಪರಿಸರ ಹಾಳಾಗುತ್ತದೆ. ಆದ್ದರಿಂದ ವಾರದಲ್ಲಿ ಒಂದು ದಿನವಾದರೂ ಸಹಾ ಸೈಕಲ್ ಬಳಸಿರಿ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಸೈಕಲ್ ಕಲಿಸಬೇಕು. ಕ್ವಿಟ್ ಇಂಡಿಯಾ ಕಾರ್ಯಕ್ರಮದಡಿ ಅತೀ ಕಡಿಮೆ ಅವಧಿಯಲ್ಲಿ ಇಂತಹ ಸೈಕಲ್ ರ‍್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಸೈಕಲ್ ರ‍್ಯಾಲಿ ಮೂಲಕ ಜಾಗೃತಿ ಕಾರ್ಯಕ್ರಮಗಳು ನಡೆಯಲಿ ಎಂದರು.
ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ಸಿಪಿಐ ನಲವಾಗಲು ಮಂಜುನಾಥ ಹೈಸ್ಕೂಲ್ ಮೈದಾನದಲ್ಲಿ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಎಂ.ಬಿ.ಅಶ್ವಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಹರ್ಷ, ಪೊಲೀಸ್ ಇಲಾಖೆಯ ಅಧಿಕಾರಿ ಎಚ್.ಬಿ.ಸೋಮಶೇಖರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಮಲ್ಲಮ್ಮ ಚೌಬೆ, ಸಂಚಾರಿ ಪೊಲೀಸ್ ಮಹೇಂದ್ರ, ದಾವಣಗೆರೆ ಬೈಸಿಕಲ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಪ್ರಸಾದ, ಕಾರ್ಯದರ್ಶಿ ಕೆ.ಎಸ್.ಮಹೇಶ, ಡಾ.ಸುರೇಶ, ಡಾ.ರಾಘವೇಂದ್ರ, ಡಾ.ಮಾಲತೇಶ, ಡಾ.ಸಂತೋಷ, ಕಿರಣ್, ನಾಗರಾಜ, ಹೇಮಂತ್ ಆರಾಧ್ಯ, ಹಿಮಾಲಯನ್ ಅಡ್ವೆಂಚರ್ ಅಕಾಡೆಮಿಯ ಎನ್.ಕೆ.ಕೊಟ್ರೇಶ, ಹಾಗೂ ಪದಾಧಿಕಾರಿಗಳು ಇದ್ದರು.