ದಾವಣಗೆರೆ : ದಲಿತ ಮಹಿಳಾ ವಿರೋಧಿ ಬಸವನಗೌಡ ಪಾಟೀಲ ಯತ್ನಾಳ್‌ರವರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಮಿತಿ ಸದಸ್ಯರು ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ವಿಜಯಪುರ ನಗರ ಕ್ಷೇತ್ರದ ಬಸನಗೌಡ ಪಾಟೀಲ ಯತ್ನಾಳ ನಾಡಹಬ್ಬ ದಸರಾ ಉದ್ಘಾಟನೆ ಕುರಿತಂತೆ ಮೈಸೂರು ದಸರಾ ಹಬ್ಬ ವನ್ನು ದಲಿತ ಮಹಿಳೆಯೂ ಉದ್ಘಾಟನೆ ಮಾಡಲು ಯೋಗ್ಯರಲ್ಲ ಎಂದು ಬಾಯಿಗೆ ಬಂದAತೆ ಮಾತನಾಡಿ ಇಡೀ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ದಲಿತರ ಮತಗಳಿಂದಲೇ ಸದಾ ಅವರನ್ನು ಈ ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
Read also : 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ : ಸಚಿವ ಎಸ್.ಮಧು ಬಂಗಾರಪ್ಪ
ಅಧ್ಯಕ್ಷ ನರೇಗಾ ರಂಗನಾಥ, ಪ್ರಧಾನ ಕಾರ್ಯದರ್ಶಿ ರಾಜು ಕೆರೆಯಾಗನಹಳ್ಳಿ, ಖಜಾಂಚಿ ರಮೇಶ ಸಿ.ದಾಸರ, ಗೌರವ ಅಧ್ಯಕ್ಷ ವಿ.ಲಕ್ಷ್ಮಣ , ತಾಲ್ಲೂಕು ಅಧ್ಯಕ್ಷ ಎಸ್.ಶೇಖರ್ ನಾಯ್ಕ ಇದ್ದರು.
