ದಾವಣಗೆರೆ (Davanagere): ನಗರದ ಯೋಗಗುರು ಡಾ.ಎನ್.ಪರಶುರಾಮಪ್ಪ ಅವರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಕೊಡಮಾಡುವ `ಕರ್ನಾಟಕ ಮುಕುಟಮಣಿ’ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕನ್ನಡ ನಾಡು-ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಸಮಾಜಸೇವೆ ಹೀಗೆ ಎಲ್ಲಾ ಆಯಾಮಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಗುರುತಿಸಿ ನ.1ರಂದು ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕ ರಾಜ್ಯದ 77ನೇ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಡಾ.ಎನ್.ಪರಶುರಾಮಪ್ಪ ಅವರಿಗೆ `ಕರ್ನಾಟಕ ಮುಕುಟಮಣಿ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
Read also : Davanagere | ಮಳೆಗೆ ಕುಸಿದ ಬಿದ್ದ ಮನೆಗಳು : ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲನೆ
ಈ ಪ್ರಶಸ್ತಿಗೆ ಭಾಜನರಾದ ಡಾ.ಎನ್.ಪರಶುರಾಮಪ್ಪ ಅವರಿಗೆ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ್ ರಾಯ್ಕರ್, ದಾವಣಗೆರೆ ಎಎಸ್‍ಎಸ್ ಯೋಗ ಫೆಡರೇಷನ್ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಗೋಪಾಲ್ ರಾವ್, ಖಜಾಂಚಿ ಎಸ್.ರಾಜಶೇಖರ್, ನಿರ್ದೇಶಕರಾದ ಜೆ.ಎಸ್.ವೀರೇಶ್, ಎಂ.ವೈ.ಸತೀಶ್, ಅಜ್ಜಯ್ಯ, ರಾಘವೇಂದ್ರ ಚೌಹಣ್, ರಂಗಪ್ಪ, ನಾಗರಾಜ್, ಸಾವಿತ್ರಮ್ಮ, ಪತ್ರಕರ್ತ ಎ.ಎನ್.ನಿಂಗಪ್ಪ, ಯೋಗ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.