ದಾವಣಗೆರೆ.ಆ.17 (Davangere District) : ಪ್ರಿಯತಮನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಹೆಂಡತಿ ಮತ್ತು ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಚನ್ನಗಿರಿ ತಾಲೂಕಿನ ವಿ.ಬನ್ನಿಹಟ್ಟಿ ಗ್ರಾಮದ ಕುಸುಮ ಅಲಿಯಾಸ್ ಪುಷ್ಪ ಮತ್ತು ಪ್ರಿಯಕರ ಪ್ರಭು ಶಿಕ್ಷೆಗೆ ಗುರಿಯಾದ ಆರೋಪಿಗಳು.
ಮೃತ ಲೋಕೇಶ್ ಮತ್ತು ಹೆಂಡತಿ ಕುಸುಮಾ ವೈಮನಸಿನ ಕಾರಣದಿಂದ ಬೇರೆ ಬೇರೆ ವಾಸಿಸುತ್ತಿದ್ದರು. ಈ ಬಗ್ಗೆ ಹಿರಿಯರು ಹಲವಾರು ಬಾರಿ ಬುದ್ದಿವಾದ ಹೇಳಿದ್ದರು.
2021 ರ ಜೂನ್ 27 ರಂದು ರಾತ್ರಿ ಹೆಂಡತಿ ಕುಸುಮಾ ಮತ್ತು ಪ್ರಭು ಸೇರಿಕೊಂಡು ವೇಲ್‌ನಿಂದ ಲೋಕೇಶನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು.
ಈ ಕುರಿತು ಮೃತನ ಸಹೋದರ ನಾಗರಾಜ್ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಚನ್ನಗಿರಿ ಸಿಪಿಐ ಮಧು ಪ್ರಕರಣದ ವಿಚಾರಣೆ ನಡೆಸಿ ಕುಸುಮಾ ಮತ್ತು ಪ್ರಭು ಅವರ ನಡುವೆ ಇದ್ದ ಅಕ್ರಮ ಸಂಬಂಧ ಲೋಕೇಶನಿಗೆ ತಿಳಿದ ಕಾರಣದಿಂದ ಆತನನ್ನು ಕೊಲೆ ಮಾಡಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪಟ್ಟಿಯನ್ನು ದಾಖಲಿಸಿದ್ದರು.
Read also –Davanagere : ಜಿಲ್ಲಾ ಮಟ್ಟದ ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ (1ST ADDITIONAL AND DISTRICT SESSIONS COURT )ದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯ ಅವರು ಆರೋಪ ಸಾಭಿತಾದ ಹಿನ್ನೆಲೆಯಲ್ಲಿ ಕುಸುಮಾ ಮತ್ತು ಪ್ರಭು ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದರು.
ಪ್ರಕರಣದಲ್ಲಿ ಪರ‍್ಯಾದಿಯವರ ಪರವಾಗಿ ಸರ್ಕಾರಿ ವಕೀಲರಾದ ಕೆ.ಎಸ್.ಸತೀಶ್‌ಕುಮಾರ್ ವಾದ ಮಂಡಿಸಿದ್ದರು.