Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > “370” ದೇಶದೊಳು 
Blog

“370” ದೇಶದೊಳು 

Dinamaana Kannada News
Last updated: April 13, 2024 3:45 am
Dinamaana Kannada News
Share
davanagere
“370” ದೇಶದೊಳು 
SHARE

ಮಳೆ ಬಂದು ನಿಂತಿತ್ತು.ಒಂದು ವಾರದಿಂದಲೂ ಬಿಟ್ಟೂಬಿಡದೆ ಸುರಿದ ಪರಿಣಾಮ ಹೊರಗೆ ಬರಲು ಆಗಿರಲಿಲ್ಲ. ಪರಮಗ್ರಂಥದ ಪಠಣವೂ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು.ಸಾವಿರಾರು ಮೈಲಿ ದೂರದಿಂದ ಬಂದು ಧರ್ಮಪ್ರಚಾರ ಮಾಡುವುದೆಂದರೆ ಸುಮ್ಮನೆ ಆದೀತೆ ?   ಅಪರೂಪಕ್ಕೆಂಬಂತೆ ಹೊರಬಂದ ಶುಭ್ರ ಶ್ವೇತ ವಸ್ತ್ರಧಾರಿ ಕಾಶ್ಮೀರಿ ಮುಲ್ಲಾರ ಮನಸ್ಸಿನಲ್ಲಿ ತಳಮಳವಿತ್ತು.

ಆಗೊಮ್ಮೆ ಈಗೊಮ್ಮೆ ಬೆಳ್ಳಗಿನ ಮುಖದ ಅಂದ ಹೆಚ್ಚಿಸಿದ ಕಪ್ಪು ಗಡ್ಡವನ್ನೊಮ್ಮೆ ಸವರಿಕೊಳ್ಳುವರು.ಸುರಿದೂ ಸುರಿದು ಸುಸ್ತಾಗಿರುವಂತೆ ತೋರುವ ಮೋಡಗಳಿಗೆ ಮತ್ತೆ ಸುರಿಸುವ ತಾಕತ್ತಿರಲಿಲ್ಲ.ಮಳೆ ನಿಂತಿತೆಂದು ಹೊಂಬಣ್ಣದ ಸೂರ್ಯ ಮರೆಯಿಂದ ಬರಲು ಹವಣಿಸುತಿದ್ದ.ಅದ್ಯಾರು ಹೇಳಿದರೋ ಏನೋ…ಹಾವೇರಿಗೆ ಹಾಯಬಾರದು ಹಾನಗಲ್ಲನಲಿ ಸಾಯಬಾರದು ಅಂತ!.ಎಂಥಾ ಆಹ್ಲಾದಕರ ಊರುಗಳಿವು!ಎಷ್ಟು ಒಳ್ಳೆಯ ಜನರಿವರು!.  ತುಂಬಿ ಹರಿವ ಧರ್ಮಾನದಿಯ ಕಾಲುವೆಯಲಿ ಇಳಿಬಿಟ್ಟ ತನ್ನ ಎರಡೂ ಕಾಲುಗಳನ್ನೊಮ್ಮೆ ನೋಡಿಕೊಳ್ಳುತ್ತ,ಅದೆಷ್ಟು ಹೊತ್ತು ಕುಳಿತಿದ್ದರೋ ….ದೂರದಲ್ಲಿನ ನೀರಿನ ಸೆಳೆತದ ಸದ್ದೂ ಕೇಳಿಸುತ್ತಿತ್ತು.

ತಲೆ ತುಂಬ ಏನೇನೋ ಯೋಚನೆಗಳು…

 

ಸುಮ್ಮನೆ ತಲೆಯೆತ್ತಿ ಆಕಾಶ ನೋಡಿದರು.ಬೆಳ್ಳಗಿದ್ದ ಮೋಡಗಳೆಲ್ಲ ನಿಧಾನವಾಗಿ ಕಪ್ಪಿಗೆ ತಿರುಗುತ್ತಿದ್ದವು.ಮನಸ್ಸು ದುಗುಡಗೊಳ್ಳುತ್ತಾ ಹೋಯಿತು. Zಅನ್ಯಮನಸ್ಕರಾದ ಮುಲ್ಲಾರು ದೂರ ದಿಗಂತದತ್ತ ದಿಟ್ಟಿಸಿದರು.ಇಂತಹದೇ ಒಂದು ಸಂಜೆಯ ವಿಹಾರದಲ್ಲಿ ಪಂಡಿತರು “ಭೂಮಿ,ಆಕಾಶಗಳೆಲ್ಲವೂ ರೆಕ್ಕೆ ಬಿಚ್ಚಿ ಹಾರುತ್ತಿರುವ ಹಕ್ಕಿಗಳು ರಾಮನ,ಅಲ್ಲಾಹನ,ಯೇಸುವಿನ ಕೀರ್ತನೆಗಳನ್ನು ಹಾಡುವಂತೆ ಹಾರುವುದನ್ನು ನಾವು ನೋಡುತ್ತಿದ್ದೇವೆ.ಪ್ರತಿಯೊಂದು ಪ್ರಾಣಿ,ಪಕ್ಷಿಗಳಿಗೂ ನಮ್ಮ ಆರಾಧನೆ,ನಮಾಜಿನ ಕ್ರಮ:ಪ್ರಾರ್ಥನೆಗಳ ಕ್ರಮ ಗೊತ್ತಿದೆ.ಇವೆಲ್ಲವುಗಳನೂ ಆ ದೇವರು ಅರಿತಿರುತ್ತಾನೆ”ಎಂದು ಹೇಳಿದ್ದು ಎಷ್ಟು ಸತ್ಯವಲ್ಲವೆ ? ತಾನು ಕುಳಿತಿದ್ದ ಜಾಗೆ,ಸುತ್ತಲಿನ ವಾತಾವರಣದ ಪ್ರಭಾವವೋ..ಮುಸ್ಸಂಜೆಯಲಿ ಆವರಿಸಿದ ಕತ್ತಲಿಗೋ …ಮನಸ್ಸು ತೆರೆದುಕೊಳ್ಳತೊಡಗಿತ್ತು.ಅದರಲ್ಲೂ ಪಂಡಿತರು ದೂರವಾಣಿ ಕರೆ ಮಾಡಿ ಮಾತನಾಡಿದ ಕಾಲದಿಂದಲೂ ಹೀಗೆಯೇ ಮಡುಗಟ್ಟಿದ ದುಗುಡ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು.

 

“ಕಾಶ್ಮೀರದ ಸಮಸ್ಯೆಗೆ ಪರಿಹಾರಗಳೇನೂ ಇಲ್ಲವೇ?”ನಿಟ್ಟುಸಿರುಗೈದಿದ್ದೆ.

 

“ನೋಡಿ,ಇಪ್ಪತ್ತನೆ ಶತಮಾನವಿದೆಯಲ್ಲ ಇದು ಹಿಂಸಾತ್ಮಕ ಶತಮಾನ.ನಾವು ಮನುಷ್ಯರೇ ಸೃಷ್ಟಿಸಿಕೊಂಡ ದುರಂತಗಳಿಂದಾಗಿ ಈಗಾಗಲೆ ಹದಿನೆಂಟು ಇಪ್ಪತ್ತು ಕೋಟಿ ಜನರ ಮಾರಣ ಹೋಮವಾಗಿದೆ.ಇಡೀ ಮನುಷ್ಯಕುಲವೇ ಶಾಶ್ವತವಾಗಿ ಹಿನ್ನೆಡೆ ಅನುಭವಿಸುವಂತಹ ಸ್ಥಿತಿಗೆ ತಲುಪಿದ್ದೇವೆ” ಎಂದಿದ್ದರು.ಪಂಡಿತರು…ಪಂಡಿತರೇ.ಎಷ್ಟೆಲ್ಲ ವಿಷಯಗಳನ್ನು ತಿಳಿದುಕೊಂಡಿರುವರಲ್ಲ ಎಂದು ಹೆಮ್ಮೆಯೆನಿಸುತ್ತಿತ್ತು. ನಾಕರ ಕತ್ತರಿಯಲ್ಲಿ ಬಸ್ಸಿಗೆ ಕಾಯುತ್ತಿದ್ದವರ್ಯಾರೋ ಮಧ್ಯವಯಸ್ಕ ತಂದೆ ತಾಯಿ ಮಗುವನ್ನೆತ್ತಿಕೊಂಡು ಬಂದರು.

“ಊರಿಗೆ ಹೊಂಟಿದ್ವಿರೀ ಸಾಹೇಬರಾ ಮಗಂಗೆ ಉಸಾರಿಲ್ರಿ,ಹಲಕುರ್ಕಿ ಡಾಕುಟ್ರುತ್ರ ತೋರಿಸ್ಕಂದು ,ಗ್ರಾಮದೇವತಿ ದ್ಯಾಮವ್ವ ಗುಡಿ ಪೂಜಾರತ್ರ ಅಂತ್ರ ಹಾಕಿಸ್ಕೊಂಡು ಬಂದ್ವಿ. ಅಂಗಾ ನೀವು ಕುಂತಿದ್ರೀ…ಆಶೀರ್ವಾದ ಮಾಡ್ಸಿದ್ರಾತು ಅನಕಂಡು ಬಂದೇವರಿ…ಆಶೀರ್ವಾದ ಮಾಡ್ರಿ ಸಾಹೇಬರ” ಒಂದೇ ಸಮನೆ ಮಾತಾಡುತ್ತಿದ್ದವರನ್ನೆ ದಿಟ್ಟಿಸಿದರು.ಅವರು ಹೇಳಿದ ಒಂದೂ ಮಾತು ತನಗೆ ತಿಳಿಯುವ ಭಾಷೆಯದ್ದಾಗಿರಲಿಲ್ಲ. ಭಾವಕ್ಕೆ ಭಾಷೆಯ ಹಂಗಿಲ್ಲವಲ್ಲ? ಎಲ್ಲವೂ ಅರ್ಥವಾಗಿತ್ತು.

ಕಣ್ಣು ಮುಚ್ಚಿ ದೇವನ ಧ್ಯಾನಿಸಿ ಮಗುವಿನ ತಲೆಮೇಲೆ ಮೃದುವಾಗಿ ಕೈಯಿಟ್ಟು ಸವರಿದರು.ಹೆಗಲ ಮೇಲೆ ಮಲಗಿದ್ದ ಮಗು ಮಿಸುಕಾಡಿ ಎಚ್ಚರಗೊಂಡಿತು.ಎದುರಿಗಿನ ಗಡ್ಡಧಾರಿಯ ನೋಡಿ ಯಾರೀತ..?ಎಂಬಂತೆ ಅಪ್ಪನೆಡೆಗೊಮ್ಮೆ ಅವ್ವನೆಡೆಗೊಮ್ಮೆ ನೋಡಿ…ತುಟಿಯಂಚಿನಲ್ಲಿ ಆ ದಣಿವಿನಲ್ಲೂ ನಗೆಯ ಎಸಳು ಬಿಸಾಕಿ ಮತ್ತೆ ಹೆಗಲಿಗೊರಗಿತು.

ಅಷ್ಟಕ್ಕೆ ಆ ತಾಯಿಯ ಸಂಭ್ರಮ ಎಷ್ಟಿತ್ತು?ಬದುಕು ಸಾರ್ಥಕ ಅಂತನ್ನಿಸೋದು ಇಂತಹ ಕ್ಷಣಗಳಲ್ಲಿಯೇ. “ಭಾಳ ಛಲೋದಾತ್ರೀ..ಸಾಬರೆ,ಮದ್ವಿಯಾಗಿ ಹದ್ನೈದು ವರ್ಸಕ್ಕ ಹುಟ್ಟ್ಯಾನ್ರೀ..ಅಂಗಾಗಿ”ಎಂದವಳ ಮಾತು ನಿಲ್ಲಿಸಿ,ಸುಧಾರಿಸಿಕೊಂಡು ಮತ್ತೆ “ಮುಂಜಾಕಿಂದ ಮಕ್ಕಣದೆ ಮಾಡ್ತಾನರಿ,…ಇವಾಗ ನಿಮ್ಮನ ನೋಡಿ ನಕ್ಕುದ್ದು ನೋಡ್ರಿ” ಕೃತಜ್ಞತೆಯ ಭಾರದಿಂದ ಅವರ ಕಣ್ಣಾಲಿಗಳು ತುಂಬಿದ್ದವು.

ಆಯ್ತು…ನೀವಿನ್ನು ಹೋಗಿ ಬನ್ನಿ ಎನ್ನುವವರಂತೆ ಎದ್ದು ನಿಂತರು. ಅವರು ಹೋಗುವುದನ್ನೆ ಎಷ್ಟೋ ಹೊತ್ತು ನೋಡುತ್ತಾ ನಿಂತುಬಿಟ್ಟರು. ಸೈತಾನನು ಯಾರ ತಲೆಯಲ್ಲಿ ಇರುತ್ತಾನೋ ಅವನು ಅನುಮಾನ ಪಡುತ್ತಾನೆ…ಎಂದೇನೋ ಇಂದು ಮುಂಜಾನೆ ಬೋಧಿಸಿದ್ದು ನೆನಪಾಯಿತು.

ಹೌದು, ಈ ಮಾತೇಕೆ ಪದೇ ಪದೇ ನೆನಪಾಗುತ್ತಿದೆ? ಪಂಡಿತರ ಫೋನ್ ಕರೆ ಬಂದಾಗಿನಿಂದಲೂ ಹೀಗೆಯೇ ಆಗುತ್ತಿದೆ.ಕಾಶ್ಮೀರ ಬಿಟ್ಟು ಬಂದು ಎರಡು ತಿಂಗಳ ಮೇಲಾಯಿತು.ಮೊದ ಮೊದಲು ಇಲ್ಲಿಗೆ ಬಂದಾಗ ಹೇಗೋ ಏನೋ ಅನ್ನಿಸಿತ್ತು.ಭಾಷೆ,ಆಚಾರ ವಿಚಾರ ಎಲ್ಲದರ ಬಗ್ಗೆಯೂ ದುಗುಡ,ಆತಂಕದಿಂದಲೇ ಬಂದಿದ್ದರು.ಲ್ಲಿಗೆ ಬಂದ ಮೇಲೆಯೇ ಗೊತ್ತಾದದ್ದು,ದೇಶವೆಂಬ ಈ ತಾಯಿ ಗರ್ಭದೊಳಗೆ ಎಷ್ಟೊಂದು ಧರ್ಮಗಳ ಭ್ರೂಣಗಳಿವೆ ?ಎನಿಸಿತ್ತು.

ಗೆಳೆಯ ಪದ್ಮಚರಣ ಪಂಡಿತರ  ಮಾತುಗಳು,ಧರ್ಮಗ್ರಂಥಗಳ ಸರಳಾನುವಾದವನ್ನು ಸಂದರ್ಭಕ್ಕೆ ತಕ್ಕಂತೆ ಹೇಗೆಲ್ಲ ಬಳಸುತ್ತಿದ್ದರು.ನಾನು ಹೇಳಿದ ಪ್ರವಾದಿಗಳ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದರು.ಅಷ್ಟೇ ಅಲ್ಲ,ಧರ್ಮಗ್ರಂಥಗಳು ಬೇರೆಯಾದರೂ ಚಿಂತನಾಕ್ರಮದಲ್ಲಿನ ಸಾಮ್ಯತೆಯನ್ನು ಎತ್ತಿ ತೋರಿಸುತ್ತಿದ್ದರು.ತಾಸುಗಟ್ಟಲೆ ಪಂಡಿತರ ಮನೆಯಲ್ಲಿ,ನಮ್ಮ ಮನೆಯಲ್ಲಿ ಚರ್ಚೆಗಳಾಗುತ್ತಿದ್ದವು.ಆಗೆಲ್ಲ ಕಾಶ್ಮೀರವೂ….ಸುಂದರವಾಗಿಯೇ ಇತ್ತು.

ರಾಜಕೀಯದ ಮಾತು ಬಂತೆಂದರೆ ಮುಗಿಯಿತು.ವೇಳೆ ಸರಿದದ್ದೇ ಗೊತ್ತಾಗುತ್ತಿರಲಿಲ್ಲ.ಆಗೆಲ್ಲ ಪದ್ಮಚರಣ ಪಂಡಿತರು ಹೇಳಿದ ಮಾತುಗಳು ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿವೆ.

ನೋಡು ಗೆಳೆಯಾ,ಕಾಶ್ಮೀರದಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ಸಂಘರ್ಷಕ್ಕಿಂತಲೂ ಜನಾಂಗೀಯ ಸಂಘರ್ಷ ಹುಟ್ಟುಹಾಕಿದ ಪ್ರಭುತ್ವ ಎಲ್ಲರಿಗೂ ಗೊತ್ತಿರುವಂಥದ್ದೆ.ಆ ಸಂದರ್ಭದಲ್ಲಿ ಶ್ರೀನಗರದ ಬೀದಿಯೊಂದರಲ್ಲಿ ಪಂಡಿತರ ಹೆಣ ಬಿತ್ತು.ಧರ್ಮಸಂಘರ್ಷದಲ್ಲಿ ಅಸುನೀಗಿದ ಆ ಬಡಪಾಯಿ ಪಂಡಿತನ ಹೆಣದ ಅಂತ್ಯಸಂಸ್ಕಾರಕ್ಕೂ ಯಾರೂ ಬರಲಿಲ್ಲ.ಅಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಆಗ ಒಬ್ಬ ಯುವಕ ,ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮಾಡಿ ಬಂದಿದ್ದ ಯುವಕನೊಬ್ಬನೆ ಆ ಬೀದಿಯಲಿ ಅನಾಥವಾಗಿ ಬಿದ್ದಿದ್ದ ಹೆಣವನ್ನು ಹೆಗಲ ಮೇಲೆ ಹೊತ್ತು,ಕಾಶ್ಮೀರಿ ಪಂಡಿತರ ಧರ್ಮದನುಸಾರವೇ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಾನೆ.ಆತ ಬೇರಾರೂ ಅಲ್ಲ ಷೇಕ್ ಅಬ್ದುಲ್ಲಾ!.

ಇಂತಹ ಅನೇಕ ವಿಷಯಗಳನ್ನು ಹೇಳ್ತಿರ್ತಾರೆ.ಪಂಡಿತರ ಜೊತೆ ಮಾತಾಡ್ತ ಕುಳಿತರೆ ವೇಳೆಯ ಪರಿವೇ ಇರುವುದಿಲ್ಲ.ವರ್ತಮಾನದ ರಾಜಕೀಕರಣಗೊಂಡ ಧರ್ಮಗಳ ಸ್ಥಿತಿ ನೆನೆದು,ಬಲಿಪಶುವಾಗುವ ಮುಗ್ಧಜನರ ನೆನೆದು ದುಃಖಿತರಾಗುತ್ತಿದ್ದುದೂ ಉಂಟು.ಆಗ ನನಗೆ ಗೊತ್ತಿರುವ ಪ್ರವಾದಿಗಳ ಕೆಲ ಸಾಲುಗಳನ್ನು ಉಲ್ಲೇಖಿಸುತ್ತಿದ್ದೆ.

“ಹೆದರಬೇಡ ,ನಾನು ರಾಜನಲ್ಲ.ನಿನ್ನಂತೆಯೇ ಸಾಮಾನ್ಯಮನುಷ್ಯ.ನೀನು ತಿನ್ನುವ ವಸ್ತುಗಳನ್ನೇ ನಾನೂ ತಿನ್ನುತ್ತೇನೆ.ನಿನ್ನ ಮೇಲೆ ಬೀರುವ ಸೂರ್ಯನೇ ನನ್ನ ಮೇಲೆಯೂ ಪ್ರಕಾಶ ಬೀರುತ್ತಾನೆ”ಎಂದು ಮಹಮ್ಮದರು ಹೇಳಿದ್ದನ್ನು ಹೇಳುತ್ತಿದ್ದೆ.ಆದರೆ,ಈಗ್ಗೆ ಎರಡು ತಿಂಗಳಿಂದ ಮಾತಾಡಲು ಸಾಧ್ಯವಾಗಿಲ್ಲ.ಫೋನ್ನಲ್ಲಿ ಮಾತನಾಡಿದ್ದರೂ ಎಷ್ಟು ಮಾತಾಡಬಹುದು?ಉಭಯರ ಕುಶಲೋಪರಿಯಲ್ಲಿ ವೇಳೆ ಸರಿದುಹೋಗಿರುತ್ತದೆ.

ಈ ದಿನದ ಕರೆ….ಎಂದಿನಂತಿರಲಿಲ್ಲ.ಧ್ವನಿಯ ತರಂಗಗಳಲ್ಲಿಯೆ ಪದ್ಮಚರಣ ಪಂಡಿತರ ಆತಂಕವನ್ನು ಗ್ರಹಿಸಬಲ್ಲವ ನಾನು.ಪಂಡಿತರ ಗ್ರಹಿಕೆಯಂತೂ ಭಾಳ ವಿಶಿಷ್ಟದ್ದು.ವಿಭಿನ್ನ ಗ್ರಹಿಕೆಗಳನ್ನು ಒಟ್ಟುಗೂಡಿಸಿ ತೋರಿಸುವ ಮೂಲಕ ನಾವು ಎಂದೂ ಯೋಚಿಸಿರದ ಹೊಸ ಭಾರತವೊಂದನ್ನು ತೋರಿಸುತ್ತಿದ್ದರು.ನಾನು ನಿರಾಶನಾದಾಗಲೆಲ್ಲ”ಇಲ್ಲ ಸಹೋದರ,ಭಾರತಕ್ಕೆ ಉಜ್ವಲ ಭವಿಷ್ಯವಿದೆ” ಎಂದೇ ಹೇಳುತ್ತಿದ್ದರು.ಅವರ ಇಂಥಾ ಆಶಾವಾದ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಿತ್ತೆಂದರೆ ಆ ದಿನ ನಾನು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೆ.ಅವರೊಂದಿಗೆ ಮಾತಾಡದೆ ಇರಲು ಸಾಧ್ಯವೇ ಇರಲಿಲ್ಲ.

ಮಧ್ಯಾಹ್ನದ ಸಂಭಾಷಣೆ ಮತ್ತೆ ಮತ್ತೆ ಕೇಳುತಿದೆ. “ಟೀವಿ ನೋಡಿದಿರಾ..?ಇವತ್ತು?” ಆ ಕಡೆಯಿಂದ ಪಂಡಿತರ ಧ್ವನಿ ಎಂದಿನಂತಿರಲಿಲ್ಲ. “ಹ್ಞೂಂ..ನೋಡಿದೆ ಪಂಡಿತರೆ….ಏನ್ ಸಮಾಚಾರ..?” ಅಲ್ಲಿ ತಾವು ಹೇಗಿದ್ದೀರಿ ? “ನನಗೇನೂ ತೊಂದರೆಯಿಲ್ಲ.ಕರ್ನಾಟಕವೆಂದರೆ ಸೌಹಾರ್ದತೆಗೆ ಇನ್ನೊಂದು ಹೆಸರು”ಎಂದಿದ್ದಕ್ಕೆ ಸಮಾಧಾನದ ಉಸಿರೆಳೆದ ಸದ್ದೂ ಕೇಳಿಸಿತ್ತು. ತಾವು….ಕುಟುಂಬ ಎಲ್ಲರೂ ಸೌಖ್ಯವಾಗಿದ್ದೀರಿ ತಾನೆ? “ಕೇಳಿದ್ದೆ. “ಎಲ್ಲಾ ಸರಿಯಿದೆ,

ಮನೇಲೇನೂ ತೊಂದ್ರೆಯಿಲ್ಲ….ಆದರೆ ಊರು ಬೂದಿ ಮುಚ್ಚಿದ ಕೆಂಡದಂತಿದೆ.ಯಾವಾಗ ಏನಾಗುತ್ತೋ ಗೊತ್ತಿಲ್ಲ.ಇಲ್ಲಿನ ಚಿಂತೆ ನನಗೆ ಬಿಡಿ,ನಾನು ಎರಡೂ ಮನೆ ಕಡೆ ನೋಡಿಕೊಳ್ಳುವೆ.ನೀವು ಸದ್ಯ ಇಲ್ಲಿಗೆ ಬರುವುದು ಬೇಡ….”  ಕರೆ ನಿಂತು ಹೋಯಿತು.ಇನ್ನೂ ಏನೇನು ಹೇಳುತ್ತಿದ್ದರೋ ಏನೋ ಪಂಡಿತರು…ಮಕ್ಕಳು ಮನೆ…ಎಲ್ಲವೂ ದೂರವಾಗುತ್ತಿರುವ ಹಾಗೆ ಭಾಸವಾಯಿತು.

ಪಂಡಿತರ ಮಾತಿನಲ್ಲಿ ದುಗುಡ ಆವರಿಸಿತ್ತೆ..?

ಈಗ ತಾನು ಅವರೊಡನೆ ಇರಬೇಕಿತ್ತು…ಛೇ..ಎಂಥಾ ಕಷ್ಟವೋ ಏನೋ..ಮನಸ್ಸು ಚಡಪಡಿಸತೊಡಗಿತು. ” ಓ…ಸತ್ಯ ವಿಶ್ವಾಸಿಗಳೇ….ನೀವು ನ್ಯಾಯದ ದೃಢವಾಹಕರೂ ಅಲ್ಲಾಹನಿಗಾಗಿ ಸಾಕ್ಷ್ಯವಹಿಸುವವರೂ ಆಗಿರಿ…”ಪ್ರಾರ್ಥಿಸುವುದರ ಹೊರತು ಬೇರೆ ದಾರಿಯಿರಲಿಲ್ಲ. ಪ್ರತಿ ಬಾರಿಯೂ ಇಲ್ಲಿಗೆ ಬಂದಾಗಲೊಮ್ಮೆ ಹೋಗುವಾಗ ಗೆಳೆಯ ಪದ್ಮಚರಣ ಪಂಡಿತರಿಗೆ ಏನಾದರೊಂದು ಗಿಫ್ಟ್ ತೆಗೆದುಕೊಂಡು ಹೋಗಿ ಕೊಡುವುದು ಹವ್ಯಾಸವಾಗಿತ್ತು.ಆಗೆಲ್ಲ ಪಂಡಿತರು ಮುಜುಗರದಿಂದಲೆ ಪಡೆದುಕೊಂಡು ಸಂತೋಷಿಸಿ ಮನೆಮಂದಿಗೆಲ್ಲ ತೋರಿಸಿ ಖುಷಿಪಡುತ್ತಿದ್ದರು. ಆಗಲೂ ಪಂಡಿತರು,ಸುಲೇಮಾನ್ ಅಮೀರ್ ಅಲ್ಲಾಹನ ಪ್ರವಾದಿ ಏನು ಹೇಳಿದ್ದಾರೆ ಗೊತ್ತೆ..? ಎಂದು ಕೇಳಿ, ” ರಕ್ತ ಸಂಬಂಧಿಯಲ್ಲದ ವ್ಯಕ್ತಿಗೆ ಏನಾದರೂ ಕೊಡುಗೆ ನೀಡುವುದು ದಾನವಾಗಿದೆ” ಎಂದು ಹೇಳಿದ್ದಾರೆ ಎನ್ನುವಾಗ ಎಲಾ…ಗೆಳೆಯರೇ..ಅದ್ಯಾವಾಗ ಕುರಾನನ್ನು ಇಷ್ಟು ಚೆನ್ನಾಗಿ ಪಠಣ ಮಾಡಿದ್ದಾರೆ ಎಂದು ಅಭಿಮಾನವುಂಟಾಗುತ್ತಿತ್ತು.

 

ಪಂಡಿತ ಗೆಳೆಯಾ…ನೀವು ರಕ್ತಸಂಬಂಧಿಗಿಂತಲೂ ಹೆಚ್ಚು ನಮಗೆ…ಎಂದಿದ್ದೆ.

ಪಂಡಿತ ಪದ್ಮಚರಣರು ನನ್ನ ಕೈಯನ್ನು ಹಿಡಿದು ಮೆದುವಾಗಿ ಒತ್ತಿದ್ದರು. ಮೋಡಗಳೀಗ ಸಂಪೂರ್ಣ ಕಪ್ಪಾಗಿದ್ದವು.ದುಃಖ ಮಡುಗಟ್ಟಿದವನು ಯಾವಾಗ ಬೇಕಾದರೂ ಮತ್ತೆ ಅಳುವವನಂತೆ ತೋರುತ್ತಿದ್ದವು.ಸಂಜೆ ಕತ್ತಲೊಳಗೆ ಲೀನವಾಗುವ ಸಮಯ. ನನ್ನ ಪ್ರೀತಿಯ ಬಂಧುಗಳೇ,ನನ್ನ ಸುಂದರ ಕಾಶ್ಮೀರದಲ್ಲಿ ಯಾವುದೇ ಗಲಾಟೆಗಳಿಲ್ಲ,ದೊಂಬಿಗಳೂ ಇಲ್ಲ.ಈ ಪ್ರದೇಶದ ಸೌಂದರ್ಯ ಸವಿಯಲು,ಶಿವನ ದರುಶನಕೆ ಈ ಶಿವರಾತ್ರಿಗೆ ಕುಟುಂಬಸಮೇತರಾಗಿ ಭೇಟಿ ಕೊಡಿ….ಹೀಗೆ ಒಂದು ಮಧ್ಯರಾತ್ರಿಯ ಹೊತ್ತಲ್ಲಿ ಮಗಳು ಆಯೇಷಾ ಹದಿನೈದು ಪೈಸೆಯ ಕಾರ್ಡುಗಳಲಿ ಬರೆದೇ ಬರೆಯುತ್ತಿದ್ದಳು.

ಹೌದು ಮಗಳೇ,ಕಾಶ್ಮೀರಕ್ಕೆ ,ಇಲ್ಲಿನ ಕಾಕಾನ ಅಂಗಡಿಗೆ ಜನ ಬಂದು ಹೋದರೆ ಮಾತ್ರ ಹೊಟ್ಟೆ ತುಂಬೋದು! ಎಂಥಾ ಸತ್ಯ ಮಕ್ಕಳಿಗೆಅರ್ಥವಾಗಿದೆ.ನಮ್ಮನ್ನಾಳುವವರಿಗೇಕೆ ಅರ್ಥವಾಗುತ್ತಿಲ್ಲ ಎನ್ನಿಸಿತ್ತು.ಗಾಢ ಚಿಂತೆಯಲ್ಲಿ ಮೈಮರೆತಿದ್ದವರಿಗೆ ಕಾಲಬುಡದಲ್ಲಿ ಏನೋ ಹೋದಂತಾಗಿ ವಾಸ್ತವಕ್ಕೆ ಬಂದರು.

ತಿರುಗಿ ನೋಡಿದರೆ ಸಣ್ಣ ಗಾತ್ರದ ಮೊಲವೊಂದು ಓಡುತ್ತಿತ್ತು.ಭಾರವಾದ ಹೆಜ್ಜೆಗಳೊಂದಿಗೆ ಊರಕಡೆಗೆ ಬಂದರು.ಕಲಾಲರ ಶ್ರೀ ಆದಿಶಕ್ತಿ ಸ್ಟೋರ್ಸ್ ನಲ್ಲಿ ಪ್ರತಿ ಬಾರಿ ಹೀಗೆ ಊರಿಗೆ ಮರಳುವಾಗ ಏನಾದರೂ ಕೊಳ್ಳುವುದು ವಾಡಿಕೆ.ಗೆಳೆಯ ಪದ್ಮಚರಣ ಪಂಡಿತರಿಗೆ ಕೈ ಗಡಿಯಾರ ಕೊಡುವ ಮನಸ್ಸಾಯಿತು.

ಕಲಾಲರ ಮಗ ಗಲ್ಲಾಪೆಟ್ಟಿಗೆ ಮೇಲೆ ಕುಳಿತಿದ್ದ.ಹಣೆಯಲ್ಲಿ ಕೆಂಪು ತಿಲಕವಿತ್ತು.ಪಂಡಿತರ ಹಣೆಯಲ್ಲಿ ಇದ್ದರೂ..ಅಪ್ಯಾಯಮಾನವೆನಿಸುತ್ತಿತ್ತು.ಆದರೆ…‌‌ಕಲಾಲರ ಮಗ ಮುಲ್ಲಾರನ್ನೊಮ್ಮೆ ಅಪಾದಮಸ್ತಕ ದಿಟ್ಟಿಸಿದವನೆ ನಿರ್ಲಕ್ಷಿಸಿದವನಂತೆ ಕುಳಿತ.ಅವರಿಗೆ ಏನು ಬೇಕೋ ಕೇಳಿ ಕೊಡು ಎಂದು ಅಂಗಡಿಯಲಿದ್ದ ಆಳಿಗೆ ಹೇಳಿದ.ಮಾಲೀಕ ಕಲಾಲರಿದ್ದಿದ್ದರೆ..ಹೀಗೆ ಮಾಡುತ್ತಿರಲಿಲ್ಲ. ಇರಲಿ,ಕಾಲದ ಮಹಿಮೆಯೆಂದು ನಿಟ್ಟುಸಿರುಗೈದರು.ಕೆಲಸದವನು ತೋರಿಸಿದ ಕೈ ಗಡಿಯಾರಗಳ ಪೈಕಿ ಒಂದನ್ನು ಖರೀದಿಸಿದರು.

ಕೈ ಗಡಿಯಾರದ ಮುಳ್ಳು ತಿರುಗುತ್ತಿದ್ದವು.ಎದೆಯ ಸದ್ದೂ ಕೇಳಿಸುತ್ತಿತ್ತು.ಕಣ್ಣಂಚಿನಲ್ಲಿದ್ದ ನೀರು ಇಳಿಯುವುದಕ್ಕೂ ಅವಡುಗಚ್ಚಿ ತಡೆಹಿಡಿದಿದ್ದ ಮಡುಗಟ್ಟಿದ್ದ ಮೋಡಗಳು ಸುರಿಯುವುದಕ್ಕೂ ಸರಿಹೋಯಿತು.ಮುಲ್ಲಾರ ಕಣ್ಣು ತುಂಬಿ ಹರಿಯುತ್ತಿದ್ದುದನ್ನು ಆ ಕತ್ತಲಲ್ಲಿ ಯಾರೂ ಗುರುತಿಸಲಿಲ್ಲ.

 

                      ಬಿ.ಶ್ರೀನಿವಾಸ, ದಾವಣಗೆರೆ 

 

TAGGED:“370” ದೇಶದೊಳು.370 country.dinamaana.comKannada Newsಕನ್ನಡ ನ್ಯೂಸ್‌ದಿನಮಾನ.ಕಾಂ
Share This Article
Twitter Email Copy Link Print
Previous Article Hiremath ಕಮ್ಯುನಿಸ್ಟ್ ಆಗದ ನಿಜ ಮಾರ್ಕಿಷ್ಟ್ ಹಿರೇಮಠ
Next Article BSP press met ಬಿಎಸ್ಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಪೂರ್ವ ಪೀಠಿಕೆ ಯಥಾವತ್ತಾಗಿ ಜಾರಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

UPI ವಹಿವಾಟಿಗೆ GST: ಕರ್ನಾಟಕ ಬಂದ್‌ಗೆ ಸಿದ್ಧತೆ

GST ನೋಟಿಸ್‌ ಜಾರಿ ಖಂಡಿಸಿ ರಾಜ್ಯ ವ್ಯಾಪಾರಿಗಳು ಇದೆ 25 ರಂದು ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. 2021-22ರ ಆರ್ಥಿಕ…

By Dinamaana Kannada News

Davanagere | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅ.23 ರಂದು ಬೃಹತ್‌ ಪ್ರತಿಭಟನೆ

ದಾವಣಗೆರೆ (Davanagere):  ರಾಜ್ಯ ಸರಕಾರ ಸುರ್ಪ್ರೀಂ ಕೋರ್ಟ್‌ ಆದೇಶದಂತೆ ಒಳಮೀಸಲಾತಿ ಜಾರಿ ಮಾಡಬೇಕು , ಒಳಮೀಸಲಾತಿ ಜಾರಿಗೆ ಬರುವವರೆಗೂ  ನೇಮಕಾತಿ…

By Dinamaana Kannada News

‘ದೇಶದಲ್ಲಿ ಸಮಾನತೆ ತರುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ’

ದಾವಣಗೆರೆ  (Davanagere):  ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತೀಯತೆ ತೊಲಗಿಸಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯನ್ನು ಸಂವಿಧಾನದ ಮೂಲಕ ಅನುಷ್ಠಾನಕ್ಕೆ ತರಲು…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?