ದಾವಣಗೆರೆ (Davanagere) : ಹುಬ್ಬಳ್ಳಿಯಲ್ಲಿ ನಡೆದ ಅಂತರ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಫ್ 2024 ಸ್ಪರ್ಧೆಯ 10-11 ವರ್ಷದ ಸಬ್ ಜೂನಿಯರ್ ವಿಭಾಗದಲ್ಲಿ ನಗರದ ನಿಧಿ ಬೇತೂರ್ ಹಾಗೂ 6 ವರ್ಷದ ವಿಭಾಗದಲ್ಲಿ ಸಮರ್ಥ್ ಬೇತೂರು ಕರಾಟೆ ಸ್ಪರ್ಧೆಯ ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ತಲಾ 2 ಚಿನ್ನದ ಪದಕ ಪಡೆದಿದ್ದಾರೆ.
ಕೆ.ಪಿ.ಜೋಸ್ ಅವರಿಂದ ತರಬೇತಿ ಪಡೆದಿರುವ ನಗರದ ನಿಜಲಿಂಗಪ್ಪ ಬಡಾವಣೆಯ ಬಾಪೂಜಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ನಿಧಿ ಹಾಗೂ 1ನೇ ತರಗತಿ ವಿದ್ಯಾರ್ಥಿ ಸಮರ್ಥ್, ಅಭಿಷೇಕ್ ಬೇತೂರು ಹಾಗೂ ಶ್ವೇತಾ ದಂಪತಿಗಳ ಮಕ್ಕಳು.
Read also : Davanagere | ಐತಿಹಾಸಿಕ ಕಾದಂಬರಿಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ : ಡಾ.ಪ್ರಭಾ ಮಲ್ಲಿಕಾರ್ಜುನ್