ದಾವಣಗೆರೆ (Davanagere): ಮಕ್ಕಳು ಪಟಾಕಿ ಸಿಡಿಸುವಾಗ ಜಾಗೃತರಾಗಿರುವಂತೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟಾಕಿ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಸಹ ಜೊತೆಗೆ ಇರಬೇಕು. ಯಾವುದೇ ಕಾರಣಕ್ಕೂ ಮೈ ಮರೆಯದೆ ಪಟಾಕಿ ಹಚ್ಚುವ ವೇಳೆ ಜಾಗೃತಿ ವಹಿಸುವಂತೆ ಕಿವಿಮಾತು ಹೇಳಿದರು.
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಪಟಾಕಿ ಸಂಘದ ಗೌರವಾಧ್ಯಕ್ಷ ಹಾಗೂ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಸಂಘದ ಶ್ರೀನಿವಾಸ್, ಸಿದ್ದಣ್ಣ ,ರಮೇಶ್ ಗದ್ದಾಳೆ , ರಮೇಶ್ ಜಾಧವ್, ಪಾಂಡುರಂಗಪ್ಪ , ಶಿವು ಐನಳ್ಳಿ, ವೈ ಮಲ್ಲೇಶ್, ರವಿಕುಮಾರ್, ಕಾಂತರಾಜ್ , ರಾಜು.ಹಾಲೇಶಪ್ಪ , ಜಗನ್ನಾಥ್ ಇನ್ನು ಮುಂತಾದವರು ಇದ್ದರು