Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davangere | ರಾಜ್ಯ ದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಬದ್ದ; ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ್
ತಾಜಾ ಸುದ್ದಿ

Davangere | ರಾಜ್ಯ ದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಬದ್ದ; ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ್

Dinamaana Kannada News
Last updated: November 1, 2024 10:16 am
Dinamaana Kannada News
Share
DAVANAGERE
DAVANAGERE
SHARE

ದಾವಣಗೆರೆ.ನ..1 (Davangere) ಕರ್ನಾಟಕ ರಾಜ್ಯ ವೈವಿಧ್ಯತೆಗಳನ್ನು ಹೊಂದಿರುವ ಹಲವು ಜಗತ್ತುಗಳ ಒಂದು ರಾಜ್ಯ, ಇಲ್ಲಿನ ಸರ್ವ ಜನಾಂಗದ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಜಿಲ್ಲಾಡಳಿತದಿಂದ ನ. 1 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ 69 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. 1956 ರಲ್ಲಿ ಏಕೀಕರಣಗೊಂಡ ಮೈಸೂರು ರಾಜ್ಯವನ್ನು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈಗಾಗಲೇ ನಾಮಕರಣವಾಗಿ 50 ವರ್ಷಗಳನ್ನು ಪೂರೈಸಿದ್ದು ರಾಜ್ಯದ

DAVANAGERE
DAVANAGERE

ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೊಟ್ಟ ಮೊದಲ ಹಲ್ಮಿಡಿ ಶಿಲಾಶಾಸನದ ಪ್ರತಿಕೃತಿಯನ್ನು ಪ್ರತಿಷ್ಟಾಪಿಸಲಾಗಿದೆ.

ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮದ ಅಂಗವಾಗಿ ನಾಡಿನಾದ್ಯಂತ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ದಾವಣಗೆರೆ ನಗರದ ಗಾಜಿನಮನೆಯ ಆವರಣದಲ್ಲಿ ನವೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಸಮಸ್ತ ಕನ್ನಡಿಗರ ಹಬ್ಬ, ಇದು ನಮ್ಮ ನಾಡು-ನುಡಿ, ಹಿರಿಮೆ-ಗರಿಮೆ ಗಳನ್ನು ಮೆಲುಕು ಹಾಕುವ ಸಾಂಸ್ಕೃತಿಕ ಉತ್ಸವವಾಗಿದೆ. ಕಾವೇರಿಯಿಂದ ಗೋದಾವರಿವರೆಗೆ ವಿಸ್ತಾರವಾಗಿ ಹರಡಿದ್ದ ನಾಡು ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಸಾಮ್ರಾಟ ಅಶೋಕ ಹಾಗೂ ಶಾತವಾಹನರ ಆಳ್ವಿಕೆಯಲ್ಲಿಯೂ ಕನ್ನಡ ಭಾಷೆಯ ಬಳಕೆಯನ್ನು ಕಾಣಬಹುದು. ರಾಜ ಮನೆತನಗಳಾದ ಕದಂಬ, ಗಂಗರು, ಚಾಲುಕ್ಯ, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಮತ್ತು ಮೈಸೂರು ಒಡೆಯರ ಕಾಲದಲ್ಲಿ ಕನ್ನಡ ಭಾμÉಯು ಸಾಹಿತ್ಯಿಕವಾಗಿ ಹಾಗೂ ಜನಮನದ ಭಾಷೆಯಾಗಿ ಹುಲುಸಾಗಿ ಬೆಳೆದು ಬಂದಿತು.

ಕಳೆದ 5 ದಶಕಗಳಲ್ಲಿ ರಾಜ್ಯದ ಬೆಳವಣಿಗೆಯನ್ನು ಅವಲೋಕಿಸಿದರೆ ಆಡಳಿತ, ಸಂಸ್ಕøತಿ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಲಲಿತಕಲೆ, ಜಾನಪದ, ಕೃಷಿ, ನೀರಾವರಿ, ಪ್ರವಾಸೋದ್ಯಮ, ತಂತ್ರಜ್ಞಾನ, ಕೈಗಾರಿಕೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಅಂತರರಾಷ್ಟ್ರೀಯ ಮನ್ನಣೆ ಪಡೆಯಲಾಗಿದೆ. ನಾಡು ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಈಗಿನ  ಯುವ ಜನರಿಗೆ ಪ್ರೇರಣಾದಾಯಕವಾಗಿದೆ.

ಅವರೂ ಸಹ ಕನ್ನಡ ನಾಡಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡು ರಚನಾತ್ಮಕ ಸಾಧನೆಗಳನ್ನು ಮಾಡುವಂತಾಗಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ಆಕರ್ಷಕ ಪಥ ಸಂಚಲನ: 15 ವಿವಿಧ ತುಕಡಿಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪ್ಲಟೂನ್ ಕಮಾಂಡರ್‍ನೊಂದಿಗೆ ಪಾಲ್ಗೊಂಡವು. ಮಹೇಶ್ ಪಾಟೀಲ್ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಾಗರ್ ಅತರವಾಲ್ ನಗರ ಪೊಲೀಸ್ ತಂಡ, ಅಮರೇಶ್ ಗೃಹರಕ್ಷಕದಳ, ಟಿ.ಆರ್.ಪರಶುರಾಮಪ್ಪ ಜಿಲ್ಲಾ ಅಗ್ನಿ ಶಾಮಕ ದಳ, ಎ.ಆರ್.ಜಿ ಶಾಲೆಯ ಚಿನ್ಮಯಿ, ಜಿಎಫ್‍ಜಿಸಿ ಎನ್.ಸಿ.ಸಿ ಬಸವರಾಜ.ಜಿ, ಎವಿಕೆ ಕಾಲೇಜಿನ ಎನ್.ಸಿ.ಸಿ ಕುಮಾರಿ ತರುಣಾ ರಮೇಶ್. ಒಡೆಯರ್, ಸೆಂಟ್ ಪೌಲ್ಸ್ ಸ್ಕೂಲ್ ಎನ್.ಸಿ.ಸಿ ಚಂದನ, ಭಾರತ ಸೇವಾದಳ ಆರ್‍ಎಂಎಸ್‍ಎ ಐಶ್ವರ್ಯ.ಎಂ, ಭಾರತ್ ಸ್ಕೌಟ್ಸ್ & ಗೈಡ್ಸ್ ಡಿಸ್ಟಿಕ್ ಟ್ರೂಪ್ ಗಲ್ರ್ಸ್ ಮಾನಸ .ಡಿ.ಸಿ, ಸಿದ್ದಗಂಗಾ ಹೈಸ್ಕೂಲ್ ವಿಭಾಗದಿಂದ ರೋಷಿಣಿ, ತರಳುಬಾಳು ಹೈಸ್ಕೂಲ್‍ನಿಂದ ದೀಪಾ.ವೈ, ಸಿದ್ದಗಂಗಾ ಪ್ರೈಮರಿ ಸ್ಕೂಲ್ ವಿಭಾಗದಿಂದ ಮಧುಪ್ರಿಯಾ, ಸರ್ಕಾರಿ ಬಾಲಕರ ಹೈಸ್ಕೂಲ್ ವಿಭಾಗದಿಂದ ಓಂಕಾರ್ ಈ.ಯು, ಸೆಂಟ್ ಜಾನ್ಸ್ ಹೈಸ್ಕೂಲ್ ಗಲ್ರ್ಸ್ ವಿಭಾಗದಿಂದ ಗೀತಾಂಜಲಿ ಮತ್ತು ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡ ಭಾಗವಹಿಸಿದ್ದವು.

ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 33 ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಿಟ್ಟುವಳ್ಳಿಯ ಟಿ.ಶ್ರೀನಿವಾಸ್ ಶಿಲ್ಪಕಲೆ, ದಾವಣಗೆರೆ ಮೇಘಾಚಾರಿ.ವಿ., ನಗರದ ಬಂಬೂಬಜಾರ್‍ನ ಕೆ.ಆರ್.ಮೌನೇಶ್ವರ್ ಶಿಲ್ಪಿ, ಇವರುಗಳು ಶಿಲ್ಪಕಲೆ ಕ್ಷೇತ್ರ, ಜಗಳೂರಿನ ಬಸವರಾಜು.ಟಿ, ಚನ್ನಗಿರಿಯ ಎ.ಎನ್ ಶಶಿಕಿರಣ್, ದಾವಣಗೆರೆಯ ಎಂ. ಬಸಣ್ಣ ಇವರುಗಳು ಸಂಗೀತ ಕ್ಷೇತ್ರದಲ್ಲಿ, ಮಾಯಕೊಂಡ ಪೀರಿಬಾಯಿ ಕೋಂ ಉಮ್ಲನಾಯ್ಕ, ಹರಿಹರದ ಹೆಚ್.ಪಿ. ನಾಗೇಂದ್ರಪ್ಪ, ಗುತ್ತೂರಿನ ಎಸ್.ಕೆ.ವೀರೇಶ್ ಕುಮಾರ್, ನಗರದ ಶೇಖರಪ್ಪ ನಗರದ ಪಿ.ಮೀನಾಕ್ಷಿ ಇವರುಗಳು ಜಾನಪದ ಕ್ಷೇತ್ರ,

ದಾವಣಗೆರೆಯ ಎ.ಎಂ.ಪ್ರಕಾಶ್ ಮುದ್ರಣಾ ಕ್ಷೇತ್ರ, ವಿನೋಬನಗರದ ಎಂ. ಮನು ಮತ್ತು ಹೊನ್ನಾಳಿಯ ಬಿ.ತಿಮ್ಮನಗೌಡ ಸಂಕೀರ್ಣ ಕ್ಷೇತ್ರದಲ್ಲಿ, ನಿಜಲಿಂಗಪ್ಪ ಬಡಾವಣೆಯ ಶ್ರೀನಾಥ.ಪಿ.ಅಗಡಿ ಛಾಯಾಗ್ರಹಣ, ಜಾಲಿನಗರದ ಎಸ್.ಪಿ.ಲಾವಣ್ಯ ಶ್ರೀಧರ್ ಯೋಗ, ಜಗಳೂರಿನ ಬಡಪ್ಪ ಬಯಲಾಟ, ಯಲ್ಲಮ್ಮ ನಗರದ ವಿನಾಯಕ ನಾಕೋಡ, ಎಸ್.ಎಂ.ಕೃಷ್ಣ ನಗರದ ಕೆ.ಎಸ್.ಕೊಟ್ರೇಶ್ ಇವರುಗಳು ರಂಗಭೂಮಿ ಕ್ಷೇತ್ರ, ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮದ ಎಸ್.ವಿ.ವಿಶ್ವನಾಥ ಬಯಲಾಟ, ದೊಡ್ಡಾಟ,

ನಿಜಲಿಂಗಪ್ಪ ಬಡಾವಣೆಯ ರವಿಕುಮಾರ್.ಎ.ಜೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣಕುಮಾರ್ ಇವರುಗಳು ಸಮಾಜ ಸೇವೆ, ರವಿಕುಮಾರ್ ಕನ್ನಡಪ್ರಭ ಪತ್ರಿಕೆಯ ವರದಿಗಾರರು, ಎಂ.ಬಿ.ನವೀನ್, ವಿಜಯವಾಣಿ ಸ್ಥಾನಿಕ ಸಂಪಾದಕರು, ಹೆಚ್.ಟಿ ಪರಶುರಾಮ ಪಬ್ಲಿಕ್ ಟಿ.ವಿ ಕ್ಯಾಮರಾಮ್ಯಾನ್, ಒ.ಎನ್ ಸಿದ್ದಯ್ಯ ಜನತಾವಾಣಿ ಪತ್ರಿಕೆ, ಕೆ.ಎಸ್ ಚನ್ನಬಸಪ್ಪ ಆಕಾಶವಾಣಿ-ನಗರವಾಣಿ, ಮಂಜುನಾಥ.ಎಂ.ಎಸ್ ಪತ್ರಿಕಾ ವಿತರಕರು ಇವರುಗಳು ಪತ್ರಿಕೋದ್ಯಮ ಕ್ಷೇತ್ರ,

ವಿನೋಬನಗರದ ಸಂತೋಷ್ ದೊಡ್ಮನಿ, ಶುಭಮಂಗಳ ಬಿ.ಎಸ್, ನಾಗರಾಜ ಜಮ್ನಳ್ಳಿ, ಚನ್ನಗಿರಿಯ ಎಲ್.ಜಿ.ಮಧುಕುಮಾರ್ ಇವರುಗಳು ಕನ್ನಡ ಪರ ಹೋರಾಟ, ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನ ಕೆ.ಸಿದ್ದಲಿಂಗಪ್ಪ ಸಾಹಿತ್ಯ ಕ್ಷೇತ್ರ, ಕುಕ್ಕವಾಡ ಗ್ರಾಮದ ಕೆ.ಟಿ.ಚಂದ್ರಶೇಖರಪ್ಪ ಕೃಷಿ ಕ್ಷೇತ್ರ

ಕಣ್ಮನ ಸಳೆದ ಸಾಂಸ್ಕøತಿಕ ನೃತ್ಯ:  ನಗರದ ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ, ನಿಜಲಿಂಗಪ್ಪ ಬಡಾವಣೆಯ ಗುರುಕುಲ ಪಬ್ಲಿಕ್ ಶಾಲೆ, ಶಾಮನೂರು ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು. ಹಾಗೂ ಕೊಡಗನೂರು ನಾಗರಾಜ್ ಇವರು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಗೆ ಹೆಜ್ಜೆ ಹಾಕಿದರು.

READ ALSO  : Davangere | ದಾವಣಗೆರೆ ಸ್ಮಾರ್ಟ್ ಸಿಟಿ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮೆರವಣಿಗೆ;  ರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅವರು, ಕನ್ನಡತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆ ಕಲಾತಂಡಗಳೊಂದಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು.

ಆಕರ್ಷಕ ಪಥಸಂಚಲನದಲ್ಲಿ ಬಹುಮಾನ ಪಡೆದ ತಂಡಗಳು:

ಪ್ರಥಮ ಡಿಎಆರ್.ತಂಡ, ದ್ವಿತೀಯ ಗೃಹ ರಕ್ಷಕ ದಳ ತಂಡ, ತೃತೀಯ ನಗರ ಉಪವಿಭಾಗ ಪೊಲೀಸ್ ತಂಡ, ಎನ್ ಸಿ ಸಿ ತಂಡದ ವಿಭಾಗದಿಂದ ಪ್ರಥಮ ಎ.ಆರ್.ಜಿ, ಕಾಲೇಜು ತಂಡ, ದ್ವಿತೀಯ ಜಿಎಫ್‍ಜಿಸಿ ಕಾಲೇಜು, ತೃತೀಯ ಎ.ವಿ.ಕೆ ಕಾಲೇಜು ತಂಡ ಮತ್ತು ಹೈಸ್ಕೂಲ್ ತಂಡಗಳ ವಿಭಾಗದಲ್ಲಿ ಪ್ರಥಮ ಭಾರತ ಸೇವಾದಳ ತಂಡ, ದ್ವಿತೀಯ ಸೆಂಟ್ ಜಾನ್ಸ್ ಹೈಸ್ಕೂಲ್ ಗಲ್ರ್ಸ್, ತೃತೀಯ ಸರ್ಕಾರಿ ಬಾಲಕರ ಹೈಸ್ಕೂಲ್ ತಂಡ, ಪ್ರೈಮರಿ ತಂಡಗಳ ವಿಭಾಗದಲ್ಲಿ ಪ್ರಥಮ ಸಿದ್ದಗಂಗಾ ಪ್ರಾಥಮಿಕ ಶಾಲೆ, ಮತ್ತು ವಿಶೇಷ ತಂಡ ಪ್ರಥಮ ಭಾರತ್ ಸ್ಕೌಟ್ಸ್ & ಗೈಡ್ಸ್ ಡಿಸ್ಟಿಕ್ ಟ್ರೂಪ್ ಗಲ್ರ್ಸ್ ತಂಡ ಮತ್ತು ಜಿಲ್ಲಾ ಪೊಲೀಸ್ ವಾದ್ಯವೃಂದ ತಂಡಗಳು ಬಹುಮಾನ ಪಡೆದವು.

ಬಹುಮಾನ ಪಡೆದ ಸಾಂಸ್ಕøತಿಕ ನೃತ್ಯ ತಂಡಗಳು: ಪ್ರಥಮ ನಿಜಲಿಂಗಪ್ಪ ಬಡಾವಣೆಯ ಗುರುಕುಲ ಪಬ್ಲಿಕ್ ಶಾಲೆ, ದ್ವಿತೀಯ ಶಾಮನೂರು ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆ, ತೃತೀಯ ನಗರದ ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ ಬಹುಮಾನ ಪಡೆದವು.

ಹಲ್ಮಿಡಿ ಶಾಸನ ಸ್ಥಾಪನೆ; ಮೊಟ್ಟ ಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಷ್ಟಾಪಿಸಲಾಯಿತು.

ಈ ವೇಳೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿ ನೆರವೇರಿಸಿದರು.

ಸಮಾರಂಭದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್.ಬಸವಂತಪ್ಪ, ಮೇಯರ್ ಚಮನ್ ಸಾಬ್.ಕೆ, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿ.ಪಂ ಸಿಇಒ ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಹಾಗೂ ಇನ್ನಿತರೆ ಗಣ್ಯರು ಭಾಗವಹಿಸಿದ್ದರು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere Davangere | ದಾವಣಗೆರೆ ಸ್ಮಾರ್ಟ್ ಸಿಟಿ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Next Article Zilla Kannada Sahitya Parishad Davanagere Davangere | ಕನ್ನಡ ನಾಡು ಕಲೆ ಸಾಹಿತ್ಯ ಸಂಸ್ಕೃತಿಗಳ ತವರೂರು : ಬಿ.ವಾಮದೇವಪ್ಪ ಬಣ್ಣನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅ. 23 ರಂದು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ

ದಾವಣಗೆರೆ  (Davanagere):  ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಶೀಘ್ರವೇ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ…

By Dinamaana Kannada News

ಡಿ.29 ಗೆಜೆಟೆಡ್ ಪ್ರೊಬೆಷನರ್ ಗ್ರೂಪ್‌ನ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆ

ದಾವಣಗೆರೆ (DAVANAGERE) : ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್‌ನ 'ಎ' ಮತ್ತು…

By Dinamaana Kannada News

ಹೃದಯಗಳ ನಡುವೆ ಬೆಸುಗೆ ಅವಶ್ಯ

ಹರಿಹರ:   ಚರಿತ್ರೆಯಲ್ಲಿನ ಸೌಹಾರ್ದ, ಸಾಮರಸ್ಯದ ಭಾಗಗಳನ್ನು ವರ್ತಮಾನಕ್ಕೆ ತಂದುಕೊಂಡು ಹೃದಯಗಳ ನಡುವೆ ಬೆಸುಗೆಯಾಗಿ ರೂಪುಗೊಳ್ಳುವಂತೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ | ಭದ್ರಾ ನಾಲೆ ವಿವಾದ : ಜುಲೈ 4 ರಂದು ಪ್ರತಿಭಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಸಂಚಾರಿ ನಿಯಮ ಉಲ್ಲಂಘನೆ : ಆಟೋಗಳ ಮೇಲೆ 07 ಪ್ರಕರಣ ದಾಖಲು

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್: ಎಸ್‌ಎಎಸ್‌ಎಸ್ ಯೋಗ ಪಟುಗಳಿಗೆ ವಿಭಾಗವಾರು ಪ್ರಶಸ್ತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಕೋಳಿ ಸಾಕಾಣಿಕೆ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?