ದಾವಣಗೆರೆ (Davanagere) : ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಪೋಲೀಸರು ಬಂಧಿಸಿದ್ದು, ಅರೋಪಿತರಿಂದ ಅಂದಾಜು 7.83.000/- ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ದಿ. 26/10/2024 ರಂದು ಪ್ರಕರಣದ ದೂರುದಾರ ಕೌಶಿಕ್ ಬಿ.ಆರ್ ರವರು ಬಡಾವಣೆ ಪೊಲೀಸ್ ಠಾಣೆಗೆ ಹಾಜರಾಗಿ ಅ-26.-27 ರಂದು ಮದುವೆ ಹಿನ್ನಲೆಯಲ್ಲಿ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಬಕ್ಕೇಶ್ವರ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು, ಮದುವೆ ಸಮಾರಂಭದಲ್ಲಿರುವಾಗ ಅ. 26 ರಂದು ರಾತ್ರಿ ವೇಳೆ ಕಲ್ಯಾಣ ಮಂಟಪದ ಮೊದಲು ಮಹಡಿ ರೂಮ್ ನಲ್ಲಿ ಬ್ಯಾಗಿನಲ್ಲಿದ್ದ ಸುಮಾರು 73 ಗ್ರಾಂ ತೂಕದ 1) ಎರಡು ಎಳೆಯ ಮಾಂಗಲ್ಯ ಸರ 2) ಒಂದು ಎಳೆಯ ಚೈನ್ 3) ಒಂದು ಜೊತೆ ಚಿಕ್ಕ ಜುಮುಕಿ ಒಡವೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನುವ ದೂರಿನ ಮೇರೆಗೆ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಎಸ್ಪಿ ವಿಜಯಕುಮಾರ್ ಎಂ ಸಂತೋಷ್ & ಮಂಜುನಾಥ್ ಜಿ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ರವರ ನೇತೃತ್ವದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಂ.ಆರ್ ಚೌಬೆ ರವರ ನೇತೃತ್ವದ ತಂಡವು ಪ್ರಕರಣದಲ್ಲಿನ ಆರೋಪಿತರ ಪತ್ತೆಗೆ ಕಾರ್ಯಚರಣೆಗೆ ನಡೆಸಿ ಕಲ್ಯಾಣ ಮಂಟಪಗಳಲ್ಲೇ ಕಳ್ಳತನ ಮಾಡುತ್ತಿದ್ದ ಆರೋಪಿತರಾದ ಕಿರಣ್ ನಾಯ್ಕ್, ವಿನೋದ್ ನಾಯ್ಕ್ ದಸ್ತಗಿರಿ ಮಾಡಿದ್ದಾರೆ.
.ಆರೋಪಿತರಿಂದ ಕಳ್ಳತನ ಮಾಡಿದ್ದ ಅಂದಾಜು 5,32,000/- ರೂ ಮೌಲ್ಯದ ಸುಮಾರು 80 ಗ್ರಾಂ ತೂಕದ (1) ಎರಡು ಎಳೆ ಬಂಗಾರದ ಮಾಂಗಲ್ಯ ಸರ 2) ಒಂದು ಎಳೆ ಬಂಗಾರದ ಚೈನ್, 3) ಒಂದು ಜೊತೆ ಜುಮುಕಿ, ಕಳವು ಮಾಡಿದ ಬಂಗಾರವನ್ನು ಮಾರಾಟ/ ಅಡಮಾನ ಮಾಡಿ ಹೊಸದಾಗಿ ಖರೀದಿ ಮಾಡಿದ ತಾಳಿ, 02 ಉಂಗುರ, 03 ತಾಳಿ ಗುಂಡುಗಳು, ಸುಮಾರು 24 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕಾಲು ಕಡಗ , ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಹಾಗೂ 1.25.000/-ರೂ ನಗದು ಹಣ, ಕೃತ್ಯಕ್ಕೆ ಬಳಸಿದ ಸುಮಾರು 70.000/- ರೂ ಮೌಲ್ಯದ ಸ್ಕೂಟರ್ ಮತ್ತು ಸುಮಾರು 56.000/- ರೂ ಮೌಲ್ಯದ 07 ಮೊಬೈಲ್ ಪೋನ್‌ಗಳು ಸೇರಿದಂತೆ ಒಟ್ಟು 7.83.000/- ರೂ ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಹಣ ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Read also : Davanagere | ಹಜರತ್ ಸೈಯದ್ ಚಮನ್ ಶಹವಾಲಿ ದರ್ಗಾಕ್ಕೆ ಸಚಿವ ಮಲ್ಲಿಕಾರ್ಜುನ್ ಭೇಟಿ
ಆರೋಪಿತರ ಹಿನ್ನೆಲೆ: ಆರೋಪಿತ ಕಿರಣ್ ನಾಯ್ಕ್ ದಾವಣಗೆರೆ ಜಿಲ್ಲೆಯ ವಿದ್ಯಾನಗರ ಠಾಣೆಯ 05 ಪ್ರಕರಣಗಳು, ಬಡಾವಣೆ ಠಾಣೆಯ 04, ಗಾಂಧಿನಗರ ಠಾಣೆಯ 01, ಬಸವನಗರ ಠಾಣೆಯ 01 ಪ್ರಕರಣ ಹಾಗೂ ಹಾಲಿ ಕೆಟಿಜೆ ನಗರ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 12 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಈ ಪ್ರಕರಣದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್ ಚೌಬೆ, ಪಿಎಸ್‌ಐ ನಾಗರಾಜ್ ಬಿ.ಆರ್, ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಹರೀಶ್, ಬಸವರಾಜ, ಧ್ರುವ, ಬಸವರಾಜ.ಡಿ, ಗೀತಾ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ರಾಮಚಂದ್ರ ಜಾಧವ್, ಶಾಂತರಾಜ್ ರವರುಗಳನ್ನು ಒಳಗೊಂಡ ತಂಡಕ್ಕೆ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ರವರು ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.