ದಾವಣಗೆರೆ (Davanagere) : ತಾಲ್ಲೂಕಿನ ಹಳೆ ಬಾತಿ ಗ್ರಾಮದಲ್ಲಿನ ಹಜರತ್ ಸೈಯದ್ ಚಮನ್ ಶಹವಾಲಿ ದರ್ಗಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಭೇಟಿ ನೀಡಿ ಪ್ರಗತಿ ಕಾರ್ಯ ಪರಿಶೀಲಿಸಿದರು.
ಹಳೇ ಬಾತಿ ಗ್ರಾಮದ ಹಜರತ್ ಸೈಯದ್ ಕಡಕ್ ಚಮನ್ ಶಹಾವಲಿ ದರ್ಗಾ ಭಾವೈಕ್ಯತೆ ಪ್ರವಾಸಿ ಸ್ಥಳವಾಗಿದ್ದು, ಹಿಂದೂ, ಮುಸ್ಲಿಂ ಸೇರಿ ಅನೇಕರು ಇಲ್ಲಿನ ದರ್ಗಾಕ್ಕೆ ಪೂಜೆ ಮಾಡುವರು. ದರ್ಗಾವನ್ನು ನೂರಾರು ವರ್ಷದ ಹಿಂದೆ ಕಟ್ಟಲಾಗಿದ್ದು ಅಭಿವೃದ್ಧಿಗಾಗಿ ಭಕ್ತರು ಮನವಿ ಮಾಡಿದ್ದರು.
ನಮ್ಮ ಕಾಂಗ್ರೆಸ್ ಸರ್ಕಾರದಿಂದ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ. ಈ ಹಿನ್ನಲೆ ಇಲ್ಲಿನ ದರ್ಗಾದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಸಚಿವರು ಕಳಪೆ ಕಾಮಗಾರಿಯಾಗದಂತೆ ಜಾಗೃತಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಯ ಮೇಯರ್ ಚಮನ್ ಸಾಬ್, ಮುಖಂಡರಾದ ರಹೀಸಾಬ್, ಮಾಗನಹಳ್ಳಿ ಪರಶುರಾಮ್, ಬೂದಾಳ್ ಬಾಬು, ಕೆ.ಜಿ. ಉಮೇಶ್,ಬಾತಿ ಶಿವಕುಮಾರ್, ಹೊನ್ನೂರು ಪ್ರಕಾಶ್, ಶ್ಯಾಗಲೆ ರಾಜಣ್ಣ, ಎ.ಸಿ ಹನುಮಂತಪ್ಪ ದರ್ಗಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಹಳೆ ಬಾತಿ ಗ್ರಾಮದ ಮುಖಂಡರುಗಳು, ಗ್ರಾಮಸ್ಥರು ಇದ್ದರು.