ದಾವಣಗೆರೆ (DAVANAGERE): ದಾನ ಕೊಟ್ಟ ತೃಪ್ತಿಪಡಿಸಲು ಸಾದ್ಯವಿದ್ದರೆ ಅದು ಅನ್ನದಾನದಿಂದ ಮಾತ್ರ ಸಾಧ್ಯ” ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ನಗರದ ಕೆಬಿ ಬಡಾವಣೆಯ ಕೆನಾರ ಬ್ಯಾಂಕ್ ಹಿಂಭಾಗದಲ್ಲಿರುವ ಅಬೇರು ಮಂಜಣ್ಣ ಶ್ರೀಮತಿ ಲತಾ ಮಂಜಣ್ಣ ಅವರ ಮನೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ 25ನೇ ವರ್ಷದ ಅಕ್ಕಿ ಸಮರ್ಪಣೆ ಮತ್ತು ಶ್ರೀ ಮಂಜುನಾಥ ಸ್ವಾಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾರಿಗಾದರೂ ಹತ್ತು ಲಕ್ಷ ದುಡ್ಡ ಕೊಟ್ಟು ಕೇಳಿದರೆ. ಇನ್ನು ಸ್ವಲ್ಪ ಕೊಡಿ ಸ್ವಾಮಿ ಎನ್ನಬಹುದು. ಆದರೆ ಊಟ ಮಾಡಿ ತೃಪ್ತಿಯಾದವರಿಗೆ ಇನ್ನು ಸ್ವಲ್ಪ ಊಟ ಮಾಡಿ ಎಂದರೆ ಹೊಟ್ಟೆ ತುಂಬಿದೆ ವಾಂತಿಯಾಗುತ್ತದೆ ಬಿಟ್ಟುಬಿಡಿ ಎನ್ನುತ್ತಾರೆ. ಹಾಗಾಗಿ ದಾನ ಕೊಟ್ಟು ತೃಪ್ತಿಪಡಿಸಲು ಸಾಧ್ಯವಿದ್ದರೆ ಅದು ಅನ್ನದಾನದಿಂದ ಮಾತ್ರ ಸಾಧ್ಯ ಎಂದರು.
ಧರ್ಮಸ್ಥಳದಲ್ಲಿ ಹಿಂದಿನಿಂದಲೂ ಅನ್ನದಾನ, ವಿದ್ಯಾದಾನ, ಔಷಧ ದಾನ, ಅಭಯ ದಾನ ಈ ನಾಲ್ಕು ದಾನವನ್ನು ಮಾಡಿಕೊಂಡು ಬರಲಾಗಿದ್ದು, ಅಭಯ ದಾನದಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಸೇರಿಕೊಂಡಿದ್ದು, ಅನ್ನದಾನಕ್ಕೆ ಪ್ರತ್ಯೇಕವಾದ ಮಹತ್ವವಿದೆ. ದಾಸೋಹ ಎಂಬ ಪದದಲ್ಲಿ ಎಚ್ಚರಿಕೆಯಿಂದ ರುಚಿಕರವಾದ ಅಡುಗೆ ಮಾಡಿ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರನ್ನು ಅನ್ನದ ಮೂಲಕ ತೃಪ್ತಿಪಡಿಸಲಾಗುತ್ತಿದೆ ಎಂದರು.
ಧರ್ಮಸ್ಥಳ ಕ್ಷೇತ್ರದ ಉಗ್ರಾಣದಲ್ಲಿ ಆಹಾರ ಧಾನ್ಯಗಳು ಇದೆಯೇ ಎಂಬ ಚಿಂತೆ ಇಲ್ಲ. ತಮಿಳುನಾಡು, ದಾವಣಗೆರೆ ಸೇರಿದಂತೆ ಕರ್ನಾಟಕದ ಎಲ್ಲಾ ಭಾಗಗಳಿಂದ ಭಕ್ತರ ಅಕ್ಕಿ, ತರಕಾರಿ ಸೇರಿದಂತೆ ಎಲ್ಲಾ ಆಹಾರ ಧಾನ್ಯಗಳು ಕಳುಹಿಸಿಕೊಡುತ್ತಾರೆ. ತಿರುಪತಿಯಿಂದ ಬಂದು ಅನ್ನದಾನದ ವ್ಯವಸ್ಥೆ ಕುರಿತು ಸಲಹೆ ಪಡೆದುಕೊಂಡು ಹೋಗಿದ್ದು, ಈ ಸ್ವತಂತ್ರ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅದರಂತೆ ಅನ್ನದಾನದಷ್ಟು ಶ್ರೇಷ್ಠ ಇನ್ನೊಂದಿಲ್ಲ ಎಂದು ಕಂಡಿರುವುದುರಿಂದ ಎಲ್ಲಾ ಕ್ಷೇತ್ರದಲ್ಲಿ ಅನ್ನದಾನ ಶುರುವಾಗಿದೆ ಎಂದರು.
ಧರ್ಮಸ್ಥಳದಲ್ಲಿ ಅನ್ನ ಸ್ವೀಕರಿಸಿದವರು ಹೊಟ್ಟೆ ತುಂಬಿಸಿಕೊಳ್ಳುವುದರ ಜೊತೆಗೆ ಸಂತೋಷವನ್ನು ಹೊಂದುತ್ತಾರೆ.
ಯಾವುದೇ ದೇವರಿಗೆ ಹೋಮದ ಅಗ್ನಿ ಮೂಲಕವೇ ಭಕ್ತಿಯನ್ನು ಸಮರ್ಪಣೆ ಮಾಡುತ್ತೇವೆ. ಅದೇ ರೀತಿ ನಮ್ಮ ಒಳಗೂ ಒಂದು ಜಟರಾಗ್ನಿ ಇದ್ದು, ನಾವು ಯಾವುದೇ ಆಹಾರ ತಿಂದರು ಅದು ಜಿರಣ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ನಾಲಿಗಿಯ ರುಚಿತ ನೋಡದೆ ಜಟರಾಗ್ನಿಯನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.
ವೀರೇಂದ್ರ ಹೆಗ್ಗಡೆ ಅವರನ್ನು ಮಹಿಳೆಯರು ಪೂರ್ಣಕುಂಬ ಮೇಳದೊಂದಿಗೆ ವೇದಿಕೆಗೆ ಕರೆತರಲಾಯಿತು. ಅಣಬೇರು ಮಂಜಣ್ಣ ಅವರ ಕುಟುಂಬದಿಂದ ವೀರೇಂದ್ರ ಹೆಗಡೆ ಅವರಿಗೆ ಗೌರವ ಸಮರ್ಪಿಸಿದ ನಂತರ ಕಲ್ಪವೃಕ್ಷ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಕುಸುಮ ಶ್ರೇಷ್ಠಿ, ಬಸವರಾಜ್ ಬಾಬಣ್ಣ ಹರಿಹರ ಸೇರಿದಂತೆ ಇತರರು ಇದ್ದರು.
Read also : ಹಜರತ ಸೈಯದ್ ಚಮನ್ ಷಾ ವಲಿ ದರ್ಗಾಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭೇಟಿ