ದಾವಣಗೆರೆ (Davanagere): ಸಂಸದರು ವಿವಾಹ ಮಹೋತ್ಸವಕ್ಕೆ ಆಗಮಿಸದಿದ್ದರೆ ತಾಳಿಯನ್ನೇ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ ನೀಡಿದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಾರ್ಯಕರ್ತನ ಮನವೊಲಿಸಿದ್ದಾರೆ.
ಕಳೆದ ಗುರುವಾರ ಸಂಸದರ ಗೃಹಕಚೇರಿಗೆ ಆಗಮಿಸಿ ಮಾರ್ಚ್ 6 ರಂದು ನಡೆಯಲಿರುವ ತನ್ನ ವಿವಾಹ ಮಹೋತ್ಸವಕ್ಕೆ ಆಗಮಿಸುವಂತೆ ಯುವಕ ಸಂದೀಪ್ ಸಂಸದರಿಗೆ ವಿವಾಹದ ಆಹ್ವಾನ ಪತ್ರಿಕೆ ನೀಡಿದ್ದಾನೆ ಅಷ್ಟೇ ಅಲ್ಲದೇ ಸಂಸದರು ವಿವಾಹಕ್ಕೆ ಆಗಮಿಸದಿದ್ದರೆ ವಧುವಿಗೆ ತಾಳಿಯನ್ನೇ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಈ ಹಿನ್ನೆಲೆಯಲ್ಲಿ ಕಾರ್ಯನಿಮಿತ್ತ ಚನ್ನಗಿರಿಗೆ ತೆರಳಿದ್ದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕರ್ತ ಸಂದೀಪ್ ಅವರ ಚನ್ನಗಿರಿಯ ನಿವಾಸಕ್ಕೆ ಭೇಟಿ ನೀಡಿ ಮಾರ್ಚ್ 6 ರಂದು ದಾವಣಗೆರೆ ಕ್ಷೇತ್ರದಲ್ಲಿ ಲಭ್ಯವಿರದ ಕಾರಣ ಹೇಳಿ ಆತನ ಮನವೊಲಿಸಿ ವಿವಾಹಕ್ಕೆ ಶುಭಕೋರಿ ಉಡುಗೊರೆ ನೀಡಿದ್ದಾರೆ ಜೊತೆಗೆ ಆತನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾರೆ.
ಸಂಸದರ ಸರಳತೆಗೆ ಕುಟುಂಬದ ಸದಸ್ಯರು ಸಂತಸ ಪಟ್ಟಿದ್ದಾರೆ.