Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ದಾವಣಗೆರೆಯಲ್ಲಿ ಮೈಸೂರಿನ ವಿದ್ವಾನ್ ಪುಟ್ಟಣ್ಣಯ್ಯ ಅವರ ರಂಗಸಂಗೀತ ಸಂಜೆ
ಅಭಿಪ್ರಾಯ

ದಾವಣಗೆರೆಯಲ್ಲಿ ಮೈಸೂರಿನ ವಿದ್ವಾನ್ ಪುಟ್ಟಣ್ಣಯ್ಯ ಅವರ ರಂಗಸಂಗೀತ ಸಂಜೆ

ಮಲ್ಲಿಕಾರ್ಜುನ ಕಡಕೋಳ
Last updated: March 25, 2025 8:31 am
ಮಲ್ಲಿಕಾರ್ಜುನ ಕಡಕೋಳ
Share
mysore-puttannaiah-musical-event-davangere
SHARE

ಮೈಸೂರು ನಿವಾಸಿ ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ (ವಿದ್ವಾನ್ ಪುಟ್ಟಣ್ಣಯ್ಯ ) ಅವರ ಹುಟ್ಟೂರು ಹಾಸನ ಜಿಲ್ಲೆ ಅರಸೀಕೆರೆ ಬಳಿಯ ಯರಿಗೇನಹಳ್ಳಿ. ಮುದ್ದಪ್ಪ ಮತ್ತು ಲಕ್ಷ್ಮಮ್ಮ ಅಪ್ಪ ಅಮ್ಮ. ಇವರ ತಾತ ಸಿದ್ದಪ್ಪ, ಮೂಡಲಪಾಯ ಯಕ್ಷಗಾನದ ಭಾಗವತರು. ಬಾಲ್ಯದಲ್ಲೇ ಇನಿತು ರಂಗಸಂಸ್ಕೃತಿಯ ದಿವಿನಾದ ಒಡನಾಟ. ವೇಣು ವಿದ್ವಾನ್ ಶ್ರೀ ಸೋಮಶೇಖರಪ್ಪ ಅವರ ವಾಂಛಲ್ಯಭರಿತ ಶಿಷ್ಯತ್ವ.

ದಕ್ಷಿಣಾದಿ ಸಂಗೀತದ ಪ್ರೌಢಿಮೆ. ಲೀಲಾಜಾಲ ಮಾತ್ರವಲ್ಲ , ಲಾಲಿತ್ಯಮಯವಾಗಿ ಹಾರ್ಮೋನಿಯಂ ನುಡಿಸುವ ನೈಪುಣ್ಯ ಸಂಪನ್ನತೆ. ಗುಬ್ಬಿ ವೀರಣ್ಣ ನಾಟಕ ಕಂಪನಿಯಂತೂ ಪುಟ್ಟಣ್ಣಯ್ಯ ಅವರ ಮಧುರ ಕಂಠಕೆ ಮತ್ತು ಹಾರ್ಮೋನಿಯಂ ನುಡಿಸುವ ಸಲಿಲತೆಗೆ ಉತ್ಕೃಷ್ಟತೆಯ ‌ಮೆರುಗು ನೀಡಿತು.

ಮೈಸೂರು ರಂಗಾಯಣಕ್ಕೆ ಸದಾರಮೆ, ಮಂಡ್ಯ ರಮೇಶ ‘ನಟನ’ ತಂಡಕ್ಕೆ ಸುಭದ್ರಾ ಕಲ್ಯಾಣ ಸೇರಿದಂತೆ ಸುರುಚಿ ರಂಗಮನೆ, ಕದಂಬ ರಂಗವೇದಿಕೆಗಳಿಗೆ ಮನ್ಮಥ ವಿಜಯ, ಕುರುಕ್ಷೇತ್ರ ಮುಂತಾದ ನಾಟಕಗಳ ರಂಗಸಂಗೀತ, ವಿನ್ಯಾಸ, ನಿರ್ದೇಶನದ ಮಹಾಮಣಿಹ ಪ್ರಾಪ್ತಿ. ವಾಲ್ಮೀಕಿ ವಿರಚಿತ “ಶ್ರೀಮದ್ ರಾಮಾಯಣ” ಎಂಬ ಸಂಗೀತ ಸಾದೃಶ್ಯ ಮಹಾಕಾವ್ಯವನ್ನು ಇತ್ತೀಚೆಗೆ ರಂಗಪ್ರಯೋಗಕ್ಕಿಳಿಸಿ ಯಶಸ್ಸು ಗಳಿಸಿದ್ದಾರೆ.

ಅಂದಹಾಗೆ ಪುಟ್ಟಣ್ಣಯ್ಯನವರ ಸಿರಿಕಂಠದ ಸುಮಧುರ ಸರೋವರದಲ್ಲಿ 2783 ರಂಗಗೀತೆಗಳು ಮಾಧುರ್ಯಗೊಂಡಿವೆ. ಹೀಗೆ ಚೈತನ್ಯಶೀಲ ವೃತ್ತಿ ರಂಗಭೂಮಿಯ ಹಲವು ಅನನ್ಯತೆಗಳನ್ನು ಬದುಕಿದವರು. ಇಷ್ಟೆಲ್ಲಾ ಪಾಂಡಿತ್ಯದ ಆಡುಂಬೊಲವೇ ಆಗಿರುವ ಪುಟ್ಟಣ್ಣಯ್ಯ ಅವರ ವಿದ್ವಜ್ಜನ ವಿಧೇಯಭಾವ ಸಜ್ಜನಿಕೆಗೆ ಶರಣು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಎಂಬತ್ತರ ಅಂಚಿನ ಏರುಪ್ರಾಯದ ಪುಟ್ಟಣ್ಣಯ್ಯನವರು ಕನ್ನಡ ರಂಗಸಂಗೀತದ ಸವ್ಯಸಾಚಿಯೇ ಹೌದು. ಇದೇ ಮಾರ್ಚ್ 27 ರಂದು ಸಂಜೆ, ದಾವಣಗೆರೆ ರಂಗಾಯಣದ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ. ಶಿವಯೋಗಿ ಮಂದಿರದ ಆವರಣದಲ್ಲಿ ದಾವಣಗೆರೆ ಸಹೃದಯರಿಗೆ ಅವರ ಸ್ವರ ಸಾರಥ್ಯದ ‘ರಂಗ ಗೀತಾಂಜಲಿ’ ತಂಡ ಉಣಬಡಿಸುವ ರಂಗಸಂಗೀತದ ರಸದೌತಣ. ಬನ್ನಿ, ಪರಿಶುಭ್ರ ರಂಗಸಂಗೀತ ಸಾಗರದಲಿ ಮುಳುಗೇಳೋಣ.

ಮಲ್ಲಿಕಾರ್ಜುನ ಕಡಕೋಳ

TAGGED:Mallikarjuna Kadakolamusical eventmysore puttannaiahಮಲ್ಲಿಕಾರ್ಜುನ ಕಡಕೋಳರಂಗಸಂಗೀತ ಸಂಜೆವಿದ್ವಾನ್ ಪುಟ್ಟಣ್ಣಯ್ಯ
Share This Article
Twitter Email Copy Link Print
By ಮಲ್ಲಿಕಾರ್ಜುನ ಕಡಕೋಳ
ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಹಗಾರರಾದ ಮಲ್ಲಿಕಾರ್ಜುನ ಕಡಕೋಳ ಅವರು ಜನಿಸಿದ್ದು 1956 ಅಕ್ಟೋಬರ್‌ 2ರಂದು. ಹುಟ್ಟೂರು ಗುಲ್ಬರ್ಗ ಜಿಲ್ಲೆಯ ಕಡಕೋಳ. ತಂದೆ ಸಾಧು, ತಾಯಿ ನಿಂಗಮ್ಮ. ಹುಟ್ಟೂರು, ಯಡ್ರಾಮಿ ಹಾಗೂ ಗುಲ್ಬರ್ಗದಲ್ಲಿ ಶಿಕ್ಷಣ ಪಡೆದ ಇವರು ಆರೋಗ್ಯ ಇಲಾಖೆಯಲ್ಲಿ ಬೋದಕರಾಗಿ, ಹಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ, ದಾವಣಗೆರೆ ಮಹಾನಗರಪಾಲಿಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೈವಾರ ನಾರಾಯಣ ತಾತ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಕರ್ನಾಟಕ ರಂಗ ಸಮಾಜ ನಿಕಟಪೂರ್ವ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಫಲ್ಗುಣಿಯಲಿ ಕೇಳಿಬಂದ ರುದ್ರವೀಣೆ (ವೈಚಾರಿಕ ಲೇಖನಗಳು), ಅವಳ ಸನ್ನಿಧಿಯಲಿ...(ಅಂಕಣ ಬರಹ), ರಂಗ ಸುನೇರಿ (ವಿಮರ್ಶಾ ಸಂಕಲನ), ದ್ರುಪದ (ಶಾಸ್ತ್ರೀಯ ಸಂಗೀತ ಕೃತಿ), ಕಡಕೋಳ ಮಡಿವಾಳಪ್ಪನವರ ತತ್ವಜ್ಞಾನ ಪದಗಳು (ಸಂಪಾದಿತ ಕೃತಿಗಳು), ಜೀವನ್ಮುಖಿ (ಸಂ: ಅಭಿನಂದನ ಗ್ರಂಥ), ರಂಗ ವಿಹಂಗಮ, ದಾವಣಗೆರೆ ಜಿಲ್ಲೆ ರಂಗಭೂಮಿ, ಕಂಚಿಕೇರಿ ಶಿವಣ್ಣ, ರಂಗ ಬಾಸಿಂಗ, ರಂಗ ಕಂಕಣ ( ಸಂಪಾದಿತ ಕೃತಿ ), ರಂಗ ಮಲ್ಲಿಗೆ, ಲಾಸ್ಟ್ ಬೆಲ್ (ಮಾನವಿಕ ಕೃತಿ), ತೆನೆ ತೇರು, ಕಾಯಕ, ನೌಕರ ಬಂಧು, ಸಂವೇದನೆ, ಯಡ್ರಾಮಿ ಸೀಮೆ ಕಥನಗಳು (ಆಯ್ದ ಅಂಕಣ ಬರಹಗಳು) ಮುಂತಾದವು.
Previous Article Davanagere Davanagere | ಭದ್ರಾ ಕಾಲುವೆಗೆ ಬಿದ್ದ ನಾಯಿ ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
Next Article davanagere ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಕನ್ನಡ ಶಾಲೆಗಳ ಜೀವಂತಿಕೆ ಅಗತ್ಯ : ಜಿ. ಬಿ. ವಿನಯ್ ಕುಮಾರ್ ಪ್ರತಿಪಾದನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ವಿಶೇಷಚೇತನರು ಶೇ 100 ರಷ್ಟು ಮತದಾನ ಮಾಡಿ : ಪಿ.ಎಸ್.ವಸ್ತ್ರದ್ ಕರೆ

ದಾವಣಗೆರೆ,ಮಾರ್ಚ್.೨೭: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮೇ ೭ ರಂದು ನಡೆಯುವ ಮತದಾನದಲ್ಲಿ ಎಲ್ಲ ವಿಶೇಷಚೇತನರು ಶೇ ೧೦೦ ರಷ್ಟು ಮತದಾನ…

By Dinamaana Kannada News

ಸೊಂಡೂರಿನ ಕಗ್ಗತ್ತಲೆಯ ಕಥನಗಳು -9 ನಿಜ…, ಮಕ್ಕಳ ಮುಂದೆ ಅಪ್ಪ ಅಳಬಾರದು

ಮಕ್ಕಳ ಮುಂದೆ ಅಪ್ಪ ಅಳಬಾರದು ಅಪ್ಪನ ಕಣ್ಮುಂದೆ ಮಕ್ಕಳು ಸಾಯಬಾರದು ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು. ಕೈಯ್ಯ ಕಸುಬುಗಳನ್ನು ಕಿತ್ತುಕೊಂಡು…

By Dinamaana Kannada News

Crime News | ವಯೋವೃದ್ದರ ಪಾಲನೆ ಮಾಡುವ ನೆಪದಲ್ಲಿ ಕಳ್ಳತನ : ಆರೋಪಿ ಸೆರೆ

ದಾವಣಗೆರೆ (Davanagere): ಮನೆಯಲ್ಲಿ ಹಾಸಿಗೆ ಹಿಡಿದ ವಯೋವೃದ್ದರ ಪಾಲನೆ ಮಾಡುವ ನೆಪದಲ್ಲಿ ಕೆಲಸಕ್ಕೆ ಸೇರಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು…

By Dinamaana Kannada News

You Might Also Like

K.P. Suresh
ಅಭಿಪ್ರಾಯ

ಆಗಸ್ಟ್‌ 15ರ ದುಗುಡ : ಬರಹ ಕೆ.ಪಿ.ಸುರೇಶ್

By Dinamaana Kannada News
MLA dg shanthana Gowda MC mohan
ಅಭಿಪ್ರಾಯ

ಹಾಲಿ ಶಾಸಕರ ಸ್ವಗ್ರಾಮದಲ್ಲಿಯೇ ಪ್ರಜಾಪ್ರಭುತ್ವವನ್ನು ಅಸ್ಪೃಶ್ಯತೆಯ ಕಗ್ಗತ್ತಲಲ್ಲಿ ಕೂರಿಸಲಾಗಿದೆ !

By Dinamaana Kannada News
Anil Hosamani
ಅಭಿಪ್ರಾಯ

ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಅನಿಲ್ ಹೊಸಮನಿಯುವರ ಕಾರ್ಯಕ್ರಮ

By Dinamaana Kannada News ಬಿ.ಶ್ರೀನಿವಾಸ
HADAPADA APPANNA
ಅಭಿಪ್ರಾಯ

ಮಹಾಜ್ಞಾನಿ ವಚನಕಾರ, ಶಿವಶರಣ ಹಡಪದ ಅಪ್ಪಣ್ಣ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?