ದಾವಣಗೆರೆ (Davanagere): ಮನೆಯಲ್ಲಿ ಹಾಸಿಗೆ ಹಿಡಿದ ವಯೋವೃದ್ದರ ಪಾಲನೆ ಮಾಡುವ ನೆಪದಲ್ಲಿ ಕೆಲಸಕ್ಕೆ ಸೇರಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ ಬಂಧಿಸಿದ್ದಾರೆ.
ಹಾಸಿಗೆ ಹಿಡಿದ ವಯೋವೃದ್ದ ತಂದೆಯವರಿಗೆ ನೋಡಿಕೊಳ್ಳಲು ಶ್ರೀ ಗುರುಕೊಟ್ಟುರೇಶ್ವರ ಹೋಮ್ ನರ್ಸಿಂಗ್ ಸರ್ವೀಸ್ ಏಜೆನ್ಸಿಯಿಂದ ಪ್ರತಿ ತಿಂಗಳು 18000 ಸಾವಿರದಂತೆ ನೇಮಕ ಮಾಡಿಕೊಡಿದ್ದು, ಪಾಲನೆ ಮಾಡುತ್ತಾ ಪಿರ್ಯಾದಿಯವರ ಮನೆಯಲ್ಲಿಯೇ ಏ.1 ರಂದು ಮನೆಯ ರೂಮ್ ವಾಲ್ ಡ್ರೂಪ್ ಡ್ರಾ ನಲ್ಲಿಟ್ಟಿದ್ದ 95 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಪತ್ತೆ ಮಾಡಿಕೊಡುವಂತೆ ರಾಘವೇಂದ್ರ. ಕೆಟೆಜೆ ನಗರ ಠಾಣೆಗೆ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್. ಎಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋóಷ್. ಮಂಜುನಾಥ್. ಜಿ. ನಗರ ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ರವರ ನೇತೃತ್ವದ ತಂಡದ ಪಿ.ಎಸ್.ಐ ಲತಾ.ಆರ್. ಹಾಗೂ ಸಿಬ್ಬಂದಿಗಳ ತಂಡ ಆರೋಪಿತನನ್ನು ವಿಚಾರಣೆ ಮಾಡಿ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ 8,00,000/-ರೂ ಬೆಲೆ ಬಾಳುವ 95 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ದೂರುದಾರರ ಬಾಬ್ತು 95 ಗ್ರಾಂ ಬಂಗಾರದ ಆಭರಣಗಳನ್ನು ಘನ ನ್ಯಾಯಾಲಯದ ಅನುಮತಿ ಆದೇಶದ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ಅವರು ರಾಘವೇಂದ್ರ.ಪಿ ರವರಿಗೆ ಹಸ್ತಾಂತರಿಸಿದರು.
Read also : ಸಂವಿಧಾನ ವಿರೋಧಿಗಳಿಗೆ ಉತ್ತೇಜನ ನೀಡುವ ಹೊಸ ಢಾಂಬಿಕತೆ ದೇಶದಲ್ಲಿ ಬೆಳೆಯುತ್ತಿದೆ : ಪಿ.ಜೆ.ಮಹಾಂತೇಶ್ ಆತಂಕ
ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ರವರ ನೇತೃತ್ವದ ತಂಡದ ಪಿ.ಎಸ್.ಐ ಲತಾ.ಆರ್. ಮತ್ತು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ., ರವಿನಾಯ್ಕ, ಶ್ರೀಮತಿ ಗೌರಮ್ಮ ಮತ್ತು ರಾಮಚಂದ್ರ ಜಾದವ್, ಶಿವಕುಮಾರ್ ಮತ್ತು ಸಿದ್ದಾರ್ಥ್ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ಐಪಿಎಸ್ ಶ್ಲಾಘಿಸಿದ್ದಾರೆ.