ದಾವಣಗೆರೆ : ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಕಳ್ಳರು ಪೆಟ್ರೋಲ್ ಸುರಿದು ಎಟಿಎಂ ಒಡೆಯಲು ಯತ್ನಿಸಿದ ವೇಳೆ ಶಾರ್ಟ್ ಸಕ್ರ್ಯೂಟ್ ಆಗಿದೆ ಇದರಿಂದ ಬೆಂಕಿ ಹೊತ್ತಿಕೊಂಡಿದೆ ಇದನ್ನು ನೋಡಿದ ಕ್ಷಣವೇ ಕಳ್ಳರು ಎಸ್ಕೇಪ್ ಆಗಿದ್ದಾರೆ.
Read This: ದಾವಣಗೆರೆ ಬಂದ್ ವೇಳೆ ದೌರ್ಜನ್ಯ : ಬಿಜೆಪಿ ಮುಖಂಡರ ವಿರುದ್ದ ಯುವ ಕಾಂಗ್ರೆಸ್ ದೂರು
ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಳಿಚೋಡು ಗ್ರಾಮದಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಮಧ್ಯ ರಾತ್ರಿ ನುಗ್ಗಿದ್ದ ಕಳ್ಳರು ಕಬ್ಬಿಣದ ಸರಳು ಬಳಸಿ ಎಟಿಎಂ ಒಡೆಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೇ ಇದ್ದಾಗ ಪೆಟ್ರೋಲ್ ಸುರಿದಿದ್ದಾರೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹತ್ತಿಕೊಂಡಿದೆ. ದಟ್ಟ ಹೊಗೆ ಆವರಿಸುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ.
ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.