ದಾವಣಗೆರೆ : ನಗರದಲ್ಲಿ ಆಟೋಗಳಲ್ಲಿ ಹೆಚ್ಚುವರಿ ಪ್ಯಾಸೆಂಜರ್ಸ್ ಗಳನ್ನು ಹಾಕಿಕೊಂಡು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದಂತಹ ಆಟೋಗಳ ಮೇಲೆ 07 ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚನೆಯಂತೆ ಎಎಸ್ಪಿ ಮಂಜುನಾಥ ಹಾಗೂ ನಗರದ ಡಿವೈಎಸ್ಪಿ ಶರಣಬಸವೇಶ್ವರ ಭೀಮರಾವ್ ರವರ ಮಾರ್ಗದರ್ಶನದಲ್ಲಿ ಬುಧವಾರ ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಪಿ.ಎಸ್.ಐಗಳಾದ ಶೈಲಜಾ ಹಾಗೂ ನಿರ್ಮಲ ನೇತೃತ್ವದಲ್ಲಿ ಹಾಗೂ ಸಂಚಾರ ಸಿಬ್ಬಂದಿಗಳ ತಂಡಗಳು ವಿಶೇಷ ಕಾರ್ಯಚರಣೆ ನಡೆಸಿ ಆಟೋ ರಿಕ್ಷಾ ಗಳಲ್ಲಿ ನಿಗಧಿಗಿಂತ ಹೆಚ್ಚುವರಿ ವಿದ್ಯಾರ್ಥಿಗಳನ್ನು / ಪ್ಯಾಸೆಂಜರ್ಸ್ ಗಳನ್ನು ಹಾಕಿಕೊಂಡು ಚಾಲನೆ ಮಾಡುತ್ತಿದ್ದ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆಟೋಗಳ ವಿರುದ್ದ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳನ್ನು ದಾಖಲಿಸಲಾಗಿದೆ.
Read also : ದಾವಣಗೆರೆ | ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್: ಎಸ್‌ಎಎಸ್‌ಎಸ್ ಯೋಗ ಪಟುಗಳಿಗೆ ವಿಭಾಗವಾರು ಪ್ರಶಸ್ತಿ
ದಾವಣಗೆರೆ ನಗರದಲ್ಲಿ ನಿಗಧಿಗಿಂತ ಹೆಚ್ಚುವರಿ ವಿದ್ಯಾರ್ಥಿಗಳನ್ನು / ಪ್ಯಾಸೆಂಜರ್ಸ್ ಗಳನ್ನು ಹಾಕಿಕೊಂಡು ಚಲಾಯಿಸುವ ಆಟೋಗಳ ಮೇಲೆ ಇನ್ನುಮುಂದೆಯೂ ಕಾರ್ಯಚರಣೆ ನಡೆಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಈ ಮೂಲಕ ಎಲ್ಲಾ ಆಟೋ ಚಾಲಕರುಗಳಿಗೆ ತಿಳಿಸಿದ್ದಾರೆ.