ದಾವಣಗೆರೆ : ಬಸ್ ಸ್ಟಾಂಡನಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಇಬ್ಬರು ಮಹಿಳೆಯರನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿ, ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿಯ ಮಂಜುಳಾ ಬಟ್ಟೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಪೂರ್ಣಿಮಾ ಟಿ ಬಂಧಿತ ಆರೋಪಿಗಳು.
ಶ್ರೀಮತಿ ಸುಧಾ.ಟಿ. ರವಿಕುಮಾರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಸುಮಾರು 15 ತೊಲ ಬಂಗಾರ ಆಭರಣಗಳನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಜೂನ್ 25 ರಂದು ಕೆಟೆಜೆ ನಗರ ಠಾಣೆಗೆ ದೂರು ದಾಖಲಿಸಿದ್ದರು.
ಆರೋಪಿಗಳ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಮಂಜುನಾಥ್. ಜಿ. , ದಾವಣಗೆರೆ ನಗರ ಡಿವೈಎಸ್ಪಿ ಶರಣ ಬಸವೇಶ್ವರ.ಬಿ., ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್. ಹೆಚ್.ಎಸ್. ನೇತೃತ್ವದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣದ ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಆರೋಪಿತರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿಕೊಂಡಿದ್ದ ಬಾಬ್ತು 111 ಗ್ರಾಂ. ಬಂಗಾರದ ಆಭರಣಗಳನ್ನು ಬಡಾವಣೆ ಠಾಣೆ ಪ್ರಕರಣದಲ್ಲಿ ಕಳ್ಳತನವಾದ 44 ಗ್ರಾಂ ಬಂಗಾರದ ಆಭರಣಗಳು ಸೇರಿ ಒಟ್ಟು ಅಂದಾಜು 15,00,000/- ಲಕ್ಷ ರೂ. ಬೆಲೆ ಬಾಳುವ ಒಟ್ಟು 155 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Read also : ಜು.9 ರಂದು “ಭಕ್ತಿ ಸಿಂಚನ” ಕಾರ್ಯಕ್ರಮ : ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಪುರಪ್ರವೇಶ
ಆರೋಪಿತರಾದ ಮಂಜುಳಾ ಹಾಗೂ ಪೂರ್ಣಿಮ ಮೇಲೆ ದಾವಣಗೆರೆ ರೇಲ್ವೇ ಪೊಲೀಸ್ ಠಾಣೆಯಲ್ಲಿ 01, ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ 1, ಹೊಳಲ್ಕೇರೆ ಠಾಣೆಯಲ್ಲಿ 01, ದಾವಣಗೆರೆ ಬಡಾವಣೆ ಠಾಣೆಯಲ್ಲಿ 01 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್., ಪಿ.ಎಸ್.ಐ ಲತಾ.ಆರ್., ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ನಾಗರಾಜ, ಮಂಜಪ್ಪ. ಮಾರುತಿ, ಶ್ರೀಮತಿ ಗೌರಮ್ಮ ಗೀತಾ.ಸಿ.ಕೆ. ಭಾವನ ಬೆಳ್ಳೂಡಿ, ಮಮತಾ, ಅನಿತ, ಅಮರೇಶ ಸಂಗಮ, ಸೋಮಪ್ಪ .ಆರ್, ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಮೇಶ್, ಸಿದ್ದಾರ್ಥ್ ರವರನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.