ದಾವಣಗೆರೆ : ಹೆಂಡತಿಗೆ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಗಂಡನಿಗೆ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು 10 ವರ್ಷ 24 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಸಲೀಂ ಶಿಕ್ಷೆಗೊಳಗಾಗದ ವ್ಯಕ್ತಿ.
ಪತ್ನಿ ಅಸ್ಮಾ ಖಾನ್ ಅವರ ಹೊಟ್ಟೆ, ಎದೆ, ಬೆನ್ನು ಹಾಗೂ ತೊಡೆಗೆ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
Read also : Poem : ಹೊಸ ಗಾಯ
ತನಿಖಾಧಿಕಾರಿ, ಪಿಎಸ್‌ಐ ಮಹಮ್ಮದ್ ಸೈಫುದ್ದೀನ್ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರಿ ವಕೀಲ ಸತೀಶ್ ಕೆ.ಎಸ್.ವಾದ ಮಂಡಿಸಿದ್ದರು.
