ಕಟಿಶೂಲ (ಸೊಂಟ ನೋವು) ಆಯುರ್ವೇದದಲ್ಲಿ ‘ಕಟಿಗ್ರಹ’, ‘ಕಟಿಶೂಲ’ ಇತ್ಯಾದಿ ಹೆಸರಿನಿಂದ ಪರಿಗಣಿಸಲಾಗುತ್ತಿದ್ದು, ಈಗ ಕಾರಣಗಳು, ಲಕ್ಷಣಗಳು ಮತ್ತು ಆಯುರ್ವೇದ ಚಿಕಿತ್ಸೆಯನ್ನು ಸ್ಪಷ್ಟವಾಗಿ ತಿಳಿಸುತ್ತೇನೆ.
ಸೊಂಟ ನೋವು (ಕಟಿಶೂಲ) ಈಗಿನ ಕಾಲಕ್ಕೆ ತುಂಬ ಸಾಮಾನ್ಯ, ವಿಶೇಷವಾಗಿ ಹೆಚ್ಚು ಕುಳಿತಿರುವ ಕೆಲಸ, ತಪ್ಪಾದ ಭಂಗಿ, ಮತ್ತು ವಾತದೋಷದ ಹೆಚ್ಚಳದಿಂದ ಬರುತ್ತದೆ. ಆಯುರ್ವೇದದಲ್ಲಿ ಇದನ್ನು ವಾತಜನ್ಯ ವ್ಯಾಧಿ ಎಂದು ಪರಿಗಣಿಸಿದ್ದಾರೆ.
ಇದ್ದಕ್ಕಿದಂತೆ ಕಾಡುವ ಸೊಂಟನೋವು ಒಮ್ಮೊಮ್ಮೆ ದೇಹವನ್ನು ನಡುಗಿಸಿ ಬಿಡುತ್ತದೆ ಆ ಕ್ಷಣಕ್ಕೆ ನೋವಿನಿಂದ ಪಾರಾದರೆ ಸಾಕು ಅಂದುಕೊಂಡೇ ಹಲವಾರು ನೋವು ನಿವಾರಕ ಮಾತ್ರೆಯನ್ನು ಸೇವಿಸುತ್ತಾರೆ ಆದರೆ ಅದು ತಾತ್ಕಾಲಿಕ ಪರಿಹಾರ ಅಷ್ಟೆ ಆಯುರ್ವೇದ ದಲ್ಲಿ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಗಳಾದ ಒಳ–ಬಾಹ್ಯ ಚಿಕಿತ್ಸೆ, ಪಂಚಕರ್ಮ ಹಾಗೂ ದಿನಚರ್ಯೆಯ ಮೂಲಕ ಪರಿಹಾರ ನೀಡಬಹುದು.
ಸೊಂಟ ನೋವಿಗೆ ಕಾರಣಗಳು :
- ಆಹಾರದಲ್ಲಿ ವ್ಯತ್ಯಯ
- ರಾತ್ರಿ ನಿದ್ರೆ ತಪ್ಪಿಸಿ ಹಗಲು ಹೊತ್ತು ನಿದ್ರಿಸುವುದು
- ಚಿಂತೆ ,ಮಾನಸಿಕ ಒತ್ತಡ
- ಭಾರವಾದ ವಸ್ತುಗಳನ್ನುಎತ್ತುವುದು
- ದೀರ್ಘ ಕಾಲ ಕುಳಿತಿರುವುದು / ತಪ್ಪಾದ ಭಂಗಿ
- ವಾತದೋಷವರ್ಧಕ ಆಹಾರ–ಅಹಾರ ಕ್ರಮ
- ತಂಪಿಗೆ ಹೆಚ್ಚು ಒಳಪಡುವುದು
- ಬೆನ್ನು/ಸೊಂಟ ಸ್ನಾಯುಗಳಲ್ಲಿ ಬಲಹೀನತೆ
- ಸ್ತೂಲ ಕಾಯ
- ದ್ವಿಚಕ್ರ ವಾಹನದಲ್ಲಿ ದೂರ ಪ್ರಯಾಣ
- ರಸ್ತೆ ಅಪಘಾತ
- ವಂಶ ಪಾರಂಪರೆ
ಇದರ ಪರಿಣಾಮವಾಗಿ ಸೊಂಟದ ಮೇಲ್ಭಾಗದಲ್ಲಿ ಸ್ತಬ್ಧತೆ ನೋವನ್ನುಂಟು ಮಾಡಿ ಆನಂತರ ತೊಡೆ ಮಂಡಿ ಪಕ್ಕೆಲಬು ಪಾದಗಳಿಗೆ ನೋವು ಆವರಿಸುತ್ತದೆ. ಈ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚು ಸೊಂಟ ಭಾಗದಲ್ಲಿ ಪ್ರತ್ಯೇಕವಾಗಿ ಎಲ್ 4 ಮತ್ತು ಎಲ್ 5 ಬೆನ್ನು ಮೂಳೆಯ ಮದ್ಯೆ ಇರುವ ಸಯಾಟಿಕ ನರದ ಮೇಲೆ ಒತ್ತಡ ಬೀಳುವುದರಿಂದ ಈ ನೋವು ಉಂಟಾಗುತ್ತದೆ.
ಮುಖ್ಯ ಲಕ್ಷಣಗಳು
- ಸೊಂಟ ಭಾಗದಲ್ಲಿ ನೋವು
- ಕೆಳದಂಡಕ್ಕೆ ಕಠಿಣತೆ
- ಕೆಲವರಿಗೆ ಕಾಲುಗಳಿಗೆ ಕೆಳಗೆ ಕಿರಿಕಿರಿ/ ಮದ್ದುತನ
- ಹೆಚ್ಚು ಕುಳಿತು ಏಳುವಾಗ ನೋವು
- ಮಲಗಿದಾಗ ಅಥವಾ ಬೆಳಿಗ್ಗೆ ಏಳುವಾಗ ಹೆಚ್ಚು ನೋವು
- ಸೂಜಿಯಿಂದ ಚುಚ್ಚಿ ದಂತಾಗುವುದು
- ಕಾಲಿನಲ್ಲಿ ಜೋಮು ಹಿಡಿಯುವುದು
- ಸ್ಪರ್ಶಜ್ಞಾನ ಕಡಿಮೆಯಾಗುವುದು
- ನೋವು ನಿವಾರಕ ಮಾತ್ರೆಗಳಿಂದ ಇನ್ನಷ್ಟು ಸಮಸ್ಯೆಗಳು ಕಾಣಿಸುತ್ತವೆ ಆದ್ದರಿಂದ ಬೆನ್ನು ಸಂಬಂಧಿತ ಸಮಸ್ಯೆಗೆ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಸೂಕ್ತ.
ಆಯುರ್ವೇದ ಚಿಕಿತ್ಸೆ : ಇದರಲ್ಲಿ ಮೂರು ವಿಧವಾದ ಚಿಕಿತ್ಸೆಗಳಿವೆ
- ನಿಧಾನ ಪರಿವರ್ಜನ
- ಶಮನ ಚಿಕಿತ್ಸೆ
- ಶೋಧನ ಚಿಕಿತ್ಸೆ
ನಿಧಾನ ಪರಿವರ್ಜನ ಅಂದರೆ ವ್ಯಾಧಿಗೆ ಕಾರಣವಾದ ವಿಷಯಗಳನ್ನು ಪರಿಪಾಲಿಸದೆ ಇರುವಂಥದ್ದು. ಉದಾ: ವಿರುದ್ಧ ಆಹಾರ ಸೇವನೆ, ರಾತ್ರಿ ಜಾಗರಣೆ ಮಾಡಿ ಹಗಲು ನಿದ್ರೆ ಮಾಡುವುದು.
ಶಮನ ಚಿಕಿತ್ಸೆ
ವ್ಯಾಧಿ ದೋಷಗಳನ್ನು ಶಮನ ಮಾಡುವುದಕ್ಕೆ ಕೊಳ್ಳುವ ಔಷಧಗಳು.
ಇದರಲ್ಲಿ ರೋಗಿಯ ಬಲದ ಮೇಲೆ ಚೂರ್ಣ, ಗುಳಿಗೆ,ಕಷಾಯ, ಲೇಹ್ಯ,ತೈಲದಂತಹ ಔಷಧಗಳನ್ನು
ರೋಗಿಗೆ ನೀಡಲಾಗುತ್ತದೆ.
ಶೋಧನ ಚಿಕಿತ್ಸೆ
ವ್ಯಾಧಿ ತೀವ್ರತೆಯು ಶಮನ ಚಿಕಿತ್ಸೆಯಿಂದ ನಿಂತು ಹೋಗದಿದ್ದರೆ ಕೆಲವರಿಗೆ ಪಂಚಕರ್ಮ ಅಥವಾ ಶೋಧನಾ ಚಿಕಿತ್ಸೆ ನೀಡಲಾಗುವುದು.
ಆದ್ದರಿಂದ ವಾತ ಪಿತ್ತ ಕಫದಿಂದ ಗುಣಪಡಿಸಲು ಶರೀರ ಶುದ್ಧಿಯಿಂದ ಅಗ್ನಿ ಬಲವನ್ನು ಹೆಚ್ಚು ಮಾಡಲಾಗುತ್ತದೆ. ಈ ಚಿಕಿತ್ಸೆ ವಿಧಾನದಿಂದ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಾಧ್ಯ. ಆಯುರ್ವೇದದಲ್ಲಿ ಸ್ನೇಹಕರ್ಮದಿಂದ ಬೆನ್ನು ಮೂಳೆಗಳ ಮಧ್ಯೆ ಸ್ಥಗ್ಧತೆಯನ್ನು ಹೆಚ್ಚು ಮಾಡಿ ಮೂಳೆಗಳನ್ನು ಚಲಿಸುವುದಕ್ಕೆ ಸುಲಭವಾಗಿ ಅವಕಾಶ ಮಾಡಲಾಗುವುದು.
ಕಟಿ ಬಸ್ತಿ
ಈ ಚಿಕಿತ್ಸೆಗೆ ಆಯುರ್ವೇದದಲ್ಲಿ ಹೆಚ್ಚು ಪ್ರಾಧಾನ್ಯ ನೀಡಲಾಗಿದೆ. ಸವೆದು ಹೋದಂತಹ ಕಾರ್ಟಿಲೆಜ್ ರಕ್ತ ಪ್ರಸಾರಣೆ ಹೆಚ್ಚಿಸಿ ಸೊಂಟ ನೋವಿನ ತೀವ್ರತೆಯನ್ನು ಕಡಿಮೆ ಮಾಡುವುದರಲ್ಲಿ ಇದು ಉಪಯೋಗಿ.
ಬಸ್ತಿಕರ್ಮ
ಗುದದ್ವಾರದ ಮೂಲಕ ಔಷಧಯುಕ್ತ ತುಪ್ಪ ಎಣ್ಣೆಅಥವಾ ಕಷಾಯವನ್ನು ಹಾಕುವುದು ಈ ಚಿಕಿತ್ಸೆ ಸಣ್ಣ ಹಾಗೂ ದೊಡ್ಡ ಕರುಳುಗಳಲ್ಲಿ ಎಂಟರಿಕ್ ನರ್ವಸ್ ಸಿಸ್ಟಮ್ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ನಾಡಿಕಣದಲ್ಲಿ ಏರ್ಪಡುವ ದೋಷಗಳನ್ನು ಸರಿ ಮಾಡಿ ಶಕ್ತಿ ಯನ್ನು ನೀಡುತ್ತದೆ.
Read also : ಗುದ-ಗತ ಖಾಯಿಲೆಗಳು (ಅನೋರೆಕ್ಟಲ್ ರೋಗಗಳು)ಮತ್ತು ಆಯುರ್ವೇದದಲ್ಲಿ ಅದರ ನಿರ್ವಹಣೆ
ಪ್ರಕೋಪಿಸಿದ ವಾತವನ್ನು ಸಹಜ ಸ್ಥಿತಿಗೆ ತರುತ್ತದೆ. ಆಯುರ್ವೇದ ಚಿಕಿತ್ಸೆ ನಂತರ ಉತ್ತಮ ಆಹಾರ ತೆಗೆದುಕೊಳ್ಳುವುದರ ಜತೆ ಹೆಚ್ಚು ವ್ಯಾಯಾಮ ಮಾಡಿದರೆ ಬೆನ್ನು ನೋವು ಮತ್ತು ಸೊಂಟ ನೋವಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯ.
ಡಾ.ಬಿ . ಶಿವಕುಮಾರ್ ಎಂ .ಎಸ್ (ಶಲ್ಯತಂತ್ರ )
ಆಯುಷ್ ಆರೋಗ್ಯ ಮಂದಿರ
ನರಗನಹಳ್ಳಿ ದಾವಣಗೆರೆ
9886624267
