ದಾವಣಗೆರೆ: ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಗಣನೀಯವಾಗಿರುವ ಹಾಗೂ ಸಾಮಾಜಿಕ ಪರಿಕಲ್ಪನೆ ಹಿನ್ನಲೆಯಲ್ಲಿ ಈ ಬಾರಿ ವಿಧಾನಸಭೆ ಮರುಚುನಾವಣೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ರಾಜ್ಯ ವಕ್ಫ್ ಪರಿಷತ್ ಸದಸ್ಯ ಅಬ್ದುಲ್ ಘನಿ ತಾಹೀರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯ ನಿರ್ಣಾಯಕವಾಗಿದ್ದರು ಸಹ ತಮ್ಮ ಹಕ್ಕು ಪಡೆಯುವಲ್ಲಿ ವಿಫಲವಾಗಿದೆ. ಪ್ರತಿಬಾರಿ ಅವಕಾಶಕ್ಕೆ ಎದುರು ನೋಡುತ್ತಿದ್ದೇವೆ. ಅದರೆ, ನಮಗೆ ಅವಕಾಶ ಸಿಗದೆ ವಂಚಿತರಾಗಿದ್ದೇವೆ. ಪ್ರತಿ ಬಾರಿಯು ಅವಕಾಶ ಕೇಳಿದಾಗ ಮುಂದಿನ ಬಾರಿ ಎನ್ನುವ ಬಹು ದೊಡ್ಡ ಭರವಸೆ ನೀಡಿ ನಮ್ಮ ಸಮುದಾಯ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ. ಇದರಿಂದ ನಮ್ಮ ಸಮುದಾಯಕ್ಕೆ ತುಂಬ ನೋವು ತಂದಿದೆ. ಈ ಬಾರಿ ಕಾಂಗ್ರೆಸ್ ಪಕ್ಷದ ವರಿಷ್ಠರು ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡುವ ಮೂಲಕ ಬಸವಣ್ಣ ಮತ್ತು ಅಂಬೇಡ್ಕರ ಅವರ ಆಶಯದಂತೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಆಗ್ರಹಿಸಿದ್ದಾರೆ.
Read also : Crime news|ಗಾಂಜಾ ಮಾರಾಟ:ಇಬ್ಬರು ವಶಕ್ಕೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸಮುದಾಯ ಹೆಚ್ಚಾಗಿದೆ. ಈ ಸಮುದಾಯಗಳು ನಿರ್ಧಾರ ಮಾಡಿ ಮತ ನೀಡಿದ ವ್ಯಕ್ತಿ ಇಲ್ಲಿ ಆಯ್ಕೆಯಾಗಲು ಸಾಧ್ಯ. ಅದರೆ, ಈ ಸಮುದಾಯಗಳಿಂದ ಮಾತ್ರ ಜನಪ್ರತಿನಿಧಿ ಇಲ್ಲಿ ಆಯ್ಕೆಯಾಗುತ್ತಿಲ್ಲ. ಸಾಮಾಜಿಕ ನ್ಯಾಯದ ಕಲ್ಪನೆ ವಿರುದ್ದವಾಗಿದೆ. ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ತನ್ನ ಸಹೋದರನಿಗೆ ಟಿಕೆಟ್ ಕೇಳಿರುವುದು ನ್ಯಾಯ ಸಮ್ಮತವಲ್ಲ. ಅದನ್ನು ಅವರು ಅರಿತು ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗುವಂತೆ ಮಾಡಬೇಕು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬ ವ್ಯಕ್ತಿ ಜನಪ್ರತಿನಿಧಿ (ವಿಧಾನಸಭಾ ಸದಸ್ಯ) ಆಗಲು ಕೈ ಜೋಡಿಸಬೇಕು. ಆ ಮೂಲಕ ಸಮ ಸಮಾಜ ಕಟ್ಟಲು ಕೈ ಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
