Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ದಿನಮಾನ ಪುಸ್ತಕ ವಿಮರ್ಶೆ|ಸಂತೆಯಲ್ಲಿ ನಿಂತ ಮುದುಕಿ-ಅಮ್ಮನ ಸ್ಪರ್ಶದ ಬರಹಗಳು
ಅಭಿಪ್ರಾಯ

ದಿನಮಾನ ಪುಸ್ತಕ ವಿಮರ್ಶೆ|ಸಂತೆಯಲ್ಲಿ ನಿಂತ ಮುದುಕಿ-ಅಮ್ಮನ ಸ್ಪರ್ಶದ ಬರಹಗಳು

ಬಿ.ಶ್ರೀನಿವಾಸ
Last updated: February 11, 2026 7:25 am
ಬಿ.ಶ್ರೀನಿವಾಸ
Share
B.Srinivasa
SHARE

ಮಾತು ಬೆಳ್ಳೀನೂ ಅಲ್ಲ, ಮೌನ ಬಂಗಾರನೂ ಅಲ್ಲ, ಅವೆರೆಡಕ್ಕಿಂತಲೂ ಮೀರಿದ್ದು. ಮಾತು ಆಡಿದರೆ ಮಾತ್ರ ಜಗತ್ತಿಗೆ ಜೀವ ಬರುತ್ತದೆ.ಮಾತೆಂಬುದು ಒಂದು ಬಿಡುಗಡೆ. ಕೃತಿಯ ಪುಟಗಳಲ್ಲಿರುವ ಸಾಲುಗಳು ಸೂಸುವ ಅರ್ಥವಂತಿಕೆ ಇಲ್ಲಿನ ಲೇಖನಗಳಿಗೂ ದಕ್ಕಿದೆ.

‘ಸಂತೆಯಲ್ಲಿ ನಿಂತ ಮುದುಕಿ’ಯ ಬರೆಹಗಳು ಭಾವಾಲಾಪದಲ್ಲಿ ಮಿಂದೆದ್ದ ಚದುರಿದ ಚಿತ್ರಗಳಂತಿವೆ.

ನೆನಪಿನ ದೀಪಮಾಲೆಯ ಬೆಳಕಿನಲ್ಲಿ ಬರುವ ಮಾತುಕತೆಗಳ ವಿವರಗಳು,ವರ್ತಮಾನದ ಕನ್ನಡಿಯಲ್ಲಿ ನಮ್ಮ ಬಿಂಬಗಳನ್ನು ನಾವೇ ನೋಡಿಕೊಳ್ಳುವ ಹಾಗೆ ಮಾಡುತ್ತವೆ.

ಕಥೆಗಾರಿಕೆಯ ಆರಂಭದ ಹಿನ್ನೆಲೆಯನ್ನು ಹೇಳುವ ಲೇಖಕಿ ವೈದೇಹಿ,ನಾನು ಹುಟ್ಟಿ ಬೆಳೆದ ನನ್ನೂರಿನ ನೆಲದ್ದೇ ತುಂಬಾ ಇದೆ ಹೇಳಲಿಕ್ಕೆ.ಅಲ್ಲಿನದ್ದೇ ಇನ್ನೂ ಮುಗಿದಿಲ್ಲ. ಅದು ಮುಗಿಯದೆ ಹೇಗೆ ಈಚೆ ಬರೋದು ನಾನು? ಎಂದು ಕೇಳುವ ಪ್ರಶ್ನೆಗಳಲ್ಲಿ ಲೇಖಕಿಯ ಭಾವ ಕೋಶದಲ್ಲಿ ರಿಜಿಸ್ಟರ್ ಆದ ಪರಿಸರ ಎಷ್ಟೊಂದು ಗಟ್ಟಿಯೆಂಬುದನ್ನು ವಿವರಿಸುತ್ತಾರೆ.

ಧರ್ಮಗ್ರಂಥಗಳ ಗದ್ದಲ,ಕೋಮುಗಲಭೆಗಳನ್ನು ಕಂಡ ಮನಸ್ಸಿಗೆ, ಕಬೀರನ ಮಾತು ನೆನಪಾಗುತ್ತವೆ. ಕಬೀರನು ಹೇಳಿದಂತೆ,’ಪ್ರೇಮ’ಎನ್ನುವ ಎರಡೂವರೆ ಅಕ್ಷರದ ಅರ್ಥವೇ ಇನ್ನೂ ಪೂರ್ತಿಯಾಗಿ ಮಾನವ ಮನಸ್ಸಿಗೆ ಮನವರಿಕೆಯಾಗಿಲ್ಲ.

ಈ ಪುಟ್ಟ ಶಬ್ದವೇ ಹೀಗೆ ತಬ್ಬಲಿ ನಿಂತಿರುವಾಗ ಯಾವ ಮಾತಿನ ಅರ್ಥ ಮನುಷ್ಯ ಮನಸ್ಸಿಗೆ ತಟ್ಟೀತು? ಕಾಲದೇಶಗಳನ್ನು ಕುರಿತ ಲೇಖಚಿತ್ರಗಳ ಕಥನಕಾವ್ಯದ ನಿರೂಪಣೆಯಿಂದ, ಭಾವನಾತ್ಮಕ ದಣಿವಿನಿಂದಾಗಿ ಗಮನಸೆಳೆಯುತ್ತದೆ.

ಒಳಆಕ್ರೋಶ,ಆವೇಶ,ದಣಿವು,ಸಂಘರ್ಷಗಳಿಂದಾಗಿ ಕಂಪಿಸುವ ಮನುಷ್ಯನ ಬದುಕಿನ ಚಿತ್ರಗಳ. ಜೊತೆಗೆ ಬಾಲ್ಯಕಾಲದ ನೆನಪುಗಳಂತೂ ಮಗುವೊಂದು ಅಮ್ಮನ ಸ್ಪರ್ಶದಿಂದ ಪುಳಕಗೊಂಡಂತೆ ಮೂಡಿಬಂದಿವೆ.

ಇದನ್ನೂ ಓದಿ : ಚೂರು ಬಿಂಬ-ಗಟ್ಟಿ ಬಂಧದ ಮನುಷ್ಯ ಶೋಧದ ಕಥನ|ದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸ

ಮನುಷ್ಯತ್ವದ ಜಡತೆಯನ್ನು ಹೋಗಲಾಡಿಸಿ ಆತನನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡುವಂಥ ಕ್ರಿಯಾಶೀಲ ಬರೆಹಗಳು ಈ ಕೃತಿಯು ಅನನ್ಯತೆಯನ್ನು ಸಾರುತ್ತವೆ.

ಪುಸ್ತಕ ವಿಮರ್ಶೆ: ಬಿ.ಶ್ರೀನಿವಾಸ

ಸಂತೆಯಲ್ಲಿ ನಿಂತ ಮುದುಕಿ ಮತ್ತು ಇತರ ಬರಹಗಳು
ಲೇ: ವೈದೇಹಿ
ಅಕ್ಷರ ಪ್ರಕಾಶನ, ಹೆಗ್ಗೋಡು,ಸಾಗರ. 

TAGGED:Diary Book Reviewದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸದಿನಮಾನ-ಪುಸ್ತಕ ವಿಮರ್ಶೆ
Share This Article
Twitter Email Copy Link Print
Previous Article Jagalore ಯುವಕರು ಮೊಬೈಲ್ ಬಿಟ್ಟು ಗ್ರಂಥಾಲಯದ ಕಡೆ ಬನ್ನಿ: ಶಾಸಕ ಬಿ.ದೇವೇಂದ್ರಪ್ಪ ಕರೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಮಹಾನಗರ ಪಾಲಿಕೆ : ಲಿಯಾಖತ್ ಅಲಿ ಎಂ.ಕೆ ರವರಿಗೆ  ಗೌರವ ಸನ್ಮಾನ

ದಾವಣಗೆರೆ  (Davanagere):  ಮಹಾನಗರ ಪಾಲಿಕೆ ಆವರಣದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಮಹಾನಗರಪಾಲಿಕೆ ಹಾಗೂ ಕನ್ನಡ ಪರ…

By Dinamaana Kannada News

Caste survey|ಜಾತಿ ಸಮೀಕ್ಷೆ :ಯಾಕೆ ಬೇಕು ?-2

(ಕಳೆದ ಸಂಚಿಕೆಯಿಂದ ) ಭಾರತ ಸ್ವಾತಂತ್ರ್ಯಪಡೆದ ಮುಕ್ಕಾಲು ಶತಮಾನದ ಈ ಕಾಲಘಟ್ಟದಲ್ಲಿ, ರಾಷ್ಟ್ರವು ಹಲವಾರು ದಿಕ್ಕುಗಳಲ್ಲಿ ಪ್ರಗತಿಯನ್ನು ದಾಖಲಿಸಿದೆ ಎಂದು…

By ಬಿ.ಶ್ರೀನಿವಾಸ

ಪ್ರಕರಣ ದಾಖಲಾಗಿ 48 ಗಂಟೆಯಲ್ಲಿ ಆರೋಪಿ ಬಂಧನ : 5.50 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ದಾವಣಗೆರೆ (Davanagere): ಪ್ರಕರಣ ದಾಖಲಾಗಿ 48 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿ 5.50 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.…

By Dinamaana Kannada News

You Might Also Like

B.sreenevasa
ಅಭಿಪ್ರಾಯ

ಚೂರು ಬಿಂಬ-ಗಟ್ಟಿ ಬಂಧದ ಮನುಷ್ಯ ಶೋಧದ ಕಥನ|ದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸ

By ಬಿ.ಶ್ರೀನಿವಾಸ
Justice Mahavira Karennavara
ಅಭಿಪ್ರಾಯ

ಬಾಲ್ಯ ವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕಾನೂನು:ನ್ಯಾ.ಮಹಾವೀರ ಮ.ಕರೆಣ್ಣವರ

By ನ್ಯಾ.ಮಹಾವೀರ ಮ. ಕರೆಣ್ಣವರ
DAVANAGERE
ಅಭಿಪ್ರಾಯ

ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ-ರಂಗ ಸಾಹಿತ್ಯದ ಅತಿ ಸಣ್ಣ ವಿಶಿಷ್ಟ ನಾಟಕಗಳು

By ಬಿ.ಶ್ರೀನಿವಾಸ
ಬಿ.ಶ್ರೀನಿವಾಸ
ಅಭಿಪ್ರಾಯ

ದಿನಮಾನ-ಪುಸ್ತಕ ವಿಮರ್ಶೆ|ಮನುಷ್ಯನ ಮಹಾಯಾನ:ಬಿ.ಶ್ರೀನಿವಾಸ

By Dinamaana Kannada News ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?