- ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಈ ಕೆಳಗಿನಂತೆ ನಗದು ಬಹುಮಾನ ನೀಡಲಾಗುವುದು:
- ಸ್ಥಾನಬಹುಮಾನ ಮೊತ್ತಪ್ರಥಮ ಬಹುಮಾನರೂ. 25,000/-ದ್ವಿತೀಯ ಬಹುಮಾನರೂ. 15,000/-ತೃತೀಯ ಬಹುಮಾನರೂ. 10,000/-ಸಮಾಧಾನಕರ ಬಹುಮಾನರೂ. 5,000/-
- ಸ್ಪರ್ಧೆಯ ಪ್ರಮುಖ ನಿಯಮಗಳು:
- ವಿಷಯ: ಕೇವಲ ಪೌರಾಣಿಕ ನಾಟಕದ ಪಾತ್ರಗಳಿಗೆ ಮಾತ್ರ ಅವಕಾಶ. ಅರ್ಜಿಯಲ್ಲಿ ನಾಟಕಕಾರ ಮತ್ತು ನಾಟಕದ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು.
- ವಯಸ್ಸು/ಲಿಂಗ: 18 ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ಭಾಗವಹಿಸಬಹುದು.
- ತಯಾರಿ: ಪಾತ್ರದ ವೇಷಭೂಷಣ, ಅಲಂಕಾರ ಮತ್ತು ಸಂಗೀತ ವ್ಯವಸ್ಥೆಯನ್ನು ಸ್ಪರ್ಧಿಗಳೇ ಮಾಡಿಕೊಳ್ಳಬೇಕು.
- ಸಮಯ: ಪ್ರತಿಯೊಬ್ಬರಿಗೂ ಗರಿಷ್ಠ 10 ನಿಮಿಷಗಳ ಕಾಲಾವಕಾಶವಿರುತ್ತದೆ.
- ತೀರ್ಪು: ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ದಿನಾಂಕ ಮತ್ತು ಸ್ಥಳ:
ಸ್ಪರ್ಧೆ ನಡೆಯುವ ದಿನಾಂಕ: 27.03.2026 (ಶುಕ್ರವಾರ)
ಸಮಯ: ಬೆಳಗ್ಗೆ 10:30 ಗಂಟೆಗೆ.
ಸ್ಥಳ: ದೃಶ್ಯಕಲಾ ಮಹಾವಿದ್ಯಾಲಯ (Visual Arts College), ವಿದ್ಯಾನಗರ ರಸ್ತೆ, ದಾವಣಗೆರೆ.
Read also : ಅಗ್ನಿವೀರ್ ನೇಮಕಾತಿಗಾಗಿ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೇನು?
ಆಸಕ್ತ ಕಲಾವಿದರು ತಮ್ಮ ಹೆಸರು, ವಿಳಾಸ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು 20.03.2026 ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ನಿರ್ದೇಶಕರು,
ವೃತ್ತಿ ರಂಗಭೂಮಿ ರಂಗಾಯಣ,
ಕೊಠಡಿ ಸಂಖ್ಯೆ: 38ಎ, ಮೊದಲನೇ ಮಹಡಿ,
ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ,
ದಾವಣಗೆರೆ – 577006.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮೊಬೈಲ್ ಸಂಖ್ಯೆ: 93410-10712
