Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಮ ಸಮಾಜದ ಪಿತಾಮಹಾ ವಿಶ್ವಗುರು ಬಸವಣ್ಣ : ಶ್ರೀ ಬಸವಪ್ರಭು ಸ್ವಾಮೀಜಿ
ತಾಜಾ ಸುದ್ದಿ

ಸಮ ಸಮಾಜದ ಪಿತಾಮಹಾ ವಿಶ್ವಗುರು ಬಸವಣ್ಣ : ಶ್ರೀ ಬಸವಪ್ರಭು ಸ್ವಾಮೀಜಿ

Dinamaana Kannada News
Last updated: May 5, 2024 5:29 am
Dinamaana Kannada News
Share
Basava principles
108ನೇ ವರ್ಷದ ಬಸವ ಪ್ರಭಾತ್ ಪೇರಿಯ ಮೊದಲ ದಿನದ ಜನಜಾಗೃತಿ ಪಾದಯಾತ್ರೆ
SHARE
ದಾವಣಗೆರೆ :  ಬಸವಣ್ಣ ಬರೀ ಲಿಂಗಾಯತರ, ಕನ್ನಡಿಗರ ಸ್ವತ್ತು ಅಲ್ಲ, ಇಡೀ ಮಾನವ ಕುಲಕ್ಕೇ ಬೇಕಾಗಿರುವಂತಹ ವಿಶ್ವಗುರು. ಎಲ್ಲರ ಪರವಾಗಿ ಹೋರಾಟ ಮಾಡಿದ ಮಹಾ ಮಾನವತವಾವಾದಿ ಎಂದರೆ ಅದು 12ನೇ ಶತಮಾನದ ಬಸವಣ್ಣನವರು ಎಂದು ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ವಿರಕ್ತಮಠದಲ್ಲಿ   ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ(ವೀರಶೈವ) ತರುಣ ಸಂಘದ ಸಹಯೋಗದಲ್ಲಿ 112ನೇ ವರ್ಷದ ಬಸವ ಜಯಂತ್ಯೋತ್ಸವದ ಅಂಗವಾಗಿ ನಡೆದ  108ನೇ ವರ್ಷದ ಬಸವ ಪ್ರಭಾತ್ ಪೇರಿಯ ಮೊದಲ ದಿನದ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬಸವ ತತ್ವಗಳ ಪಾಲನೆಯಿಂದ ಸಮೃದ್ಧ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಕಾಯಕ ತತ್ವ, ದಾಸೋಹ ತತ್ವದಿಂದ, ಬಸವ ತತ್ವ ಪಾಲನೆಯಿಂದ ದೇಶದ ಉದ್ಧಾರ ಸಾಧ್ಯ. ಇಂತಹ ತತ್ವಗಳನ್ನು ಪ್ರತಿಯೊಬ್ಬರೂ ಕೂಡಾ ಆಚರಣೆ ಮಾಡೋಣ. ಇಂತಹ ತತ್ವಗಳನ್ನು ಮನೆ ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ 108 ವರ್ಷಗಳಿಂದ ಈ ದಾವಣಗೆರೆಯ ವಿರಕ್ತಮಠದಿಂದ ಬಸವ ಪ್ರಭಾತ್ ಪೇರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಬಸವ ಜಯಂತಿ ಆಚರಣೆ 1913ರಲ್ಲಿ ಮೊಟ್ಟಮೊದಲು ಪ್ರಾರಂಭವಾಗಿದ್ದು ದಾವಣಗೆರೆಯ ವಿರಕ್ತಮಠದಿಂದ. ಈ ಬಸವ ಪ್ರಭಾತ್ ಪೇರಿ ಆರಂಭವಾಗಲು ಕಾರಣ ಹರ್ಡೆಕರ್ ಮಂಜಪ್ಪನವರು, ಜಯದೇವ ಜಗದ್ಗುರುಗಳು, ಮೃತ್ಯುಂಜಯ ಅಪ್ಪಗಳು.  ಅಂದಿನ ಬ್ರಿಟೀಷರ ಕಾಲದಲ್ಲಿ ಯಾರೂ ಸಹಾ ಜನರು ಸೇರುವಂತಿರಲಿಲ್ಲ. ಜನ ಸೇರಿ ಸಭೆ ನಡೆಸಿದರೂ ಎಂದರೆ ಬ್ರಿಟೀಷರು ಗುಂಡೇಟಿಗೆ ಬಲಿ ಆಗಬೇಕಿತ್ತು. ಇವರೆಲ್ಲ ಒಗ್ಗಟ್ಟಾದರೂ ಎಂದರೆ ಇವರಿಗೆ ಸ್ವಾತಂತ್ರ ಕೊಡಬೇಕು ಎಂದು ಯಾರಿಗೂ ಒಗ್ಗಟ್ಟಾಗಿ ಇರಲು ಬಿಡುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಮಹಾರಾಷ್ಟದಲ್ಲಿ ಬಾಲಗಂಗಾಧರ ತಿಲಕ್ ಅವರು ಗಣೇಶನ ಹಬ್ಬ ಮಾಡಿ ಸಾವಿರಾರು ಜನರನ್ನು ಸೇರಿಸಿ ಸ್ವಾತಂತ್ರ ಚಳುವಳಿಗೆ ಜನರನ್ನು ಸಂಘಟನೆ ಮಾಡಿದರು.
ಅದೇ ರೀತಿ 1917ರಲ್ಲಿ ಹರ್ಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಬಸವ ಪ್ರಭಾತ್ ಪೇರಿಯನ್ನು ಆರಂಭಿಸಿದರು ಎಂದರು.
ಬಸವಣ್ಣನವರ ವಚನಗಳೇ ಇಂದಿನ ಸಂವಿಧಾನವಾಗಿದೆ. ಅವರು ನೀಡಿದ ಸಮಾನತೆ, ಕಾಯಕ, ದಾಸೋಹ, ವಿಶ್ವ ಪ್ರೇಮ ಎಲ್ಲವೂ ಇಂದಿನ ಸಂವಿಧಾನದಲ್ಲಿವೆ. ಅಂತಹ ಬಸವಣ್ಣನವರನ್ನು ಬ್ರಿಟೀಷರು ಮೊಟ್ಟಮೊದಲ ಪ್ರಜಾ ಪ್ರಭುತ್ವದ ಪರಿಕಲ್ಪನೆಯ ಪಿತಾಮಹ ಎಂದು ಅರ್ಥ ಥೇಮ್ಸ್ ನದಿ ದಂಡೆಯ ಮೇಲೆ ಬಸವಣ್ಣವರ ಪ್ರತಿಮೆಯನ್ನು ಸ್ಥಾಪನೆ ಮಾಡಿದರು.
ಬಸವಣ್ಣನವರು ವಿದೇಶದವರಿಗೆ ಅರ್ಥವಾಗುತ್ತಿದ್ದಾರೆ. ಆದರೆ ನಮ್ಮ ದೇಶ, ರಾಜ್ಯದ ಜನತೆಗೆ ಅರ್ಥವಾಗದೇ ಇರುವುದು ಬೇಸರದ ಸಂಗತಿ. ಬಸವಣ್ಣನವರ ತತ್ವಗಳನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ, ಯಾರು ಆಚರಣೆ ಮಾಡುತ್ತಾರೋ ಅವರು ಎಂದಿಗೂ ನೋವನ್ನು ಕೊಡಲು ಹೋಗುವುದಿಲ್ಲ. ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವವರು ಮನೆಯಲ್ಲಿನ ತಂದೆ-ತಾಯಿ, ಅತ್ತೆ-ಮಾವ, ಅವರ ಕುಟುಂಬದವರನ್ನು ಪ್ರೀತಿ ಮಾಡುತ್ತಾರೆ. ಬಸವ ತತ್ವ ಎಲ್ಲಿ ಇರುತ್ತೋ ಅಲ್ಲಿ ಪ್ರೀತಿ, ಶಾಂತಿ, ನೆಮ್ಮದಿ ಇರುತ್ತದೆ. ಇದರಿಂದ ಸುಖೀ ಕುಟುಂಬ, ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಬಸವ ತತ್ವ ಪಾಲನೆ ಮಾಡುತ್ತಾರೋ ಅಲ್ಲಿ ಯಾವುದೇ ದೇಶ ದೇಶಗಳ ಯುದ್ಧಗಳು ಆಗುವುದಿಲ್ಲ, ಮನೆಯಲ್ಲಿಯೂ ಯುದ್ದಗಳು ಆಗುವುದಿಲ್ಲ ಮನೆ, ದೇಶಗಳಲ್ಲಿ ಜಗಳಗಳು ಇರಬಾರದು ಎಂದರೆ ಎಲ್ಲರೂ ಸಹಾ ಬಸವ ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
 ಗುರುಮಠಕಲ್ ಮುರುಘಶಾಂತವೀರ ಸ್ವಾಮೀಜಿ,  ಹಿರಿಯೂರಿನ ಆದಿ ಜಾಂಭವ ಮಠದ ಷಡಾಕ್ಷರಿಮುನಿ ಮಹಾಸ್ವಾಮೀಜಿ,   ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ, ಕುದರಿ ಉಮೇಶ, ಚನ್ನಬಸವ ಶೀಲವಂತ್, ಮಹಾದೇವಮ್ಮ, ಮಹಾಲಿಂಗೇಶ್ವರ, ಶಿವಬಸಮ್ಮ, ವೀಣಾ ಮಂಜುನಾಥ, ಮಲ್ಲಿಕಾರ್ಜುನ್, ಜಯರಾಜ್,  ಗಾಂಧಿನಗರದ ಬಿ.ಎಚ್.ವೀರಭದ್ರಪ್ಪ, ಮಲ್ಲಿಕಾರ್ಜುನ್, ಹನುಮಂತಪ್ಪ, ವಿರಕ್ತಮಠ ಶಾಲೆಯ ರೋಷನ್, ಬಕ್ಕೇಶ್ವರ ಶಾಲೆ ಶಿಕ್ಷಕರು, ಶರಣಬಸವ, ಕೀರ್ತಿ, ಕುಮಾರಸ್ವಾಮಿ, ಶ್ರೀಮಠದ ಭಕ್ತರು ಭಾಗವಹಿಸಿದ್ದರು. ಬಸವ ಕಲಾಲೋಕದವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
TAGGED:Building a prosperous society by following Basava principles.dinamaana.comLatest Kannada Newsಕನ್ನಡ ಸುದ್ದಿದಿನಮಾನ.ಕಾಂಬಸವ ತತ್ವಗಳ ಪಾಲನೆಯಿಂದ ಸಮೃದ್ಧ ಸಮಾಜ ನಿರ್ಮಾಣ.
Share This Article
Twitter Email Copy Link Print
Previous Article Davangere Congress ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಬೆಂಬಲಿಸಿ : ಪ್ರಿಯಾಂಕ ಗಾಂಧಿ
Next Article sanduru -14 ಸೊಂಡೂರಿನ ಕಗ್ಗತ್ತಲೆಯ ಕಥನಗಳು-14 ಹುಟ್ಟಿ ಬೆಳೆದ ಮನೆಯ ಬುನಾದಿ ಮಣ್ಣು 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸೊಂಡೂರಿನ ಕಗ್ಗತ್ತಲೆಯ ಕಥನಗಳು-23    ಒಂದಿನಾ…ಮಣ್ಣಾಕ ಹೋಗದು!

ಬಡವರಾಗಿ ಹುಟ್ಟಿಬಿಟ್ಟೀವಿ...ಏನ್ ಮಾಡದು ಹಂಗಾ ಒಂದಿನಾ...ಮಣ್ಣಾಕ ಹೋಗದು! ಹೀಗೆ ನಗುನಗುತ್ತಲೇ ಸಾವಿನ ಕುರಿತು ಮಾತನಾಡುವ ಆಕೆ ಕೂಡ ಗಣಿ ಕೆಲಸ…

By Dinamaana Kannada News

ksrtc bus | ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ

ದಾವಣಗೆರೆ (Davanagere) :  ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಮೇ.20 ರಂದು  ನಡೆಯಲಿರುವ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು…

By Dinamaana Kannada News

ರಾಜಕಾರಣದಲ್ಲಿ ಬೆಳೆಯುವವರಿಗೆ ಅಡ್ಡಿಪಡಿಸಬೇಡಿ : ಜಿ. ಬಿ. ವಿನಯ್ ಕುಮಾರ್

ದಾವಣಗೆರೆ (Davanagere): ರಾಜಕಾರಣದಲ್ಲಿ ನಮ್ಮ ಸಮಾಜದ, ಶೋಷಿತ ವರ್ಗದವರನ್ನು ಬೆಳೆಯುತ್ತಿರುವವರಿಗೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬೇಡಿ. ಅವರನ್ನೂ ಪ್ರೋತ್ಸಾಹಿಸಿ ಬೆಳೆಸಿ.  ನಿಮ್ಮಲ್ಲಿರುವ…

By Dinamaana Kannada News

You Might Also Like

blood donation camp
ತಾಜಾ ಸುದ್ದಿ

ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ

By Dinamaana Kannada News
Applications invited
ತಾಜಾ ಸುದ್ದಿ

ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಜಿ.ಪಂ ಸಿಇಓ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?