Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ತಂಬಾಕು ಸೇವನೆ ಇಲ್ಲವಾಗಿಸುವುದು ಇಂದಿನ ಅತ್ಯಗತ್ಯ  : ನ್ಯಾ. ರಾಜೇಶ್ವರಿ  ಎನ್. ಹೆಗಡೆ
Blog

ತಂಬಾಕು ಸೇವನೆ ಇಲ್ಲವಾಗಿಸುವುದು ಇಂದಿನ ಅತ್ಯಗತ್ಯ  : ನ್ಯಾ. ರಾಜೇಶ್ವರಿ  ಎನ್. ಹೆಗಡೆ

Dinamaana Kannada News
Last updated: June 2, 2024 5:14 am
Dinamaana Kannada News
Share
Davanagere
Davanagere
SHARE

ದಾವಣಗೆರೆ:  ಮಾನವಾಭಿವೃದ್ಧಿಗೆ ಕಂಟಕವಾಗಿರುವ ತಂಬಾಕು ಸೇವನೆಯ ಪಿಡುಗನ್ನು ಸಂಪೂರ್ಣವಾಗಿ ಇಲ್ಲವಾಗಿಸಿವುದು ಇಂದಿನ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ  ಎನ್. ಹೆಗಡೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ವಕೀಲರ ಸಂಘ, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್ ಹಾಗೂ ವಿ.ಎಸ್ ಪ್ಯಾರಾಮೆಡಿಕಲ್ ಕಾಲೇಜ್,   ಆಶ್ರಯದಲ್ಲಿ  ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯು 1987 ರಿಂದ ಮೇ-31ನ್ನು “ವಿಶ್ವ ತಂಬಾಕು ರಹಿತ ದಿನ”ವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರತಿ ಒಂದೊಂದು ಘೋಷಣಾ ವಾಕ್ಯದೊಂದಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಸಾವು-ನೋವುಗಳು, ವಿವಿಧ ಅಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುವುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ದಿನವನ್ನು  ಆಚರಿಸಲಾಗುತ್ತಿದೆ.

ತಂಬಾಕು ಪ್ರತಿ ವರ್ಷ ವಿಶ್ವದಾದ್ಯಂತ 8 ಮಿಲಿಯನ್ ಜೀವಗಳನ್ನ ತೆಗೆದುಕೊಳ್ಳುತ್ತಿದೆ, ಅದೇ ರೀತಿ ತಂಬಾಕು ಉದ್ಯಮವು ಹೊಸದಾಗಿ 8 ಮಿಲಿಯನ್ ಬಳಕೆದಾರರನ್ನು ಹುಡುಕುತ್ತಿದೆ. ಸುಮಾರು 15000 ಕ್ಕೂ ಹೆಚ್ಚು ಸುವಾಸನೆ ಭರಿತ ಉತ್ಪನ್ನಗಳನ್ನು ತಯಾರಿಸಿ ಮಕ್ಕಳನ್ನು ಆಕರ್ಷಿತಗೊಳಿಸುವುದಾಗಿದೆ. ತಂಬಾಕು ಕಂಪನಿಯವರು ಸಾಮಾಜಿಕ ಮಾಧ್ಯಮ ಹಾಗೂ ಮಾರ್ಕೇಟಿಂಗ್ ಮುಖಾಂತರ ಮಕ್ಕಳನ್ನು ಪ್ರೇರೇಪಿಸುವುದು.

ನಗರ ಪ್ರದೇಶಗಳಲ್ಲಿ ಯುವಕರಿಗೆ ಉಚಿತವಾಗಿ ತಂಬಾಕು ಉತ್ಪನ್ನಗಳನ್ನು ನೀಡಿ ದಾಸರನ್ನಾಗಿ ಮಾಡುವುದು ಶಾಲೆ, ಕಾಲೇಜುಗಳ ಬಳಿಯಲ್ಲಿ ಹೆಚ್ಚಿನದಾಗಿ ಪ್ರಚಾರ ನೀಡಿ ಮಕ್ಕಳನ್ನು ಆಕರ್ಷಿಸುವುದು. ತಂಬಾಕು ಉದ್ಯಮವು ಯುವಕರಲ್ಲಿ ಹಸ್ತಕ್ಷೇಪ ತೊರಿಸುವ ಮುನ್ನ ಜಾಗೃತರಾಗಿ, ಯುವ ಜನಾಂಗಕ್ಕೆ, ತಂದೆ ತಾಯಂದಿರಲ್ಲಿ, ಸಾರ್ವಜನಿಕರಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸಿ ತಂಬಾಕು ಮುಕ್ತ ಯುವ ಪೀಳಿಗೆಯನ್ನಾಗಿಸುವುದು ವಿಶ್ವ ತಂಬಾಕು ರಹಿತ ದಿನಾಚರಣೆಯ ಉದ್ದೇಶವಾಗಿದೆ ಎಂದರು ತಿಳಿಸಿದರು.

ಈ ವರ್ಷ “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು” ಎಂಬ ಘೋಷವಾಕ್ಯದಡಿ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿ ನಿತ್ಯ 293 ಮಕ್ಕಳು 13 ರಿಂದ 15 ರ ವಯೋಮಾನದವರು ಹೊಸದಾಗಿ ತಂಬಾಕು ಸೇವನೆಗೆ ದಾಸರಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ 2022 ರ À ವರದಿಯ ಪ್ರಕಾರ ವಿಶ್ವದಾದ್ಯಂತ 37 ಮಿಲಿಯನ್ ಮಕ್ಕಳು ಯಾವುದಾದರೂ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗೆ ತುತ್ತಾಗಿ ನಮ್ಮ ಯುವ ಸಮೂಹವೇ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಇನ್ನು ಹೆಚ್ಚಿನ ಮಟ್ಟದಲ್ಲಿ ತಂಬಾಕು ಉತ್ಪನ್ನಗಳ ಜಾಗೃತಿ ಕಾರ್ಯಕ್ರಮಗಳಿಗೆ ನಾವೆಲ್ಲರು ಕೈಜೋಡಿಸೋಣ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹಾವೀರ್ ಮ. ಕರೆಣ್ಣ ಅವರು ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿ,  ತಾತ್ಕಾಲಿಕವಾಗಿ  ಸಿಗುವ ಸಂತೋಷ, ಮೋಜು, ಮಸ್ತಿ ಸಿಗುವ ಕಾರಣಕ್ಕೆ  ಯುವ ಪೀಳಿಗೆಗಳು ತಂಬಾಕಿಗೆ  ದಾಸರಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಯುವಜನರು ತಂಬಾಕಿನಿಂದ ದೂರ ಇರಬೇಕು. ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ, ಇದು ಕೇವಲ ಜೀವನ ಆಲ್ಲದೆ ಆರ್ಥಿಕ ನಷ್ಟವನ್ನೂ ತರುತ್ತದೆ. ಆದ್ದರಿಂದ ತಂಬಾಕಿನಿಂದ ದೂರವಿದ್ದು ನಮ್ಮ ದೇಹದ ಶ್ವಾಸಕೋಶ ಕಾಪಡುವಲ್ಲಿ ನಾವೆಲ್ಲರು ಶ್ರಮಿಸೋಣ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಅಧ್ಯಕ್ಷತೆ ವಹಿಸಿದ್ದರು.  ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ,  ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ.ಎಸ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾಗೇಂದ್ರಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್ ಅರುಣಕುಮಾರ್, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ  ಕಾರ್ಯಕ್ರಮಾಧಿಕಾರಿ ಡಾ.ತಿಪ್ಪೇಸ್ವಾಮಿ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್.ಡಿ.ಎಂ, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಡಾ.ಮೃತ್ಯುಂಜಯ ಎನ್ ಹಿರೇಮಠ, ಪ್ರಾಚಾರ್ಯರಾದ ಡಾ.ಜ್ಞಾನೇಶ್ವರ್.ಎಲ್.ಎಂ, ವಿ.ಎಸ್.ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಶ್ವೇತಾ ರಘುನಾಥ್, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

TAGGED:Davangere Newsdinamaana.comLatest Kannada Newsಕನ್ನಡ ಸುದ್ದಿ ದಿನಮಾನ.ಕಾಂದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article THE TEAM ACADAMY THE TEAM ACADEMY ವಿದ್ಯಾರ್ಥಿ ಫಕ್ಕಿರೇಶ್‌ ಟಿ ರಾಜ್ಯಕ್ಕೆ 160 ನೇ ರ‍್ಯಾಂಕ್
Next Article davangere ಪೋನ್‌ ಪೇ ಮೂಲಕ ಲಂಚ ಸ್ವೀಕಾರ ಆರೋಪ : ಪೊಲೀಸ್‌ ಹನುಮಂತಪ್ಪ ವಶಕ್ಕೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere : ಟ್ರಾಕ್ಟ್‌ರಗಳಿಗೆ ಕೇಜ್ ವ್ಹೀಲ್ ಹಾಕಿ ರಸ್ತೆಗೆ ಇಳಿದರೆ ಕ್ರಮ : ಜೆ.ಸಂಜೀವ್ ಕುಮಾರ್

ದಾವಣಗೆರೆ  (Davanagere): ಗ್ರಾಮೀಣ ಭಾಗದಲ್ಲಿ ಟ್ರಾಕ್ಟ್‌ರಗಳಿಗೆ  ಕೇಜ್ ವ್ಹೀಲ್ ಹಾಕಿಕೊಂಡು ಸಾರ್ವಜನಿಕ ರಸ್ತೆಗಳನ್ನು ಹಾಳುಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ…

By Dinamaana Kannada News

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ (Davanagere) : ಕರ್ನಾಟಕ ಆರ್ಯವೈಶ್ಯ ಸಮುದಾಯ  ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು…

By Dinamaana Kannada News

ಸರ್ಕಾರಿ ಐಟಿಐ ಕಾಲೇಜಿನಿಂದ ಚುನಾವಣಾ ಮತದಾನ ಜಾಥಾ

ದಾವಣಗೆರೆ :  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಅವರು ಮತದಾನ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?