ಹರಿಹರ: ಹರಿಹರದ ಕೃಷ್ಣಪ್ಪ ಭವನ ಮೈತ್ರಿವನದಲ್ಲಿ ಜೂನ್ ೯ ರಂದು ಡಾ.ಬಿ.ಆರ್.ಅಂಬೇಡ್ಕರವರ ೧೩೩ನೇ, ಪ್ರೊ.ಬಿ.ಕೃಷ್ಣಪ್ಪ ನವರ ೮೬ನೇ ಜನ್ಮ ದಿನಾಚರಣೆ ಹಾಗೂ ದ.ಸಂ.ಸಯ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ದಸಂಸನ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಸಾಹಿತಿಗಳು ಹಾಗೂ ಪ್ರಗತಿ ಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಉದ್ಘಾಟಿಸಲಿದ್ದು, ಫಾದರ್ಜಾರ್ಜ್ ಕೆ.ಎ ಆರೋಗ್ಯ ಮಾತೆಯ ಬಸಿಲಿಕ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ದಸಂಸನ ರಾಜ್ಯ ಸಂಘಟನಾ ಸಂಚಾಲಕರಾದ ನಾಗರಾಜ್ ಮುಂಡರಗಿ, ಎಸ್.ಪಕೀರಪ್ಪ ಮುಂಡಗೋಡ, ಬಿ.ಎಸ್.ಗಂಗಾಧರಪ್ಪ, ಬಸವರಾಜ್ ನಾಗಮಂಗಲ, ವೇಂಕಟೇಶ್ ನಾಗಮಂಗಲ, ರಮೇಶ್ಎಸ್.ಮಾದರ್, ದಸಂಸನ ರಾಜ್ಯ ಖಜಾಂಚಿ ಬಿ.ಎ.ಕಾಟ್ವೆ, ರಾಜ್ಯ ಮಹಿಲಾ ಸಂಚಾಲಕಿ ರತ್ನಮ್ಮ ಸೇರಿದಂತೆ ಇತರರು ಬಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನ್ಯಾಯಾಲಯದಲ್ಲಿ ಅಧಿಕೃತ ದಸಂಸ ನಮ್ಮದೆ ಎಂದು ಆದೇಶವಿದ್ದರೂ ಆನೇಕರು ನಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಇದು ಕೃಷ್ಣಪ್ಪನವರಿಗೆ ಮಾಡಿದ ದ್ರೋಹ ಎಂದ ಅವರು ಎಲ್ಲಾ ಸಂಘಟನೆ ಒಗ್ಗಾಟ್ಟಾಗಿ ಹೋರಾಟ ಮಾಡಬೇಕು ಎನ್ನುವುದು ನಮ್ಮ ಸಂಘಟನೆಯ ಆಶಯವಾಗಿದೆ ಇಗಲೂ ಅದಕ್ಕೆ ನಾವು ಬದ್ದರಾಗಿದ್ದೇವೆ ಎಂದರು.
ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಐರಣಿ ಹನುಮಂತಪ್ಪ, ತಿಪ್ಪಣ್ಣಕಡ್ಲೆಗೊಂದಿ, ಚೌಡಪ್ಪ ಬಾನುವಳ್ಳಿ, ನಾಗರಾಜ್ ಸೇರಿದಂತೆ ಇತರರಿದ್ದರು.