Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು : ಪ್ರೊ.ಕೆ.ಎಸ್.ಭಗವಾನ್
ತಾಜಾ ಸುದ್ದಿ

ರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು : ಪ್ರೊ.ಕೆ.ಎಸ್.ಭಗವಾನ್

Dinamaana Kannada News
Last updated: June 9, 2024 4:58 pm
Dinamaana Kannada News
Share
davanagere DSS
ಹರಿಹರದ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರವರ 133ನೇ, ಪ್ರೊ.ಬಿ.ಕೃಷ್ಣಪ್ಪ ನವರ 86ನೇ ಜನ್ಮ ದಿನಾಚರಣೆ ಹಾಗೂ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಉದ್ಘಾಟಿಸಿದರು.
SHARE

ಹರಿಹರ:  ರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ರಾಮ ಪುರೋಹಿತನಿಗೆ ಹುಟ್ಟಿದ್ದು, ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್‍ರವರು, ಈ ಮಾತಿಗೆ ತಮ್ಮ ಬಳಿ ಪುರಾವೆಗಳಿವೆ ಎಂದು ಹೇಳಿದ್ದಾರೆ.

ನಗರದ ಹೊರವಲಯದ ಕೃಷ್ಣಪ್ಪ ಭವನದ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಯಿಂದ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರವರ 133ನೇ, ಪ್ರೊ.ಬಿ.ಕೃಷ್ಣಪ್ಪ ನವರ 86ನೇ ಜನ್ಮ ದಿನಾಚರಣೆ ಹಾಗೂ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಾಣದ ರಾಮ ದಶರಥ ಮಹಾರಾಜರ ಮಗ ಎಂಬುದಷ್ಟೆ ತಿಳಿದ ವಿಷಯವಾದರೂ ರಾಮ ದಶರಥ ಮಾಹಾರಾಜರಿಂದ ಹುಟ್ಟಿಲ್ಲ, ಬದಲಾಗಿ ಪುರೋಹಿತನೊಬ್ಬನಿಂದ ಹುಟ್ಟು ಕಂಡನು, ಅದೇ ರೀತಿ ಮಹಾಭಾರತದ ವಿಷಯಕ್ಕೆ ಬಂದರೆ ಮಕ್ಕಳು ಹುಟ್ಟಿಸಲಾಗಲ್ಲ ಎಂದು ಶಾಪಗ್ರಸ್ಥನಾಗಿದ್ದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐವರು ಪಾಂಡವ ಸಹೋದರರ ತಂದೆ ಕುರು ರಾಜ್ಯದ ರಾಜ ಪಾಂಡು ಎಂದಿದ್ದರೂ ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳ ಅನುಗ್ರಹದಿಂದ ಎಂದು ಭಗವಾನ್ ಹೇಳಿದರು.

ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಈ ಪುರಾಣಗಳು ಹಾಗೂ ಮನುಸ್ಮøತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ, ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ ಎಂದರು.

ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮøತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ, ಆದರೆ ಕೆಲವರು ಪುರಾಣ, ಮನುಸ್ಮøತಿಯನ್ನು ತಲೆ ಮೇಲೆ ಹೊತ್ತು ಅದರ ಪ್ರಕಾರ ಆಡಳಿತ ನಡೆಸುತ್ತೇವೆಂದು ಕುಣಿಯುತ್ತಾರೆ ಎಂದರು.

ಅಮೇರಿಕಾದ ಜಗತ್ ಪ್ರಸಿದ್ಧ ಕೊಲಂಬಿಯಾ ವಿಶ್ವವಿದ್ಯಾನಿಲಯದ ಅಧ್ಯಾಪಕರು ಜಗತ್ತಿನ ಶ್ರೇಷ್ಠ ವಿದ್ವಾಂಸ ಡಾ.ಅಂಬೇಡ್ಕರ್ ಎಂದು ನಿರ್ಣಯಿಸಿದ್ದಾರೆ, ಅಂಬೇಡ್ಕರ್‍ರಿಗೆ ತಿಳಿಯದ ವಿಷಯವಿರಲಿಲ್ಲ, ಅವರಿಗೆ ಹಾಗೂ ಅಸ್ಪøಶ್ಯರಿಗೆ ನ್ಯಾಯ ಕೊಡಿಸುವ ಹಂಬಲದಲ್ಲಿ ಅವರು ಜಗತ್ತಿನ ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಿದ್ದರು ಎಂದರು.

ಈಗಿನ ಸಂವಿಧಾನದಲ್ಲಿರುವ ಸ್ವಾತಂತ್ರ, ಸಮಾನತೆ, ಸಹೋದರತ್ವದ ಅಂಶಗಳು ಫ್ರೆಂಚ್ ಕ್ರಾಂತಿಯಿಂದ ಪ್ರೇರಿತವಾಗಿ ಬಂದಿಲ್ಲ, ಬದಲಾಗಿ ಅಂಬೇಡ್ಕರ್‍ರವರು 40 ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಭ್ಯಾಸ ಮಾಡಿದ ಪರಿಣಾಮವಾಗಿದೆ. ಹಿಂದೂ ಧರ್ಮದಿಂದ ಬೇಸತ್ತ ಅಂಬೇಡ್ಕರ್‍ರವರು ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕಿಂತ ಹೆಚ್ಚು ಸಮಾನತೆ ಹಾಗೂ ವೈಜ್ಞಾನಿಕತೆಯನ್ನು ಪ್ರತಿಪಾದಿಸುವ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದರು.

ಬ್ರಾಹ್ಮಣರನ್ನು ಹೊರತುಪಡಿಸಿ ಲಿಂಗಾಯಿತರು, ಕುರುಬರು ಸೇರಿದಂತೆ ಎಲ್ಲಾ ಜಾತಿ, ಜನಾಂಗದವರು ಶೂದ್ರರು ಎಂದು ಪರಿಗಣಿಸಲ್ಪಡುತ್ತಾರೆ, ದಲಿತರೆಂದರೆ ಕೇವಲ ಎಸ್ಸಿ, ಎಸ್ಟಿ ಮಾತ್ರವಲ್ಲ ಎಲ್ಲಾ ಜಾತಿ, ಜನಾಂಗದ ಬಡವರು, ಶೋಷಿತರು ಒಳಗೊಳ್ಳುತ್ತಾರೆಂದರು.

ಕದಸಂಸ ಕಾರ್ಯಕರ್ತರು ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕು, ಭೂಮಿ ಮೇಲಿರುವ ಎಲ್ಲಾ ಮಾನವರು ಸಮಾನರು, ಯಾರೂ ಕೀಳಲ್ಲ, ಮೇಲಲ್ಲ, ನಮ್ಮ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ನಾವೆಲ್ಲಾ ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕು, ಡಾ.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪರ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಭಾರತದ ಮಣ್ಣಿನ ಧರ್ಮ ಎಂದರೆ ಅದು ಬೌದ್ಧ ಧರ್ಮ, ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮಗಳು ಭಾರತಕ್ಕೆ ಹೊರಗಡೆಯಿಂದ ಬಂದ ಧರ್ಮಗಳಾಗಿವೆ ಎಂದ ಅವರು ನಾನು ಕಳೆದ 50 ವರ್ಷಗಳಿಂದ ದೇವಾಲಯಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ, ರಾಜ್ಯದಲ್ಲಿ ಜಾತಿ ಜನಗಣತಿ ಅಂಕಿ, ಅಂಶವನ್ನು ರಾಜ್ಯ ಸರ್ಕಾರ ಪ್ರಕಟಿಸಬೇಕು, ಆ ಮೂಲಕ ಸಣ್ಣ, ಪುಟ್ಟ ಹಾಗೂ ಶೋಷಿತ ಸಮುದಾಯದವರಿಗೆ ಅನ್ನ, ಉದ್ಯೋಗ, ಶಿಕ್ಷಣ ಸಿಗಬೇಕೆಂದರು.

ಅಧ್ಯಕ್ಷತೆವಹಿಸಿದ್ದ ಕದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಹಿಂಸೆ, ಶೋಷಣೆ, ಅಸ್ಪøಶ್ಯತೆ ತಪ್ಪಿಸಿ ಸಮಾನತೆ ಸಾಧಿಸಲು ಬುದ್ಧ ರಾಜ್ಯವನ್ನು ಬಿಟ್ಟನು, ಚಕ್ರವರ್ತಿ ಅಶೋಕ ಯುದ್ಧವನ್ನು ಬಿಟ್ಟನು, ಜ್ಯೋತಿಬಾಪುಲೆ ಮನೆ ಬಿಟ್ಟರು, ಡಾ.ಅಂಬೇಡ್ಕರ್ ಧರ್ಮ ಬಿಟ್ಟರು, ಪ್ರೊ.ಬಿ.ಕೃಷ್ಣಪ್ಪರು ಪ್ರಾಂಶುಪಾಲರ ಹುದ್ದೆ ಬಿಟ್ಟರು. ರಾಜ್ಯದಲ್ಲಿ ಮಹಿಳಾ ಸಮಾನತೆ, ಜಾತ್ಯಾತೀತತೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರೆ ಅದಕ್ಕೆ ಕದಸಂಸ ಕಾರಣ ಎಂದರು.

ಆರೋಗ್ಯ ಮಾತೆ ಚರ್ಚ್‍ನ ಫಾದರ್ ಜಾರ್ಜ ಕೆ.ಎ., ದಸಂಸನ ರಾಜ್ಯ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಕಾಕರ್ಗಲ್, ಬಿ.ಎಸ್.ಗಂಗಾಧರಪ್ಪ, ಬಸವರಾಜ್ ನಾಗಮಂಗಲ, ವೆಂಕಟೇಶ್ ನಾಗಮಂಗಲ, ರಮೇಶ್‍ಎಸ್.ಮಾದರ್, ದಸಂಸನ ರಾಜ್ಯ ಖಜಾಂಚಿ ಬಿ.ಎ.ಕಾಟ್ಕೆ, ರಾಜ್ಯ ಮಹಿಳಾ ಸಂಚಾಲಕಿ ರತ್ನಮ್ಮ, ಬಿ.ಎನ್.ಗಂಗಾಧರಪ್ಪ, ಬಿ.ಎನ್.ರಾಜು, ಬೆಲ್ಲದ ಮರದ ಕೃಷ್ಣಪ್ಪ, ಸಾವಿತ್ರ, ಶಿವಮೊಗ್ಗದ ಏಳುಕೋಟಿ, ಶಿವಬಸಪ್ಪ, ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ತಿಪ್ಪಣ್ಣ ಕಡ್ಲೆಗೊಂದಿ, ಚೌಡಪ್ಪ ಭಾನುವಳ್ಳಿ, ನಾಗರಾಜ್ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪದಾಧಿಕಾರಿಗಳಿದ್ದರು.

TAGGED:Davangere Newsdinamaana.comKannada Newsಕನ್ನಡ ಸುದ್ದಿ ದಿನಮಾನ.ಕಾಂದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere ನರೇಂದ್ರ ಮೋದಿ ಬೆಂಬಲಿಸದಂತೆ ಉಮ್ಮತ್ ಚಿಂತಕರ ವೇದಿಕೆ ಮನವಿ
Next Article sandru -mining Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 50 : ಸಂತೈಸುವವರಿಲ್ಲ..

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ಬೀಜ – ಗೊಬ್ಬರ ಕೃತಕ ಅಭಾವ ಸೃಷ್ಠಿಸಿದಲ್ಲಿ ಕಠಿಣ ಕ್ರಮ : ಡಿಸಿ

ದಾವಣಗೆರೆ (Davanagere): ಮುಂಗಾರು ಮಳೆ ಉತ್ತಮ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಆದ್ದರಿಂದ ವರ್ತಕರು ರೈತರಿಗೆ ಬೇಕಾದ ಬಿತ್ತನೆ…

By Dinamaana Kannada News

ಸರ್ಕಾರಿ ಆಸ್ತಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶಾಸಕ ಕೆ.ಎಸ್.ಬಸವಂತಪ್ಪ

ದಾವಣಗೆರೆ:  ಸರ್ಕಾರಿ ಆಸ್ತಿಗಳಾಗಲಿ ಅಥವಾ ಕಟ್ಟಡಗಳಾಗಲಿ ಇವು ನಮ್ಮ ಆಸ್ತಿಗಳು ಎಂಬ ಭಾವನೆ ಸರ್ವಜನಿಕರಲ್ಲಿ ಎಲ್ಲಿಯವರೆಗೆ ಬರುವುದಿಲ್ಲವೋ, ಅಲ್ಲಿಯವರೆಗೆ ರ್ಕಾರಿ…

By Dinamaana Kannada News

Harihara | ಗುರು ವಂದನಾ ಕಾರ್ಯಕ್ರಮ : 1998 ರ ಹಳೇ ವಿದ್ಯಾರ್ಥಿಗಳಿಂದ ಸಭೆ

ಹರಿಹರ  (Harihara)  : ಶ್ರೀ ನಂದೀಶ್ವರ ಗ್ರಾಮಾಂತರ ಪ್ರೌಢಶಾಲೆಯ 1997-98 ರ ಸಾಲಿನ ಹಳೆಯ ವಿದ್ಯಾರ್ಥಿಗಳು  ನಗರದ ಕ್ಷೇತ್ರನಾಥ ಹರಿಹರೇಶ್ವರ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?