Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಬಂಜಾರ ಭಾಷೆ (Banjara language) ಸಂವಿಧಾನದ ಷೆಡ್ಯೂಲ್‌ನಲ್ಲಿ ಸೇರಿಸಲು ಸಂಘಟಿತರಾಗಬೇಕು : ಎನ್.ಅನಂತನಾಯ್ಕ
ತಾಜಾ ಸುದ್ದಿ

ಬಂಜಾರ ಭಾಷೆ (Banjara language) ಸಂವಿಧಾನದ ಷೆಡ್ಯೂಲ್‌ನಲ್ಲಿ ಸೇರಿಸಲು ಸಂಘಟಿತರಾಗಬೇಕು : ಎನ್.ಅನಂತನಾಯ್ಕ

Dinamaana Kannada News
Last updated: July 29, 2024 5:42 pm
Dinamaana Kannada News
Share
davanagere
ಬಂಜಾರ ಯುವಜನರ (Banjara Youth) ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಶಿಬಿರ
SHARE

ಹರಿಹರ:  ಬಂಜಾರ ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಷೆಡ್ಯೂಲ್‌ನಲ್ಲಿ ಸೇರಿಸುವ ಅಗತ್ಯವಿದೆ ಎಂದು ಹೈಕೋರ್ಟ್ ವಕೀಲ ಎನ್.ಅನಂತನಾಯ್ಕ ಹೇಳಿದರು.

ನಗರದ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪ ಸಭಾಭವನ ((Prof. B. Krishnappa Auditorium)  ದಲ್ಲಿ ಭಾನುವಾರ ನಡೆದ ಬಂಜಾರ ಯುವಜನರ (Banjara Youth)  ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಂಜಾರ ಭಾಷೆಯನ್ನು ಸಂವಿಧಾನದಲ್ಲಿ ಸೇರಿಸಿಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಮುದಾಯದ ಸಂಘ ಸಂಸ್ಥೆಗಳು, ಚಿಂತಕರು ಮತ್ತು ಜನಪ್ರತಿನಿಧಿಗಳು ಸಂಘಟಿತರಾಗಬೇಕೆಂದರು.

ಬಂಜಾರ ಲಂಬಾಣಿ ತಾಂಡಗಳನ್ನು ಸಂಪೂರ್ಣವಾಗಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಬಡತನದ ಕಾರಣಕ್ಕಾಗಿ ಉದ್ಯೋಗ ಹುಡುಕಿ ಬಂಜಾರರು ರಾಜ್ಯ, ಹೊರ ರಾಜ್ಯಗಳ ವಿವಿಧ ಪ್ರದೇಶಗಳಿಗೆ ಗುಳೆ, ವಲಸೆ ಹೋಗುತ್ತಿದ್ದಾರೆ. ಅವರೊಂದಿಗೆ ಕಲಿಯುವ ಮಕ್ಕಳು ಕೂಡ ಶಾಲೆ ತೊರೆದು ಹೋಗುತ್ತಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳಿಗಾಗಿ ಸಂಚಾರಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಈ ದುಡಿಯುವ ಜನರಿಗೆ ಭದ್ರತೆ ಮತ್ತು ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು.

ಬಂಜಾರ ಧರ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರಚಾರಕ್ಕಾಗಿ ಸಾಹಿತ್ಯ ಪ್ರಕಟಣೆ, ಪ್ರಚಾರ ಕಾರ್ಯಗಳು ಆಗಬೇಕು. ನಾಡಿನ ಬಂಜಾರ ಸಾಹಿತಿಗಳು, ಚಿಂತಕರು, ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ಸರ್ಕಾರದ ಬಂಜಾರ ಅಕಾಡೆಮಿಯು ಕಾರ್ಯ ಯೋಜನೆ ರೂಪಿಸಬೇಕು. ಬಲವಂತದ ಮತಾಂತರ ಪ್ರಕರಣ ನಡೆಯದಂತೆ ಕಾನೂನು ಕ್ರಮ ಜರುಗಿಸಬೇಕು.

ಬಂಜಾರ ಯುವಜನರು ಉನ್ನತ ಶಿಕ್ಷಣ, ಉದ್ಯೋಗದ ಅವಕಾಶಗಳನ್ನು ಪಡೆಯಲು ಸಹಕಾರಿ ಆಗುವಂತೆ ಸ್ಪರ್ಧಾತ್ಮಕ ಪರೀಕ್ಷೆ ತರಗತಿ, ವ್ಯಕ್ತಿ ಸಾಮರ್ಥ್ಯ ಹೆಚ್ಚಿಸಲು ತರಬೇತಿಗಳನ್ನು ರೂಪಿಸಬೇಕು. ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಹೆಚ್ಚುವರಿ ಅನುದಾನ ನೀಡಬೇಕು. ಸಮುದಾಯದ ಯುವಜನರಿಗೆ ಶಿಕ್ಷಣ, ಉದ್ಯೋಗ ಒದಗಿಸಲು ನಿಗಮವು ಯೋಜನೆ ರೂಪಿಸಬೇಕು.
ಬಂಜಾರರ ಸಾಂವಿಧಾನಿಕ ಮೀಸಲಾತಿ ಕಿತ್ತು ಕೊಳ್ಳಲು ನಡೆಯುವ ಷ್ಯಡ್ಯಂತರ ಗಳನ್ನು ಎದುರಿಸಲು ಸದಾ ಜಾಗೃತರಾಗಬೇಕು. ಸಂವಿಧಾನ ಸಂರಕ್ಷಣೆಗಾಗಿ ನಾಡಿನ ಶೋಷಿತ ಸಮುದಾಯಗಳು ಆಯೋಜಿಸುವ ಐಕ್ಯ ಅಂದೋಲನಗಳಲ್ಲಿ ಬಂಜಾರರು ಭಾಗವಹಿಸಬೇಕು.

ಇತ್ತೀಚಿಗೆ ತಾಂಡಗಳಲ್ಲಿ ಮದುವೆ, ಹಬ್ಬಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚಗಳಿಗೆ ನಿಯಂತ್ರಣ ಹಾಕಬೇಕು. ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಮುಂದಾಗಬೇಕು ಎಂದರು.

ರಾಜ್ಯದ 26  ಜಿಲ್ಲೆಗಳಿಂದ 108 ಆಯ್ದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಎಐಬಿಎಸ್‌ಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶೈಲಜಾಬಾಯಿ, ಬಂಜಾರ ಸಮಾಜ ದಾವಣಗೆರೆ ಜಿಲ್ಲಾಧ್ಯಕ್ಷ ನಂಜಾನಾಯ್ಕ, ಯುವ ಉದ್ಯಮಿ ಆದರ್ಶ ಯಲ್ಲಪ್ಪ, ಕಾರ್ಮಿಕ ಮುಖಂಡ ವಿಜಯ್ ಜಾದವ್, ಈಶ್ವರ ನಾಯ್ಕ, ಲಕ್ಷ್ಮಣ ರಾಮಾವತ್, ಶೈಲಜಾಬಾಯಿ ಮತ್ತಿತರರು ಉಪಸ್ಥಿತಿ ಇದ್ದರು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere Dalit movement : ದಲಿತ ಚಳವಳಿಗೆ 50 : ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ ಬಿಡುಗಡೆ
Next Article Davangere JJM Medical College : ಗ್ರಾಮೀಣ ವೈದ್ಯರ ಸೇವೆ ಎಲ್ಲರಿಗೂ ಸ್ಪೂರ್ತಿ : ಡಾ. ಸಂಪನ್ನ ಮುತಾಲಿಕ್  

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?

Kannada News | Dinamaana.com | 24-05-2024 ಇಲ್ಲಿನ ಗಣಿ ಬಾಧಿತ ಪ್ರದೇಶಗಳ ಬಹುತೇಕ ಊರುಗಳೆಲ್ಲ ಹಳ್ಳಿಗಾಡಿನ ಊರುಗಳೆ ಆಗಿವೆ.ಇಲ್ಲಿನ…

By Dinamaana Kannada News

Davanagere | ಭದ್ರಾ ಅಚ್ಚುಕಟ್ಟು ಸಮೀಕ್ಷೆಗೆ ಒಳಪಡಿಸಲು ತೇಜಸ್ವಿ ಪಟೇಲ್ ಮನವಿ

ದಾವಣಗೆರೆ (Davanagere): ಭದ್ರಾ ಜಲಾಶಯದಿಂದ ನೀರು ಹರಿಸಲು ಆರಂಭಿಸಿ ಸುಮಾರು 60 ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ತಜ್ಞರ ತಂಡವೊಂದನ್ನು ರಚಿಸಿ…

By Dinamaana Kannada News

Davanagere | ಮಳೆಹಾನಿ : ಸೂಕ್ತ ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ

ದಾವಣಗೆರೆ.ಅ.17 (Davanagere );  ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಹಾಗೂ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು…

By Dinamaana Kannada News

You Might Also Like

Davanagere
ಅಪರಾಧ ಸುದ್ದಿತಾಜಾ ಸುದ್ದಿ

ದಾವಣಗೆರೆ|ಮನೆ ಕಳ್ಳತನ ಪ್ರಕರಣ : ಆರೋಪಿಗಳ ಬಂಧನ

By Dinamaana Kannada News
canara bank davanagere
ತಾಜಾ ಸುದ್ದಿ

ದಾವಣಗೆರೆ|ಸೈಬರ್ ವಂಚನೆಗಳಿಂದ ಗ್ರಾಹಕರು ಎಚ್ಚರ ವಹಿಸಿ 

By Dinamaana Kannada News
avk davanagere
ತಾಜಾ ಸುದ್ದಿ

ದಾವಣಗೆರೆ|ಜೀವ ರಕ್ಷಣಾ ಕೌಶಲ್ಯ ಕಲಿತು ಜೀವ ಉಳಿಸಿ : ಸುಭಾನ್ ಸಾಬ್ ನದಾಫ್

By Dinamaana Kannada News
blood donation camp
ತಾಜಾ ಸುದ್ದಿ

ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?