ದಾವಣಗೆರೆ (Davanagere) ; ಹಗಲು ವೇಳೆ ಮನೆಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿ ಆರೋಪಿಯಿಂದ 1,67,000/-ರೂ ಬೆಲೆಯ 26.83 ಗ್ರಾಂ ಬಂಗಾರ ಹಾಗೂ 2,450/-ರೂ ಬೆಲೆಯ 46.2 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.
ಗೌತಂರಾಜ್ ಬಂಧಿತ ಆರೋಪಿ
ವಿದ್ಯಾನಗರದ ನಿವಾಸಿ ಗಿರೀಶ ಅವರು ಮನೆ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹರಿಹರ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಅವರ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪೆÇಲೀಸ್ ನಿರೀಕ್ಷಕ ದೇವಾನಂದ ರವರ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ವಿರುದ್ದ ಚಿತ್ರದುರ್ಗ,ಶಿವಮೊಗ್ಗ, ಚಿಕ್ಕಮಗಳೂರು, ಗದಗ್, ಕೊಪ್ಪಳ, ಬಳ್ಳಾರಿ, ಮೈಸೂರು, ರಾಯಚೂರು ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೆÇಲೀಸ್ ಠಾಣೆಗಳಲ್ಲಿ 10 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಪಿಎಸ್‍ಐಗಳಾದ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ಹೇಮಾನಾಯ್ಕ್, ಸತೀಶ.ಟಿ.ವಿ, ಚಾಲಕ ರಂಗನಾಥ ಹಾಗೂ ಜಿಲ್ಲಾ ಪೊಲೀಸ ಕಛೇರಿಯ ಇಸ್ಮಾಯಿಲ್ ಪಿಐ, ಮಂಜುನಾಥ ಕಲ್ಲೆದೇವರು ಪಿ.ಎಸ್.ಐ ಸಿಬ್ಬಂದಿಯವರಾದ ಅಖ್ತರ್.ಎಸ್.ಎಂ ನಾಗರಾಜ ಕುಂಬಾರ್, ವೀರೇಶ.ವಿ ಹಾಗೂ ರಾಘವೇಂದ್ರ, ಶಾಂತರಾಜ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Read also : davanagere : ಜಿಲ್ಲಾ ಮಲ್ಟಿ ಪರ್ಪಸ್ ಅಸೋಸಿಯೇಷನ್ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ
ಸಿಬ್ಬಂದಿಯವರನ್ನು ಪೊಲೀಸ ಅಧೀಕ್ಷಕರಾದ ಉಮಾ ಪ್ರಶಾಂತ್, ಹೆಚ್ಚುವರಿ ಪೆÇಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋμï, ಜಿ ಮಂಜುನಾಥ ರವರು ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.