ದಾವಣಗೆರೆ (Davangere District) : ಇತ್ತೀಚಿಗೆ ಚಿಕ್ಕಮಗಳೂರು (Chikmagalur District) ಜಿಲ್ಲೆ ಕಡೂರು ಪಟ್ಟಣದ ಪುಟ್ಟಮ್ಮ ಬೆಂಕಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ಏರ್ಪಡಿಸಿದ್ದ ಐದನೇ ರಾಜ್ಯಮಟ್ಟದ ಯೋಗಾಸನ ಚಾಂಪಿಯನ್ ಶಿಪ್ (State Yogasana Championship) ಸ್ಪರ್ಧಿಯಲ್ಲಿ ನಾನ್ ಮೆಡಿ ಲಿಸ್ಟ್ ಹಾಗೂ ಮೆಡಿ ಲಿಸ್ಟ್ ವಿಭಾಗದಲ್ಲಿ ನಗರದ ಎಸ್ ಎ ಎಸ್ ಎಸ್ ಯೋಗ ಕೇಂದ್ರದ (SASS Yoga Center) ಯೋಗಾ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
50 ರಿಂದ 60 ವರ್ಷದ ವಯೋಮಿತಿಯ ಪುರುಷರ ವಿಭಾಗದಲ್ಲಿ ಚಂದ್ರಶೇಖರಪ್ಪ (ಪ್ರಥಮ ಸ್ಥಾನ) 40ರಿಂದ 50 ವರ್ಷದ ವಯೋಮಿತಿಯ ಮಹಿಳೆಯರು ವಿಭಾಗದಲ್ಲಿ ಶ್ರೀಮತಿ ರೇಖಾ ಚಂದ್ರಶೇಖರ್ (ಪ್ರಥಮ ಸ್ಥಾನ) ಶ್ರೀಮತಿ ವಾಣಿ ಶ್ರೀ ನಾಲ್ಕನೇ ಸ್ಥಾನ, ಶ್ರೀಮತಿ ಲೀಲಾವತಿ ಐದನೇ ಸ್ಥಾನ , ಮಿಡಲಿಸ್ಟ್ ವಿಭಾಗದ 21 ರಿಂದ 35 ವರ್ಷದ ವಯೋಮಿತಿಯ ಮಹಿಳೆಯರ ಭಾಗದಲ್ಲಿ ಶ್ರೀಮತಿ ಲಾವಣ್ಯ ಒಂಬತ್ತನೇ ಸ್ಥಾನ ಹಾಗೂ ಹತ್ತರಿಂದ ಹದಿನೈದು ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕುಮಾರಿ ಅನುಷ್ಕಾ 10ನೇ ಸ್ಥಾನ, 15 ರಿಂದ 21 ವರ್ಷ ವಯೋಮಿತಿಯ ವಿಭಾಗದಲ್ಲಿ ಕುಮಾರ್ ಅಜಯ್ ತೃತೀಯ ಸ್ಥಾನ ಪಡೆದಿದ್ದಾರೆ.
Read also : Davanagere news | ಗೊಲ್ಲರಿಗೆ ಕಾಡುಗೊಲ್ಲ ಜಾತಿಪ್ರಮಾಣ ಪತ್ರ ನೀಡಲು ಮನವಿ
ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗ ಆಚಾರ್ಯ ಡಾಕ್ಟರ್ ಎನ್ ಪರಶುರಾಮ್ ಉಪಸ್ಥಿತರಿದ್ದರು.
ವಿಜೇತರಿಗೆ ಒಕ್ಕೂಟದ ಅಧ್ಯಕ್ಷ ವಾಸು ದೇವರಾಯ್ಕರ್ ಹಾಗೂ ಇತರರು ಶುಭ ಕೋರಿದ್ದಾರೆ.