ಮಲೆಬೆನ್ನೂರು (Davanagere) : ಸೊಳ್ಳೆಗಳಿಂದ ಅನೇಕ ಕಾಯಿಲೆಗಳು ಹರಡುತ್ತಿದ್ದು ಈ ಬಗ್ಗೆ ಜಾಗೃತಿ ವಹಿಸುವಂತೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್ ಸಲಹೆ ನೀಡಿದರು.
ಮಲೇಬೆನ್ನೂರಿನ ಶ್ರೀ ಬೀರಲಿಂಗೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರೋಗವಾಹಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಸೊಳ್ಳೆ ದಿನ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಫೈಲೇರಿಯ. ಮಲೇರಿಯ.ಡೆಂಗ್ಯೂ ಚಿಕನ್ ಗುನ್ಯಾ. ಮೆದುಳು ಜ್ವರ. ಆನೆಕಾಲು ರೋಗ ಇವು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದೆ. ಈ ಹಿನ್ನಲೆಯಲ್ಲಿ ಜಾಗೃತರಾಗಿ ಎಂದು ಕಿವಿಮಾತು ಹೇಳಿದರು.
Read also : Davanagere traffic station | ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ ಪೋಷಕರಿಗೆ 25 ಸಾವಿರ ದಂಡ
ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ತರಬೇತಿಯನ್ನು ಪಿ ಪಿ ಟಿ ಮೂಲಕ ತಾಲೂಕು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ನಡೆಸಿಕೊಟ್ಟರು.
ಪ್ರಾಂಶುಪಾಲರಾದ ಹನುಮಗೌಡರ ಮಾತನಾಡಿ, ನಮ್ಮ ಶಾಲೆಯಲ್ಲಿ ಈ ತರಬೇತಿಯನ್ನು ಆಯೋಜಿಸಿದಕ್ಕೆ ಆರೋಗ್ಯ ಇಲಾಖೆಯವರಿಗೆ ಧನ್ಯವಾದಗಳು. ಇಂತಹ ತರಬೇತಿಗಳು ನಿರಂತರವಾಗಿ ಪರಿಚಯಿಸಬೇಕು ಎಂದು ಹೇಳಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ. ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್. ಕಾಲೇಜಿನ ಉಪನ್ಯಾಸಕರು. ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.