ದಾವಣಗೆರೆ ಸೆ.9 (Davanagere) : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿನ್ನು ಸೆ.15 ರಂದು ಬೆಳಿಗ್ಗೆ 8.30 ರಿಂದ 9.30ವರೆಗೆ ನ್ಯಾಮತಿ ತಾಲ್ಲೂಕಿನಿಂದ ಹರಿಹರ ಪಟ್ಟದ ಮುಖಾಂತರ ರಾಣೆಬೆನ್ನೂರು ತಾಲ್ಲೂಕಿನ ಗಡಿಯವರೆಗೆ ರಚಿಸಲಾಗುವುದು. ಮತ್ತು ಜಿಲ್ಲೆಯ 25 ಗ್ರಾಮ, 2 ಯುಎಲ್‍ಬಿಗಳ ಮೂಲಕ 80 ಕಿ.ಮೀ ಉದ್ದದ ಮಾನವ ಸರಪಳಿನ್ನು ಸುಮಾರು 70 ಸಾವಿರ ಜನರಿಂದ ರಚನೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ದೇಶದ ನಾಗರಿಕರಿಗೆ, ವಿಶೇಷವಾಗಿ ಕರ್ನಾಟಕದ ನಾಗರಿಕರಿಗೆ ಜಾಗೃತಿ ಜಾಥಾ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿಯನ್ನು ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಮೂಲತತ್ವ ಮತ್ತು ಆಶಯಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.
Read also : Davanagere | ಒಳಮೀಸಲಾತಿಗೆ ಜಾರಿಗೆ ಒತ್ತಾಯಿಸಿ ಸೆ.12 ರಂದು ಡಿಎಸ್ಸೆಸ್ ನಿಂದ ಬೃಹತ್ ತಮಟೆ ಚಳವಳಿ
ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಇಚ್ಚಿಸುವ ಸಾರ್ವಜನಿಕರು, ಸಂಘ, ಸಂಸ್ಥೆಗಳು, ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು https://www.