ಹರಿಹರ (Davanagere) : ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಹರಿಹರ ನಗರ ಸಭೆಯ ಪೌರಾಯುಕ್ತ ಪಿ ಸುಬ್ರಹ್ಮಣ್ಯ ಶ್ರೇಷ್ಠಿ ಹೇಳಿದರು.
ನಗರಸಭಾ ಸಭಾಂಗಣದಲ್ಲಿ ಜಿಲ್ಲಾಡಳಿತ ದಾವಣಗೆರೆ, ಹರಿಹರ ನಗರಸಭೆ ವತಿಯಿಂದ ಶೇ 5ರ ಯೋಜನಯಡಿ ವಿಶೇಷ ಚೇತನರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭೆ ಅಧ್ಯಕ್ಷ್ಯೆ ಕವಿತಾ ಮಾರುತಿ ಬೇಡರ್ ಮಾತನಾಡಿ, ವೈದ್ಯ ವೃಂದವು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಡವರ,ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಉಪಯುಕ್ತವಾಗಿದೆ. ಕೋವಿಡ್ ನಂತರ ಆರೋಗ್ಯ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಇಂತಹ ಉಚಿತ ಆರೋಗ್ಯ ಶಿಬಿರವನ್ನು ಪ್ರತಿ ತಿಂಗಳು ಮಾಡುವ ಸದುದ್ದೇಶವಿದೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರ ಸಹಕಾರಿಯಾಗಿದೆ ಸಾವ೯ಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
Read also : Davanagere cyber crime news | ಅಪ್ಲಿಕೇಷನ್ ಡೌನ್ಲೌಡ್ ನೆಪದಲ್ಲಿ 6 ಲಕ್ಷಕ್ಕೆ ಕತ್ತರಿ
ಡಯಾಬಿಟಿಸ್ ಮತ್ತು ಮಧುಮೇಹ, ಹೃದಯರೋಗ, ಎಲುಬು ಮತ್ತು ಕೀಲು, ಹಾಗೂ ನೇತ್ರ ಚಿಕಿತ್ಸಾ ಪರೀಕ್ಷೆ ನಡೆಯಿತು.
ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಕೀಳು ಮೊಳೆ ತಜ್ಞ ಕಿರಣ್ ಕುಮಾರ್, ಡಾ. ನಾಗರಾಜ್, ನೇತ್ರಾ ತಜ್ಞೆ ಡಾ.ಅನುಷ, ನಗರ ಸಭೆಯ ಉಪಾಧ್ಯಕ್ಷ ಎಂ ಜಂಬಣ್ಣ, ನಗರಸಭೆ ಸಿಬ್ಬಂದಿಗಳಾದ ಜಗದೀಶ್ ಬಿ ಆರ್, ಲಕ್ಷ್ಮಣ್, ರವಿಪ್ರಕಾಶ್, ನಗರಸಭೆಯ ಸಿ,ಆರ್,ಪಿ,ಗಳಾದ ಲತಾ, ವೀಣಾ, ಮಮತಾ, ಯು ಆರ್ ಡಬ್ಲ್ಯೂ ಗಳಾದ ಗುರುನಾಥ, ಪುಟ್ಟರಾಜು, ಗಂಗಮ್ಮ, ಹನುಮಂತ, ಇನ್ನು ಮುಂತಾದ ಅಂಗವಿಕಲರುಗಳು ಉಪಸ್ಥಿತರಿದ್ದರು.