ಹರಿಹರ (Harihara) : ನಗರದ ವುಡ್ ಲ್ಯಾಂಡ್ ರಸ್ತೆಯ ಶ್ರೀ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನದಲ್ಲಿರುವ ಚಹಾ ಅಂಗಡಿಯವರು ಪಾತ್ರೆ, ಚಹಾ ಕುಡಿದ ಕಪ್ಪುಗಳನ್ನು ತೊಳೆದ ಕಲುಷಿತ ನೀರನ್ನು ದೇವಸ್ಥಾನದ ಹಿಂದೆ ಹಾದು ಹೋಗುವ ರಸ್ತೆಯ ಪಕ್ಕದಲ್ಲಿರುವ ತೆರೆದ ಚರಂಡಿಗೆ ಬಿಡುತ್ತಿದ್ದಾರೆ. ಇದರಿಂದ ಪರಿಸರ ಕಲುಷಿತಗೊಳ್ಳುತ್ತಿದ್ದು ಕೂಡಲೇ ನಗರಸಭೆಯವರು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಲುಷಿತ ನೀರಿನಿಂದ ಸೊಳ್ಳೇಗಳ ಹೆಚ್ಚಾಗಿದೆ. ಅಲ್ಲದೇ ಸಾರ್ವಜನಿಕರು, ಭಕ್ತರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಪರಿಸರ ದುರ್ವಾಸನೆಯಿಂದ ಕೂಡಿದ್ದು ಪರಿಸರ ಅಭಿಯಂತರರು. ಆರೋಗ್ಯಾಧಿಕಾರಿಗಳು ಅಂಗಡಿಯ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Read also : Davanagere | ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ನೀಡಲು ಅರ್ಜಿ ಆಹ್ವಾನ