ದಾವಣಗೆರೆ (Davanagere): ಕಾರ್ಮಿಕರ ಕಲ್ಯಾಣಕ್ಕೆ ನಮ್ಮ ಸರ್ಕಾರವು ಹಾಗೂ ಕಾಂಗ್ರೆಸ್ ಪಕ್ಷವು ಸದಾ ಬದ್ಧವಾಗಿರುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ತಮ ಗೃಹ ಕಚೇರಿಯ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ದಾವಣಗೆರೆ ಜಿಲ್ಲೆಗೆ 2024-25 ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರು ಹಾಗೂ ವೆಲ್ಡಿಂಗ್ ಕಾರ್ಮಿಕರುಗಳಿಗೆ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸರಬರಾಜದ 1500 ಕಟ್ಟಡ ಕಾರ್ಮಿಕರ ಕಿಟ್ ಹಾಗೂ 800 ವೆಲ್ಟಿಂಗ್ ಕಿಟ್ ಗಳ ಪೈಕಿ 15 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ಗಳನ್ನು ವಿತರಣೆ ಮಾಡಿ ಮಾತನಾಡಿದರು.
ಸರ್ಕಾರದಿಂದ ಕಾರ್ಮಿಕರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ನೊಂದಾಯಿತ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್, ವಿವಾಹ ಸಹಾಯಧನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಮಿಕರುಗಳ ಅಭಿವೃದ್ಧಿಗೆ ಸರ್ಕಾರವು ನಿರಂತರವಾಗಿ ಹಗಲಿರುಳು ಶ್ರಮಿಸುತ್ತಿದೆ. ಕಾರ್ಮಿಕರ ಏನೇ ಸಮಸ್ಯೆಗಳು, ಕುಂದುಕೊರತೆಗಳಿದ್ದರು ನಿಮ್ಮೊಂದಿಗೆ ನಮ್ಮ ಕುಟುಂಬವು ಸದಾ ಬೆನ್ನೆಲುಬಾಗಿ ಇರುವುದು ಎಂದರು.
Read also : ಶಂಕಿತ ಡೆಂಗ್ಯೂ ಗೆ 3 ವರ್ಷದ ಮಗು ಬಲಿ
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.