ದಾವಣಗೆರೆ : ನ್ಯಾಮತಿ ತಾಲೂಕಿನ ಚಿನ್ನಕಟ್ಟೆ -ಶಿವಪುರ ಬಳಿಯ ರಾಜ್ಯ ಹೆದ್ದಾರಿಯಲ್ಲಿ
ಓಮಿನಿ ವ್ಯಾನ್ ಗೆ ksrtc ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಾನ್ ದಲ್ಲಿದ್ದ ಮೂರು ಮೃತಪಟ್ಟಿದ್ದು ಹಲವರಿಗೆ ಗಾಯವಾಗಿರುವ ಘಟನೆ ಗುರುವಾರ ನಡೆದಿದೆ.
ಹರಬಗಟ್ಟದ ನಂಜುಂಡ್ಪ (83), ಸೂರನಗೊಂಡಕೊಪ್ಪದ ದೇವರಾಜ್ (27), ರಾಕೇಶ್ (30) ಮೃತಪಟ್ಟ ರ್ದುದೈವಿಗಳು.
ಆರಕ್ಕೂ ಹೆಚ್ಚು ಜನಕ್ಕೆ ಗಾಯವಾಗಿದ್ದು ತೀವ್ರ ಗಾಯಗೊಂಡ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯವಾದವರಿಗೆ ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.